Monday, November 25, 2024
ದಕ್ಷಿಣ ಕನ್ನಡಸುದ್ದಿ

ಜ. 14ರಿಂದ 26ರವರೆಗೆ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ನೂತನ ಶಿಲಾಮಯ ಸುತ್ತು ಪೌಳಿ ಸಮರ್ಪಣೆ, ಶಿವ, ಸುಬ್ರಹ್ಮಣ್ಯ ದೇವರ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶ ಹಾಗೂ ಶತಚಂಡಿಕಾ ಯಾಗ- ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ನಗರದ ಹೃದಯಭಾಗ ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನವು ಸಹಸ್ರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು ವಿಶ್ವಬ್ರಾಹ್ಮಣ ಬಾಂಧವರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಶ್ರೀ ವಿನಾಯಕ, ಶ್ರೀ ಕಾಳಿಕಾಂಬೆ, ಶ್ರೀ ವಿಶ್ವಕರ್ಮ, ಶ್ರೀ ವೀರಭದ್ರ, ಶ್ರೀ ನಾಗಲಿಂಗ ಸ್ವಾಮಿ, ಶ್ರೀ ನಾಗ, ಪಂಜುರ್ಲಿ, ಗುಳಿಗ ದೈವ ಸಾನಿಧ್ಯ ಹೊಂದಿರುವ ಶ್ರೀ ಕ್ಷೇತ್ರದಲ್ಲಿ ಯುಗಾದಿ ಮಹೋತ್ಸವದಿಂದ ಮೊದಲ್ಗೊಂಡು ವಿವಿಧ ಮಹೋತ್ಸವಗಳನ್ನು ಸಂಪ್ರದಾಯದ0ತೆ ನಡೆಸಿಕೊಂಡು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ವಿಶ್ವಬ್ರಾಹ್ಮಣ ಸಮಾಜದ ಕರಾವಳಿ ಕರ್ನಾಟಕದ ಪವಿತ್ರ ಕ್ಷೇತ್ರ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಜ.14 ರಿಂದ ಮೊದಲ್ಗೊಂಡು ಜ.26ರ ವರೆಗೆ ನೂತನ ಶಿಲಾಮಯ ಸುತ್ತು ಪೌಳಿ ಸಮರ್ಪಣೆ, ಶ್ರೀ ಶಿವ, ಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠೆ, ಶ್ರೀ ಕಾಳಿಕಾಂಬಾ ವಿನಾಯಕ ದೇವರಿಗೆ ಅಷ್ಟಬಂಧ ಬ್ರಹ್ಮಕಲಶ, ಶತಚಂಡಿಕಾಯಾಗವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಲಕ್ಷ್ಮೀಕಾಂತ ಶರ್ಮ, ಸಾಲಿಗ್ರಾಮ ಇವರ ಆಚಾರ್ಯತ್ವದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಷೇತ್ರದಲ್ಲಿ ವಿವಿಧ ಹಂತಗಳಲ್ಲಿ ಜೀರ್ಣೋದ್ದಾರ ಕಾರ್ಯಗಳು ನೆರವೇರುತ್ತಾ ಬಂದಿದ್ದು 20 ವರ್ಷಗಳ ಹಿಂದೆ ಶ್ರೀ ವಿನಾಯಕ ಶ್ರೀ ಕಾಳಿಕಾಂಬೆಯ ಶಿಲಾಮಯ ಗರ್ಭಗುಡಿ ಪುನರ್ ನಿರ್ಮಾಣ ಗೊಂಡು ಸಹಸ್ರ ಕುಂಭಾಭಿಷೇಕ ಹಾಗೂ 2015 ನೇ ಇಸವಿಯಲ್ಲಿ ನಾಗ ಸನ್ನಿಧಿ ಚಿತ್ರಕೂಟ, ಪಂಜುರ್ಲಿ ದೈವದ ಗುಡಿ, ಗುಳಿಗ ಸಾನಿಧ್ಯ ನಿರ್ಮಾಣ, ಬ್ರಹ್ಮಕಲಶಾಭಿಷೇಕ ಸಂಪನ್ನ ಗೊಂಡಿದ್ದು, ಇದೀಗ ಕ್ಷೇತ್ರದ ಸುತ್ತು ಪೌಳಿ ಶಿಲಾಮಯವಾಗಿ ಕಲಾತ್ಮಕವಾಗಿ ಹಾಗೂ ಕಾಷ್ಟ ಶಿಲ್ಪವೂ ಉತ್ತಮ ಕಲಾ ನೈಪುಣ್ಯತೆಯೊಂದಿಗೆ ನಿರ್ಮಾಣ ಗೊಂಡಿದೆ. ಶಿಲಾಮಯ ಸುತ್ತುಪೌಳಿಯಲ್ಲಿ ನವದುರ್ಗೆಯರ ಹಾಗೂ ದಕ್ಷಿಣಾಮೂರ್ತಿಯ ವಿಗ್ರಹಗಳು ಅನಾವರಣಗೊಳ್ಳಲಿದೆ.

