ಮಹಾತ್ಮ ಗಾಂಧೀಜಿಯ ಅವಹೇಳನ ; ಕಾಳಿಚರಣ್ ಮಹಾರಾಜ್ ಅರೆಸ್ಟ್….! ” ನನಗೆ ನನ್ನ ಹೇಳಿಕೆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ ” ಬಂಧನ ಬಳಿಕ ಮಹರಾಜ್ ಖಡಕ್ ಹೇಳಿಕೆ – ಕಹಳೆ ನ್ಯೂಸ್
ರಾಯ್‌ಪುರ, ಡಿ 30 : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ ಅವಹೇಳನ ಮಾಡಿದ್ದ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಅವರನ್ನು ಗುರುವಾರ ಮುಂಜಾನೆ ಮಧ್ಯಪ್ರದೇಶದ ಖಜುರಾಹೊದಲ್ಲಿ ಬಂಧಿಸಲಾಗಿದೆ.
ಡಿಸೆಂಬರ್ 26 ರಂದು ನೆರೆಯ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಗಾಂಧೀಜಿಯವರ ಹಂತಕ ನಾಥೂರಾಂ ಗೋಡ್ಸೆಯನ್ನು ಹೊಗಳಿ ಕಾಳಿಚರಣ್ ಈ ಹೇಳಿಕೆಯ ನೀಡಿದ್ದರು.
ನೌಪದ್ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿರುವ ಮಹಾರಾಷ್ಟ್ರದ ಸಚಿವ ಜೀತೇಂದ್ರ ಅವದ್, ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಅವರ ವಿರುದ್ಧ ಕಾಳಿಚರಣ್ ಸ್ವಾಮೀಜಿ ಬಳಸಿರುವ ಪದ ತುಂಬಾ ನೋವುಂಟು ಮಾಡಿದೆ ಎಂದು ಹೇಳಿದ್ದರು.
ಗಾಂಧೀಜಿಯ ಅವಹೇಳನ ಕುರಿತು ಮತ್ತೆ ಸಮರ್ಥಿಸಿಕೊಂಡಿದ್ದ ಕಾಳಿಚರಣ್ , “ನನಗೆ ನನ್ನ ಹೇಳಿಕೆ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ, ಮನಸ್ಸಿನಲ್ಲಿ ಯಾವುದೋ ಒಂದು ವಿಷಯದ ಬಗ್ಗೆ ಮನಸ್ಸಿನಲ್ಲಿ ಉದ್ವೇಗವಿದ್ದಾಗ ಬೈಗುಳ ಬರುತ್ತವೆ. ಹೀಗಾಗಿ ನಾನು ಏನೇ ಹೇಳಿದರೂ ಅದು ನನ್ನ ಮನದಾಳದ ನೋವಾಗಿತ್ತು” ಎಂದಿದ್ದರು.
ಕಾಳಿಚರಣ್ ಮಹಾರಾಜ್ ವಿರುದ್ಧ ಕೋಮು ಪ್ರಚೋದನೆ ಮತ್ತಿತರ ದುರುದ್ದೇಶಪೂರಿತ ಭಾಷಣ ಮತ್ತು ಐಪಿಸಿ ಸೆಕ್ಷನ್ 294,295ಎ. 298, 505 (2) ಮತ್ತು 506(2) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.