Monday, January 20, 2025
ರಾಜಕೀಯಸುದ್ದಿ

ಪ್ರಧಾನಿ ನರೇಂದ್ರ ಮೋದಿಯವರ ಸಂಚಾರಕ್ಕಾಗಿ 12 ಕೋಟಿ ರೂಪಾಯಿ ಮೌಲ್ಯದ ಮರ್ಸಿಡೆಸ್-ಮೆಬ್ಯಾಚ್ ಎಸ್-650 ಕಾರು : ಇದರ ವಿಶೇಷತೆ ಏನು ಗೊತ್ತಾ..? – ಕಹಳೆ ನ್ಯೂಸ್

ಪ್ರಧಾನಿ ನರೇಂದ್ರ ಮೋದಿಯವರ ಸಂಚಾರಕ್ಕಾಗಿ ಇದೀಗ ಹೊಸ ಅತಿಥಿಯ ಆಗಮನವಾಗಿದ್ದು, ಸುಮಾರು 12 ಕೋಟಿ ರೂಪಾಯಿ ಮೌಲ್ಯದ ಅತ್ಯಾಧುನಿಕ ಶಸ್ತ್ರಸಜ್ಜಿತ ಮರ್ಸಿಡೆಸ್-ಮೆಬ್ಯಾಚ್ ಎಸ್-650 ಕಾರಿನಲ್ಲಿ ಮೋದಿಯವರು ಸಂಚಾರಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ಅವರನ್ನು ಹೈದರಾಬಾದ್ ಹೌಸ್‌ನಲ್ಲಿ ಭೇಟಿ ಮಾಡುವ ವೇಳೆ ತಮ್ಮ ಹೊಸ ಮೆಬಾಚ್ 650ಯಲ್ಲಿ ಆಗಮಿಸಿ ಗಮನ ಸೆಳೆದಿದ್ದರು. ಇತ್ತೀಚೆಗೆ ಮತ್ತೊಮ್ಮೆ ಈ ವಾಹನ ಪ್ರಧಾನಿಯವರ ಬೆಂಗಾವಲು ವಾಹನವಾಗಿ ಕಾಣಿಸಿಕೊಂಡಿತ್ತು.

ಈ ಅತ್ಯಾಧುನಿಕ ವಾಹನದಲ್ಲಿ ವಿನೂತನ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಕಾರುಗಳಲ್ಲೇ ಗರಿಷ್ಠ ಸುರಕ್ಷತೆ ಎನಿಸಿದ ವಿಆರ್10 ಮಟ್ಟದ ಸುರಕ್ಷತೆಯನ್ನು ಇದು ಹೊಂದಿರುತ್ತದೆ. ಮರ್ಸಿಡೆಸ್-ಮೆಬ್ಯಾಚ್ ಎಸ್ 600 ಗಾರ್ಡ್ ಕಾರನ್ನು ಕಳೆದ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರ ಬೆಲೆ 10.5 ಕೋಟಿ ರೂಪಾಯಿ ಹಾಗೂ ಎಸ್ 650 ಬೆಲೆ 12 ಕೋಟಿ ರೂಪಾಯಿಗಿಂತ ಅಧಿಕ ಇರಲಿದೆ ಎಂದು ಅಂದಾಜಿಸಲಾಗಿದೆ.


ಈ ಅತ್ಯಾಧುನಿಕ ವಾಹನ 60 ಲೀಟರ್ ಟ್ವಿನ್ ಟರ್ಬೊ ವಿ 12 ಎಂಜಿನ್‌ಗಳನ್ನು ಹೊಂದಿದ್ದು, ಇದು 516 ಬಿಎಚ್‌ಪಿ ಮತ್ತು 900 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸಬಲ್ಲದು. ಗರಿಷ್ಠ ವೇಗದ ಮಿತಿ ಗಂಟೆಗೆ 160 ಕಿಲೋಮೀಟರ್‌ಗಳು. ಎಸ್ 650 ಬಾಡಿ ಮತ್ತು ಇದರ ಕಿಟಕಿಗಳು ಉಕ್ಕಿನ ಗುಂಡುಗಳನ್ನು ಕೂಡಾ ತಡೆದುಕೊಳ್ಳಬಲ್ಲವು. ಇದು 2010 ಸ್ಫೋಟ ನಿರೋಧಕ ವಾಹನ ರೇಟಿಂಗ್ ಹೊಂದಿದ್ದು, 2 ಮೀಟರ್ ದೂರದಿಂದ ಮಾಡುವ 15 ಕೆಜಿ ಟಿಎನ್‌ಟಿ ಸ್ಫೋಟದಿಂದ ವಾಹನದಲ್ಲಿರುವುದನ್ನು ರಕ್ಷಿಸಬಹುದಾಗಿದೆ.

ಗಾಜಿನ ಒಳಾಂಗಣಕ್ಕೆ ಪಾಲಿಕಾರ್ಬೊನೇಟ್ ಲೇಪನವಿದ್ದು, ನೇರ ಸ್ಫೋಟದಿಂದ ಈ ವಾಹನದ ಪ್ರಯಾಣಿಕರನ್ನು ರಕ್ಷಿಸಲು ಭಾರಿ ಶಸ್ತ್ರಾಸ್ತ್ರಗಳನ್ನು ಕೆಳಭಾಗದಲ್ಲಿ ಹೊಂದಿರುತ್ತದೆ. ಅನಿಲ ದಾಳಿಯ ಸಂದರ್ಭದಲ್ಲಿ ಇದರ ಕ್ಯಾಬಿನ್ ಪ್ರತ್ಯೇಕ ಗಾಳಿ ಪೂರೈಕೆಯನ್ನು ಪಡೆಯುತ್ತದೆ.

ವಾಹನಕ್ಕೆ ವಿಶೇಷ ವಸ್ತುವಿನ ಲೇಪನವಿದ್ದು, ಢಿಕ್ಕಿ ಹೊಡೆದ ಸಂದರ್ಭದಲ್ಲಿ ರಂಧ್ರ ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುತ್ತದೆ. ಬೋಯಿಂಗ್ ಕಂಪನಿ ತನ್ನ ಎಎಚ್-64 ಅಪಾಚೆ ಟ್ಯಾಂಕ್ ದಾಳಿಯ ಹೆಲಿಕಾಪ್ಟರ್‌ಗಳಿಗೆ ಬಳಸುವ ವಸ್ತುಗಳನ್ನೇ ಇದಕ್ಕೆ ಬಳಸಲಾಗುತ್ತದೆ.