ಧಾರ್ಮಿಕ ಕಾರ್ಯ ಕ್ರಮ
ಜ. 16 ರಂದು ಹೊರೆಕಾಣಿಕೆ ಮೆರವಣಿಗೆ, ಜ. 17 ನೂತನವಾಗಿ ನಿರ್ಮಾಣಗೊಂಡ ಉಪಗುಡಿಯಲ್ಲಿ ಶಿವ, ಸುಬ್ರಹ್ಮಣ್ಯ ದೇವರ ಪ್ರತಿಷ್ಠೆ, ಸಂಜೆ ಕಾಳಿಕಾಂಬಾ ದೇವರ ಅಷ್ಟಬಂಧ, ಜ.22 ರಂದು ನೂತನ ಶಿಲಾಮಯ ಸುತ್ತು ಪೌಳಿ ಸಮರ್ಪಣೆ, ಜ.23 ರಂದು ಬ್ರಹ್ಮಕಲಶ, ಹಾಗೂ ಜ.26 ರಂದು ಶತಚಂಡಿಕಾಯಾಗವೂ ನಡೆಯಲಿದೆ.

ಶ್ರೀ ವಿನಾಯಕ, ಶ್ರೀ ಕಾಳಿಕಾಂಬಾ ದೇವರ ಗರ್ಭಗುಡಿಯ ಶಿಖರ ಬೆಳ್ಳಿಯಲ್ಲಿ ನಿರ್ಮಾಣ ಗೊಂಡು ಸುವರ್ಣ ಲೇಪಿತ ಶಿಖರ ಸಮರ್ಪಿಸಲಾಗುವುದು. ಜೀರ್ಣೋದ್ದಾರ ಕಾಮಗಾರಿಯು ಊರ ಪರವೂರ ಸಮಾಜ ಬಾಂಧವರ, ಭಕ್ತಾಧಿಗಳ ಸಹಕಾರದೊಂದಿಗೆ ನಡೆಯುತ್ತಿದೆ.

ಸುತ್ತುಪೌಳಿ ಶಿಲ್ಪ ನಿರ್ಮಾಣದ ಜವಾಬ್ದಾರಿಯನ್ನು ಕಾರ್ಕಳದ ಶಿಲ್ಪಿ ಸತೀಶ್ ಆಚಾರ್ಯರು ವಹಿಸಿದ್ದು, ಜೋಕಟ್ಟೆ ಪ್ರಭಾಕರ ವಾಸ್ತುಶಿಲ್ಪದ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ. ಆಶ್ವತ್ತಪುರ ಶಿವಪ್ರಸಾದ್ ಆಚಾರ್ಯ ಕಾಷ್ಟ ಶಿಲ್ಪದ ಕೆಲಸ ನಿರ್ವಹಿಸುತ್ತಿದ್ದಾರೆ.

