Tuesday, January 21, 2025
ಸಿನಿಮಾ

ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ್ ನಿಶ್ಚಿತಾರ್ಥ – ಜೋಡಿ ಕಂಡು ಅಭಿಮಾನಿಗಳು ಫುಲ್ ಖುಷ್ – ಕಹಳೆ ನ್ಯೂಸ್

ಕಿರುತೆರೆಯಿಂದ ಬಣ್ಣದ ಬದುಕು ಆರಂಭಿಸಿ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ನಟಿಯಾಗಿರುವ ಅದಿತಿ ಪ್ರಭುದೇವ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದು ಬರ‍್ತಾ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಒಬ್ಬರಿಗೊಬ್ಬರು ಕೈಹಿಡಿದುಕೊಂಡಿರುವ ಫೋಟೋವನ್ನು ನಟಿ ಅದಿತಿ ಜಾಲತಾಣದಲ್ಲಿ ಹಂಚಿಕೊ0ಡಿದ್ದು, ‘ಒಂದು ಕನಸಿನಂತೆ ಈ ಕನಸು ನನಸಾಯಿತು’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಅದಿತಿ ಕೈಯಲ್ಲಿರುವ ಉಂಗುರ ಹೈಲೈಟ್ ಆಗಿದೆ.


ಸೋಮವಾರಪೇಟೆಯ ಕಾಫಿ ಬೆಳೆಗಾರ ಪಿ.ಡಿ.ಚಂದ್ರಕಾ0ತ್ ಹಾಗೂ ಸುಚರಿತ ದಂಪತಿಗಳ ಪುತ್ರ ಯಶಸ್ ಅವರನ್ನ ಅದಿತಿ ವರಿಸಲಿದ್ದಾರೆ. ಯಶಸ್ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು, ಕೃಷಿ ಕ್ಷೇತ್ರದ ಕಡೆಗೂ ಒಲವು ಹೊಂದಿದ್ದಾರೆ. ಈಗಾಗಲೇ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಿದ್ದು, ಅದಿತಿ ಹಾಗೂ ಯಶಸ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.


ಮೊದಲಿಗೆ ನಿರೂಪಕಿಯಾಗಿ ತೆರೆ ಮೇಲೆ ಕಾಣಿಸಿಕೊಂಡ ಅದಿತಿ ಬಳಿಕ ‘ಗುಂಡ್ಯಾನ್ ಹೆಂಡ್ತಿ’ ಧಾರವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿದ್ದರು. ೨೦೧೭ ರಲ್ಲಿ ನಟ ಅಜಯ್ ರಾವ್ ಜೊತೆ ‘ಧೈರ್ಯಂ’ ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ಸದ್ಯ ಅನೇಕ ಸಿನಿಮಾ ಆಫರ್ ಗಳನ್ನು ಕೈಯಲ್ಲಿಟ್ಟುಕೊಂಡು ಕನ್ನಡ ಚಿತ್ರರಂಗದ ಬ್ಯುಸಿ ನಟಿಯಾಗಿದ್ದಾರೆ.