Saturday, September 21, 2024
ಸುದ್ದಿ

Breaking News : ಮಂಗಳೂರಿನಲ್ಲಿ ಭಾರಿ ಮಳೆ ; ಮುಳುಗಿದ ವಾಹನಗಳು, ರಸ್ತೆಗಳು ಸಂಪೂರ್ಣ ಜಲಾವೃತ – ಕಹಳೆ ನ್ಯೂಸ್

ಮಂಗಳೂರು : ಮೇ 29: ಮೆಕ್ನು ಚಂಡಮಾರುತ ಪರಿಣಾಮದಿಂದಾಗಿ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಮಂಗಳೂರಿನಲ್ಲಿ ನೆರೆಯ ಭೀತಿ ಆವರಿಸಿದೆ.ಮಂಗಳೂರು ನಗರದ ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು ರಸ್ತೆಯಿಡೀ ನೀರಿನಿಂದ ಆವೃತವಾಗಿದೆ. ತಗ್ಗು ಪ್ರದೇಶದ ಅಂಗಡಿ, ವ್ಯಾಪಾರ ಕೇಂದ್ರಗಳಿಗೆ ನೀರು ನುಗ್ಗಿದೆ. ಹಲವು ಮನೆಗಳಿಗೂ ನೀರು ನುಗ್ಗಿದ್ದು ಜನ ಆರಂಭಿಕ ಮಳೆಯಲ್ಲೇ ಪರದಾಟ ಆರಂಭಿಸಿದ್ದಾರೆ. ಕೊಟ್ಟಾರ, ಅತ್ತಾವರದಲ್ಲಿ ನೆರೆ ನೀರು ಆವರಿಸಿದ್ದು ಜನರು ಆತಂಕ ಎದುರಿಸುತ್ತಿದ್ದಾರೆ. ಇದರಿಂದಾಗಿ ನಗರದಾದ್ಯಂತ ಟ್ರಾಫಿಕ್ ಜಾಮ್ ಆಗಿದ್ದು ವಾಹನ ಸಂಚಾರ ಸ್ತಬ್ಧವಾಗಿದೆ. ಮಳೆ ಒಂದೇ ಸಮನೆ ಸುರಿಯುತ್ತಿದ್ದು , ಮಳೆ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಮುಂಜಾಗ್ರತೆ ವಹಿಸದೇ ಇರುವುದು ಜನ ಕಷ್ಟ ಎದುರಿಸುವಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಂಪ್ವೆಲ್ ಫ್ಲೈಓವರ್ ನಿರ್ಮಾಣ ಸ್ಥಳವೂ ಸಂಪೂರ್ಣವಾಗಿ ನೀರಿಂದ ಆವೃತವಾಗಿದೆ. ತೊಕೊಟ್ಟು ನಲ್ಲಿ ಧಾರಾಕಾರ ಸುರಿದ ಮಳೆ ಸಂಚಾರ ವ್ಯವಸ್ಥೆಯನ್ನು ಅಸ್ತವ್ಯಸ್ತ ಮಾಡಿದೆ.  ನಿರ್ಮಾಣ ಹಂತದಲ್ಲಿದ್ದ ಮನೆ ಪಂಪ್ವೆಲ್ನಲ್ಲಿ ಕುಸಿದಿದೆ. ಅದರ ಸುತ್ತಲಿನ ಪ್ರದೇಶಗಳು ಮುಳುಗಿಹೋದ ಕಾರಣ ಕುತಾರ್ ಜಂಕ್ಷನ್ ಮಿನಿ ದ್ವೀಪವಾಗಿ ಬದಲಾಗಿದೆ. ಪ್ರವಾಹದಿಂದಾಗಿ ರಸ್ತೆಯಲ್ಲಿನ  ಗುಂಡಿಯ ಅಳವನ್ನು ನಿರ್ಣಯಿಸಲು ಸಾಧ್ಯವಾಗದೇ  ಇಬ್ಬರು-ಬೈಕ್ ಸವಾರರು ಅಪಘಾತಕ್ಕಿಡಾಗಿದ್ದರೆ. ರಸ್ತೆಯಲ್ಲಿ ಹರಿಯುವ ನೀರಿನಲ್ಲಿ ಬೈಕೊಂದು ತೇಲುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಾಹೀರಾತು

ಬೆಜೈ ಮತ್ತುಹಂಪನಕಟ್ಟಾದಲ್ಲಿ 20 ಕ್ಕಿಂತಲೂ ಹೆಚ್ಚಿನ ವಾಹನಗಳು ಮಳೆನೀರಿನಲ್ಲಿಗೆ  ಮುಳುಗಿವೇ . ಕೆಲವು ಅಂಗಡಿಗಳು ಹಾನಿಗೀಡಾಗಿವೆ.

ಹವಾಮಾನ ಇಲಾಖೆಯು ತಿಳಿಸಿದ್ದಕ್ಕಿಂತ ಮೊದಲೇ  ಕರಾವಳಿ ಕರ್ನಾಟಕ ಮತ್ತು ಕೇರಳಕ್ಕೆ  ಮುಂಗಾರು  ಕಾಲಿಟ್ಟಿದೆ.