Recent Posts

Saturday, September 21, 2024
ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಸಮಾಜದ ಹಿತಚಿಂತಕ ಧರ್ಮ ರಕ್ಷಕ ಮಾಳ ಹರ್ಷೇಂದ್ರ ಜೈನ್ ರವರಿಗೆ ಜೈನಮಠ ಮೂಡಬಿದ್ರೆಯಿಂದ ಸನ್ಮಾನ –ಕಹಳೆ ನ್ಯೂಸ್

ಮೂಡಬಿದ್ರೆ : ಉತ್ಸಾಹದ ಚಿಲುಮೆ ಯುವ ಮುಖಂಡ ಹಾಗೂ ಬಿಎಸ್ ಎಂ ಜೈನ್ ಅಸೋಶಿಯೇಶನ್ ನ ಕ್ರಿಯಾಶೀಲ ಪ್ರಧಾನ ಕಾರ್ಯದರ್ಶಿ ಮತ್ತು ತುಳುಕೂಟ ಬೆಂಗಳೂರಿನ ಕೋಶಾಧಿಕಾರಿ ಇವರ ಸಾಮಾಜಿಕ-ಧಾರ್ಮಿಕ ಹಿತ ಚಿಂತನೆ ಹಾಗೂ ಪರೋಪಕಾರಿ ಕಾರ್ಯಕ್ರಮಗಳ ಅಮೋಘ ಸೇವೆಗಾಗಿ ಮೂಡಬಿದ್ರೆಯ ಶ್ರೀ ಮಹಾವೀರ ಭವನ ದಲ್ಲಿ ನಡೆದ ಮುನಿಶ್ರೀ 108 ಶ್ರೀ ದಿವ್ಯ ಸಾಗರ ಮುನಿ ಮಹಾರಾಜರ ಚಾತುರ್ಮಾಸ ಪಿಂಚ್ ಪರಿವರ್ತನಾ ಕಾರ್ಯಕ್ರಮದಲ್ಲಿ ಜೈನಮಠದ ಶ್ರೀಗಳಾದ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮೀಜಿಗಳು ಶ್ರೀ ಮಠದ ವತಿಯಿಂದ ಮತ್ತು ಸಮಾಜದ ಪರವಾಗಿ ಇತ್ತೀಚೆಗೆ ಗೌರವಿಸಿ ಸನ್ಮಾನ ಪತ್ರವನ್ನು ನೀಡಿ ಗೌರವಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹುಚ್ಚ ಸ್ವಾಮೀಜಿಯವರು ಮಾತಾಡುತ್ತಾ ಕಾರ್ಕಳ ತಾಲೂಕಿನ ಮಾಳ ಗ್ರಾಮಗಳ ಗ್ರಾಮದ ಹೆಗ್ಗಡತಿ ಮನೆಯ ಕುಟುಂಬದಲ್ಲಿ ಬಹಳ ಬಡತನದಿಂದ ಜನಿಸಿದ ಹರ್ಷೇಂದ್ರ ರವರು ವಿದ್ಯಾರ್ಥಿ ಜೀವನದಿಂದಲೇ ಪರೋಪಕಾರ ಸಂಘಟನೆ ಮುತ್ತು ಸಮಾಜದಲ್ಲಿ ಬಹಳ ಸಕ್ರಿಯವಾಗಿ ಪಾಲ್ಗೊಂಡು ಯಾವುದೇ ಫಲಾಪೇಕ್ಷೆ ಇಲ್ಲದೆ ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದು, ತನ್ನ ವಿದ್ಯಾಭ್ಯಾಸದ ನಂತರ ದೂರದ ಬೆಂಗಳೂರಿನಲ್ಲಿ ಸುಮಾರು 2 ದಶಕಗಳಿಂದ ದೂರದ ಊರಿಂದ ಯಾವುದೇ ಸಮಾಜದ ವ್ಯಕ್ತಿಗಳು ಸಹಾಯಹಸ್ತ ಕೇಳಿದಾಗ ನಿಷ್ಕಲ್ಮಶ ಮನಸಿಂದ ಸಹಾಯ ಮಾಡುತ್ತಿದ್ದಾರೆ ಹಾಗೆಯೇ ಜೈನ ಧರ್ಮದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿದ್ದು, ಸಮಾಜಕ್ಕೆ ಧರ್ಮಕ್ಕೆ ಹಾಗೂ ವಿಶೇಷವಾಗಿ ಮುನಿಗಳ ಬಗ್ಗೆ ಯಾವುದೇ ರೀತಿಯ ಕೆಟ್ಟ ಅವಹೇಳನಕಾರಿ ಘಟನೆ ಸಂಭವಿಸಿದಾಗ ತಮ್ಮ ಸ್ನೇಹಿತರೊಡಗೂಡಿ ಮುಂಚೂಣಿಯಲ್ಲಿ ನಿಂತು ಧರ್ಮದ ರಕ್ಷಣೆ ಮಾಡುತ್ತಿರುವ ನಮ್ಮ ಹೆಮ್ಮೆಯ ಏಕೈಕ ವ್ಯಕ್ತಿ ಹರ್ಷೇಂದ್ರ ರವರು ಹಾಗೆಯೇ ಮಹಾಮಾರಿ ಕರೋನದ ತುರ್ತು ಸಂದರ್ಭದಲ್ಲಿ ಹಗಲಿರುಳು ತಮ್ಮ ಜೀವದ ಹಂಗು ತೊರೆದು ಕೊರೋನಾ ವಾರಿಯರ್ ಯಾಗಿ ಕೆಲಸ ಮಾಡಿದ್ದು ಬಹಳ ಶ್ಲಾಘನೀಯ ಮತ್ತು ಪ್ರಸಂಶಿನೀಯ ಎಂದರು.

ಜಾಹೀರಾತು

ವೇದಿಕೆಯಲ್ಲಿ ಪಟ್ಟಣಶೆಟ್ಟಿ ಎಂ, ಸುದೇಶ್ ಕುಮಾರ್, ದಿನೇಶ್ ಕುಮಾರ್ ಬೆಟ್ಕೇರಿ, ಮತ್ತು ವ್ಯವಸ್ಥಾಪಕರಾದ ಸಂಜಯಂತ ಕುಮಾರ್ ಜೈನಮಠ ಹಾಗೂ ಬೃಹತ್ ಕೈಗಾರಿಕೋದ್ಯಮಿ ಮಹಾದಾನಿ ಯಾದ ಶ್ರೀ ಅತುಲ್ ಶಾ (ಫೋನ ಮಹಾರಾಷ್ಟ್ರ) ಉಪಸ್ಥಿತರಿದ್ದರು.
ವಲ್ರ್ಡ್ ಅಪ್ರಿಶಿಯೇಷನ್ ಪ್ರಶಸ್ತಿ, ಕೆಂಪೇಗೌಡ ಪುರಸ್ಕಾರ, ಜಿನ ವಾಣಿ ಪುರಸ್ಕಾರ, ಕರೋನಾ ವಾರಿಯರ್ ಪ್ರಶಸ್ತಿ ಹಾಗೂ ಸುಮಾರು 65 ಸಲ ರಕ್ತದಾನ ಪ್ರಯುಕ್ತ ಹಲವಾರು ಪ್ರಶಸ್ತಿ-ಪುರಸ್ಕಾರಗಳು ದೊರಕಿದ್ದು ವಿಶೇಷವಾಗಿದೆ.