ಧ್ವಜ ಮರದ ಕೆಲಸ ನಿರ್ಮಾಣ ಗೊಳ್ಳುತ್ತಿದ್ದು, ಷಡಾಧರ ಪ್ರತಿಷ್ಠೆಗೊಳ್ಳಲಿದೆ. ಹೊರಾಂಗಣಕ್ಕೆ ಮೇಲ್ಚಾವಣಿ, ನೂತನ ಬ್ರಹ್ಮರಥ ಯೋಜನೆ ಒಳಗಂಡAತೆ ಒಟ್ಟು ಎಲ್ಲಾ ಕಾಮಗಾರಿಗೆ ಅಂದಾಜು 10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.

ಧಾರ್ಮಿಕ ಸಭೆಯು ಶ್ರೀಮತ್ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಜಿಯವರ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜಶ್ರೀ ವೀರೇಂದ್ರ ಹೆಗ್ಗಡೆ, ಪದ್ಮಶ್ರೀ ವಿ.ಆರ್. ಗೌರಿಶಂಕರ್ ಮುಖ್ಯ ಆಡಳಿತಾಧಿಕಾರಿ ಶ್ರೀ ಶೃಂಗೇರಿ ಪೀಠಮ್ ಮತ್ತು ಇತರ ಧಾರ್ಮಿಕ, ಜನ ಪ್ರತಿನಿಧಿಗಳ, ಗಣ್ಯರ ಉಪಸ್ಥಿಯಲ್ಲಿ ನಡೆಯಲಿದೆ.

ಪ್ರತೀ ದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದ್ದು, ಭಕ್ತಾಧಿಗಳು ತ್ರಿಕರಣಪೂರ್ವಕವಾಗಿ ಈ ಎಲ್ಲಾ ಕಾರ್ಯಗಳಲ್ಲಿ ಭಾಗವಹಿಸಬೇಕೆಂದು ಕ್ಷೇತ್ರದ ಆಡಳಿತ ಮೊಕ್ತೇಸರ ಕೆ ಕೇಶವ ಆಚಾರ್ಯರು ನಗರದ ರಥಬೀದಿಯಲ್ಲಿರುವ ವಿಶ್ವಕರ್ಮ ಸಹಕಾರ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಬ್ರಹ್ಮ ಕಲಶೋತ್ಸವದ ಆಮಂತ್ರಣವನ್ನು ಬಿಡುಗಡೆಗೊಳಿಸಿ ತಿಳಿಸಿದರು. Breaking News : ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ; ಕಮಲ ಕಿಲ ಕಿಲ – ಕೈ ವಿಲ ವಿಲ, ಯಾರಿಗೆ ಎಷ್ಟು..!? ಇಲ್ಲಿದೆ ಗೆಲುವು ಸೋಲಿನ ಲೆಕ್ಕಾಚಾರ

ಈ ಸಂದರ್ಭದಲ್ಲಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಕೇಶವ ಆಚಾರ್ಯ, ಎರಡನೇ ಮೊಕ್ತೇಸರ್ ಸುಂದರ ಆಚಾರ್ಯ ಬೆಳುವಾಯಿ, ಮೂರನೇ ಮೊಕ್ತೇಸರ ಎ ಲೋಕೇಶ್ ಆಚಾರ್ಯ, ಬ್ರಹ್ಮ ಕಲಶೋತ್ಸವ ಸಮಿತಿಯ ಕಾರ್ಯಧ್ಯಕ್ಷರಾದ ನಾಗರಾಜ್ ಆಚಾರ್ಯ ಮಂಗಳಾದೇವಿ, ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮ. ವೆಂಕಟೇಶ್ ಆಚಾರ್, ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಸುಜೀರ್ ವಿನೋದ್ ಕಾರ್ಯಕ್ರಮ ನಿರೂಪಿಸಿದರು