Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಕಾರ್ಪೋರೇಟ್ ಸ್ಕಿಲ್ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು : ಬಿ.ಬಿ.ಎ. ಒಂದು ಕೋರ್ಸ್ ಮಾತ್ರವಲ್ಲ ಅದೊಂದು ಜೀವನದ ಮೇಲ್ನೋಟ. ಯಾವುದೇ ವಿಷಯದ ಬಗ್ಗೆ ಆಸಕ್ತಿ ಇದ್ದರೆ ಸಾಲದು. ಅದನ್ನು ಗಮನಿಸಿ ಸಾಧಿಸುವ ಛಲ ಹೊಂದಬೇಕು. ಓದುವ ಹವ್ಯಾಸದ ಜೊತೆಗೆ ಓದಿದ ಅಂಶಗಳು ನಮ್ಮಲ್ಲಿ ಪ್ರತಿಫಲಿಸಬೇಕು ಎಂದು ವಿವೇಕಾನಂದ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ನ ನಿರ್ದೇಶಕ ಡಾ. ಶೇಖರ್ ಅಯ್ಯರ್ ಹೇಳಿದರು. ಅವರು ವಿವೇಕಾನಂದ ಮಹಾವಿದ್ಯಾಲಯದ ವ್ಯವಹಾರ ಆಡಳಿತ ವಿಭಾಗದ(ಬಿ.ಬಿ.ಎ) ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಪೋರೇಟ್ ಸ್ಕಿಲ್ಸ್ ಕುರಿತಾದ ಸರ್ಟಿಫಿಕೇಟ್ ಕೋರ್ಸ್ ಅನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ವಿದ್ಯಾರ್ಥಿಗಳು ವಿಭಾಗ ಆಯೋಜಿಸುವ ಕಾರ್ಯಕ್ರಮಗಳು ಸದುಪಯೋಗ ಪಡೆದುಕೊಳ್ಳಬೇಕು. ಸ್ಪರ್ಧಾತ್ಮಕ ಹಾಗೂ ಅರ್ಹತೆ ಗಳಿದ್ದರೆ ಮಾತ್ರ ಉದ್ಯೋಗ ಸಿಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಅವಕಾಶಗಳನ್ನು ಬೆನ್ನಟ್ಟಬೇಕು ಎಂದರು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ.ವಿಜಯ ಸರಸ್ವತಿ ಮಾತನಾಡಿ, ಕಾರ್ಪೊರೇಟ್ ಯುಗದಲ್ಲಿ ಒಬ್ಬ ವಿದ್ಯಾರ್ಥಿ ವೃತ್ತಿಪರ ಕೌಶಲ್ಯದ ಜೊತೆಗೆ, ಭಾμÉ ಹಾಗೂ ಬರೆವಣಿಗೆಯಲ್ಲಿಯೂ ಮುಂದಿರಬೇಕು. ವಾದ ಹಾಗೂ ಚರ್ಚೆ ಇವೆರಡೂ ಶಬ್ದಗಳಿಗೆ ಬೇರೆ ಬೇರೆ ಅರ್ಥ ಇದೆ. ವಾದ ಪದವು ಯಾರು ಸರಿ ಎಂದರೆ, ಚರ್ಚೆ ಎಂಬುದು ಯಾವುದು ಸರಿ ಎಂದು ಕೊನೆಗೊಳ್ಳುತ್ತದೆ. ಈ ರೀತಿಯಾಗಿ ಪದಗಳ ಬಳಕೆಯ ಅರಿವು ಹೊಂದಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ವ್ಯವಹಾರ ಆಡಳಿತ ವಿಭಾಗದ ಉಪನ್ಯಾಸಕರಾದ ದೀಪಿಕಾ ಎಸ್. ಹಾಗೂ ಕಿಶನ್ ಎನ್. ರಾವ್ ಉಪಸ್ಥಿತರಿದ್ದರು. ಪ್ರಥಮ ಬಿ.ಬಿ.ಎ ವಿದ್ಯಾರ್ಥಿಗಳಾದ ಶ್ರೀನಿಧಿ ಹಾಗೂ ಸಾಹಿತ್ಯ ಪ್ರಾರ್ಥಿಸಿದರು. ವಿಭಾಗದ ಮುಖ್ಯಸ್ಥೆ ರೇಖಾ.ಪಿ ಸ್ವಾಗತಿಸಿ , ಉಪನ್ಯಾಸಕಿ ಅನ್ನಪೂರ್ಣ ಪಿ.ಜಿ. ವಂದಿಸಿದರು. ತೃತೀಯ ಬಿ.ಬಿ.ಎ. ವಿದ್ಯಾರ್ಥಿನಿ ವಿದ್ಯಾಶ್ರೀ ಟಿ. ಕಾರ್ಯಕ್ರಮವನ್ನು ನಿರೂಪಿಸಿದರು.