Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಯಶಸ್ವಿಯಾಗಿ ನಡೆದ ಶಿವಪ್ರೆಂಡ್ಸ್ ಕುರಾಯ-ಖಂಡಿಗ ಮೈರೋಳ್ತಡ್ಕ-ಬಂದಾರು 5ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ : ಪ್ರಥಮ ಬಹುಮಾನ ಬಾಚಿಕೊಂಡ ಯಜಮಾನ ಪ್ರೆಂಡ್ಸ್ – ಕಹಳೆ ನ್ಯೂಸ್

ಬಂದಾರು : ಶಿವಪ್ರೆಂಡ್ಸ್ ಕುರಾಯ-ಖಂಡಿಗ ಮೈರೋಳ್ತಡ್ಕ-ಬಂದಾರು ಇದರ ಆಶ್ರಯದಲ್ಲಿ 5ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ-2021 ಖಂಡಿಗ ಶಿವಪ್ರೆಂಡ್ಸ್ ಕ್ರೀಡಾಂಗಣದಲ್ಲಿ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಶ್ರೀ ರಘುಪತಿ ಭಟ್.ಸಿ.ಎ.ಬ್ಯಾಂಕ್ ಪದ್ಮುಂಜ ಇವರು ದೀಪ ಬೆಳಗಿಸುವುರ ಮೂಲಕ ಚಾಲನೆ ನೀಡಿದರು. ಸಭಾಧ್ಯಕ್ಷರಾಗಿ ಪ್ರಗತಿಪರ ಕೃಷಿಕರಾದ ಶ್ರೀ ಸುಂದರ ಗೌಡ ಖಂಡಿಗ, ಮುಖ್ಯ ಅತಿಥಿಗಳಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೈರೋಳ್ತಡ್ಕ ಇಲ್ಲಿನ ಶಿಕ್ಷಕರಾದ ಶ್ರೀ ಮಾಧವ ಗೌಡ, ವಾಣಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ ಇಲ್ಲಿನ ಉಪನ್ಯಾಸಕರು ಮತ್ತು ಕ್ರೀಡಾ ಸಂಯೋಜಕರಾದ ಶ್ರೀ ಶಂಕರ್ ರಾವ್ ಬಂದಾರು , ಗ್ರಾ.ಪಂ ಸದಸ್ಯರಾದ ಶ್ರೀ ದಿನೇಶ್ ಗೌಡ ಖಂಡಿಗ ಹಾಗೂ ಭರತೇಶ್ ಗೌಡ. ನೆಲ್ಲಿದಕಂಡ ಉಪಸ್ಧಿತರಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವೇಳೆ ರಾಷ್ಟ್ರಮಟ್ಟದ ತ್ರೋಬಾಲ್ ಕ್ರೀಡಾಪಟು ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಪಂದ್ಯಾಟದಲ್ಲಿ ಯಜಮಾನ ಪ್ರೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ದ್ವೀತಿಯ ಸ್ಥಾನ ಕಣಿಯೂರು ವಾರಿಯರ್ಸ್, ತೃತೀಯ ಸ್ಥಾನ ಶಿವಪ್ರೆಂಡ್ಸ್ ಕುರಾಯ-ಖಂಡಿಗ ಹಾಗೂ ಬೆಸ್ಟ್ ಎಟ್ಯಾಕರ್ ಆಗಿ ನಿಶಾಂತ್ ಮೈರೋಳ್ತಡ್ಕ, ಬೆಸ್ಟ್ ಅಲ್ ರೌಂಡರ್ ಅಗಿ ವಿನಾಯಕ, ಬೆಸ್ಟ್ ಪಾಸರ್ ಮನೋಜ್ ಮೈರೋಳ್ತಡ್ಕ ಇವರು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಇನ್ನು ಶಿವಪ್ರೆಂಡ್ಸ್ ಕುರಾಯ-ಖಂಡಿಗ ಮೈರೋಳ್ತಡ್ಕ-ಬಂದಾರು ಇದರ ಆಶ್ರಯದಲ್ಲಿ ನಡೆದ 5ನೇ ವರ್ಷದ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ-2021 ಶಿವಪ್ರೆಂಡ್ಸ್ ತಂಡದ ಸರ್ವ ಸದಸ್ಯರ ಅವಿರತ ಶ್ರವದ ಮೂಲಕ ಅತ್ಯಂತ ಯಶಸ್ವಿಯಾಗಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು