Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಯಶಸ್ವಿಯಾಗಿ ನೆರವೇರಿದ ಜಾತ್ರೋತ್ಸವ- ಕಹಳೆ ನ್ಯೂಸ್

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ೨ ದಿನ ಜಾತ್ರೋತ್ಸವ ಹಾಗೂ ಪರಿವಾರ ದೈವಗಳ ಗಗ್ಗರ ಸೇವೆ ನಡೆದಿದೆ. ನಿನ್ನೆ ರಂಗ ಪೂಜೆ ,ಭಜನೆ , ನೇಮೋತ್ಸವ ನಡೆದಿದ್ದು, ಜೊತೆಗೆ ಧಾಮಿಕ ಸಭಾ ಕಾರ್ಯಕ್ರಮ ಕೂಡ ನೆರವೇರಿದೆ. ಕಾರ್ಯಕ್ರಮದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜ್‌ನ ಕನ್ನಡ ಉಪನ್ಯಾಸಕರಾದ ಮಹಾವೀರ ಜೈನ್ ಅವರು ಧಾರ್ಮಿಕ ಉಪನ್ಯಾಸವನ್ನು ನೀಡಿದ್ರು. ಈ ವೇಳೆ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾದ ಜತ್ತನ್ನ ಗೌಡ ಏರ್ದೊಟು, ಆಡಳಿತ ಮೋಕ್ತೇಸರರಾದ ಜೀವಂಧರ ಜೈನ್, ವ್ಯವಸ್ಥಾಪನ ಸಮಿತಿ ಅಧಕ್ಷರಾದ ಶ್ರೀನಿವಾಸ ಗೌಡ, ಧಾರ್ಮಿಕ ಉಪನ್ಯಾಸ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು