Monday, January 20, 2025
ಸುದ್ದಿಸುಳ್ಯ

ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಮತ್ತು ಕನ್ನಡ ಸಾಂಸ್ಕøತಿಕ ರತ್ನ ಪ್ರಶಸ್ತಿ ಪ್ರದಾನ -ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ವತಿಯಿಂದ ಅರ್ಥಪೂರ್ಣ ಕಾರ್ಯಕ್ರಮ – ಕಹಳೆ ನ್ಯೂಸ್

ಸುಳ್ಯದ ಚಂದನಸಾಹಿತ್ಯ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ ಮತ್ತು ಕನ್ನಡ ಸಾಂಸ್ಕೃತಿಕ ರತ್ನ ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಸುಳ್ಯದ ಕಾನತ್ತಿಲ ಸಭಾಂಗಣದಲ್ಲಿ ನಡೆಯಿತು.


ನಂಗಾರು ಶ್ರೀ ವಿಷ್ಣು ದೈವ ಮತ್ತು ಧರ್ಮದೈವಗಳ ಆಡಳಿತ ಮೊಕ್ತೇಸರರಾದ ಶ್ರೀ ಮೋಹನ್ ನಂಗಾರುರವರು ಸಮಾರಂಭದ ಸಭಾಧ್ಯಕ್ಷತೆ ವಹಿಸಿದ್ದರು. ಕನ್ನಡ ರಾಜ್ಯೋತ್ಸವ ಕವಿಗೋಷ್ಟಿಯ ಅಧ್ಯಕ್ಷತೆಯನ್ನು ಖ್ಯಾತ ಮಹಿಳಾ ಸಾಹಿತಿಗಳಾದ ಶ್ರೀಮತಿ ಸಾನು ಉಬರಡ್ಕ ಅವರು ವಹಿಸಿದ್ದರು. ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಭೀಮರಾವ್ ವಾಷ್ಠರ್‍ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಯದ ವಲಯ ಅರಣ್ಯಾಧಿಕಾರಿಗಳಾದ ಶ್ರೀ ಗಿರೀಶ್ ಆರ್ ರವರು ಕಾರ್ಯಕ್ರಮ ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವಿಶೇಷ ಆಹ್ನಿತರಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಶ್ರೀನಾಥ್ ಎಮ್ ಪಿ ಮತ್ತು ಡಾ.ಕೆ ಟಿ ವಿಶ್ವನಾಥ್ ಹಾಗೂ ಶ್ರೀ ಚಂದ್ರಶೇಖರ ಪೇರಾಲು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕನ್ನಡ ರಾಜ್ಯೋತ್ಸವ ಕವಿಗೋಷ್ಠಿಯಲ್ಲಿ ಚಂದನ ಅದೃಷ್ಟವಂತ ಕವಿಯಾಗಿ ಆಯ್ಕೆಯಾದ ಅನುಷಾ ನಾಯಕ್ ಬದಿಯಡ್ಕ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್.ಭೀಮರಾವ್ ವಾಷ್ಠರ್ ರವರು ನೀಡಿ ಗೌರವಿಸಿದರು. ಬಹುಮುಖ ಬಾಲ ಪ್ರತಿಭೆಗಳಾದ ಕು| ಅವನಿ ಎಂ.ಎಸ್ ಸುಳ್ಯ, ಅಶ್ವಿಜ್ ಆತ್ರೇಯ ಸುಳ್ಯ, ಅಶ್ಮಿತ್ ಎ ಜೆ ಮಂಗಳೂರು ಹಾಗೂ ಕು| ತನ್ವಿ ಶೆಟ್ಟಿ ಸೂರಂಬೈಲು ಅವರಿಗೆ ಕನ್ನಡ ಸಾಂಸ್ಕೃತಿಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆಯಲ್ಲಿ ಗಾಯಕ ಪೆರುಮಾಳ್ ಐವರ್ನಾಡುರವರು ಹಾಡಿದ ಶರಣು ಅಯ್ಯಪ್ಪ ಎಂಬ ಭಕ್ತಿಗೀತೆಯ ಮ್ಯೂಸಿಕ್ ಆಲ್ಬಮ್ ಬಿಡುಗಡೆ ಮಾಡಲಾಯಿತು.

ಕವಿಗೋಷ್ಠಿಯಲ್ಲಿ ರಶ್ಮಿ ಸನಿಲ್ ಮಂಗಳೂರು, ನಾರಾಯಣ್ ಕುಂಬ್ರ, ಪೂರ್ಣಿಮಾ ಪೆಲರ್ಂಪಾಡಿ, ಆಶಾಮಯ್ಯ ಪುತ್ತೂರು, ಶ್ರೀಮತಿ ರೇಖಾ ಸುದೇಶ್ ರಾವ್ ಮಂಗಳೂರು, ಎಮ್ ಎ ಮುಸ್ತಫಾ ಬೆಳ್ಳಾರೆ, ಅಪೂರ್ವ ಕಾರಂತ್, ಸುಮಂಗಲ ಲಕ್ಷ್ಮಣ್, ಚರಿಶ್ಮಾ ದೇರುಮಜಲು, ಪ್ರತೀಕ್ಷಾ ಕಾವು, ಅನುಷಾ ಕೃಷ್ಣಾ  ನಾಯಕ್ ಸುಬ್ರಹ್ಮಣ್ಯ, ಸೌಜನ್ಯ ಬಿ ಎಂ ಕೆಯ್ಯೂರು, ಬೃಂದಾ ಪಿ ಮುಕ್ಕೂರು, ಶ್ರೇಯಾ ಮಿಂಚಿನಡ್ಕ, ಮಂಜುಶ್ರೀ ಎನ್ ಶಲ್ಕ, ಅನುಷಾ ನಾಯಕ್ ಬದಿಯಡ್ಕ, ಶ್ರೀಕಲಾ ಬಿ ಕಾರಂತ್, ಧನ್ವಿತಾ ಕಾರಂತ್, ನವ್ಯ ಎಮ್ ಆರ್ ರೆಂಜಿಲಾಡಿ, ಶಶಿಧರ್ ಏಮಾಜೆ, ಸೌಮ್ಯ ಆರ್ ಶೆಟ್ಟಿ, ಪ್ರಮೀಳಾ ರಾಜ್ ಐವರ್ನಾಡು ಇನ್ನಿತರರು ಭಾಗವಹಿಸಿದ್ದರು.

ಕನ್ನಡ ನಾಡಿನ ಗೀತೆಗಳನ್ನು ಕುಮಾರ್ ಸಾಯಿಪ್ರಶಾಂತ್, ವಿಶ್ವದೀಪ್ ಕುಂದಲ್ಪಾಡಿ , ಅಶ್ವಿಜ್ ಆತ್ರೇಯ ಮತ್ತು ಅವನಿ ಸುಳ್ಯರವರು ಹಾಡಿದರು. ಪ್ರಮೀಳಾ ರಾಜ್ ರವರು ಸ್ವಾಗತಿಸಿದರು .ಪ್ರಾರ್ಥನೆಯನ್ನು ಗಾಯಕ ಕುಸುಮಾಧರ ಬೂಡು ರವರು ಹಾಡಿದರು . ಭೀಮರಾವ್ ವಾಷ್ಠರ್ ಪ್ರಸ್ತಾವನೆಗೈದರು . ಆಶಾ ಮಯ್ಯ ವಂದಿಸಿದರು . ಪ್ರಧಾನ ಕಾರ್ಯದರ್ಶಿ ಸುಮಂಗಲ ಲಕ್ಷ್ಮಣ ಕೋಳಿವಾಡರವರು ಕಾರ್ಯಕ್ರಮ ನಿರೂಪಿಸಿದರು.