ಕೆಎಸ್‌ಆರ್‌ಟಿಸಿಯಿ0ದ 2021ನೇ ಸಾಲಿಗೆ ವಿಕಲಚೇತನರಿಂದ (Physically Handicaps) ರಿಯಾಯಿತಿ ದರದ ಬಸ್‌ಪಾಸ್‌ಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 2022ನೇ ಸಾಲಿಗೆಗಾಗಿ ದಿನಾಂಕ 01-01-2022 ರಿಂದ 31-12-2022 ರವೆರೆಗೆ ಮಾನ್ಯತೆ ಇರುವಂತೆ ವಿಕಲಚೇತನರಿಗೆ ಬಸ್ ಪಾಸ್ ವಿತರಿಸಬೇಕಿದೆ. ಹೀಗಾಗಿ ಬಸ್‌ಪಾಸ್‌ಗಾಗಿ ಅರ್ಜಿಯನ್ನು ಆಹ್ವಾನಿಸಿರೋದಾಗಿ ತಿಳಿಸಿದೆ.
ವಿಕಲಚೇತನರು ರಿಯಾಯಿತಿದರದ ಬಸ್ ಪಾಸ್ ಗಾಗಿ ಸೇವಾಸಿಂಧು ಪೋರ್ಟಲ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ದಿನಾಂಕ 17-01-2022 ರಿಂದ ಹೊಸ ಬಸ್ ಪಾಸ್ ವಿತರಿಸಲಾಗುತ್ತದೆ. ನವೀಕರಣ ಮತ್ತು ನೂತನ ಪಾಸುಗಳಿಗೆ ರೂ.660 ಶುಲ್ಕವನ್ನು ನಿಗದಿಪಡಿಸಲಾಗಿದೆ. ಇದನ್ನು ನಗದಾಗಿ ಇಲ್ಲವೇ ಡಿಡಿ ಮೂಲಕ ಪಾವತಿಸಬಹುದಾಗಿದೆ ಎಂದು ತಿಳಿಸಿದೆ.
ಇನ್ನು 2021ನೇ ಸಾಲಿನಲ್ಲಿ ವಿತರಿಸಲಾಗಿರುವ ಮತ್ತು ದಿನಾಂಕ 31-12-2021ರವರೆಗೆ ಮಾನ್ಯತೆ ಇರೋ ಬಸ್‌ಪಾಸ್‌ಗಳನ್ನು ದಿನಾಂಕ 28-02-2022ರವರೆಗೆ ಮಾನ್ಯತೆ ಮಾಡಲಾಗುವುದು ಎಂದು ಹೇಳಿದೆ. ಅದಕ್ಕೆ ಮೊದಲು ವಿಕಲಚೇತನರು ಹೊಸ ಹಾಗೂ ನವೀಕೃತ ರಿಯಾಯಿತಿ ದರದ ಬಸ್‌ಪಾಸ್‌ಗೆ ಅರ್ಜಿ ಸಲ್ಲಿಸುವಂತೆ ಕೆಎಸ್‌ಆರ್‌ಟಿಸಿ ನೋಟೀಸು ನೀಡಿದೆ.