Sunday, January 19, 2025
ಉಡುಪಿಕುಂದಾಪುರಸುದ್ದಿ

ಮೆಹೆಂದಿ ಮನೆಯಲ್ಲಿ ನಡೆದ ಲಾಠಿಚಾರ್ಜ್ ಪ್ರಕರಣಕ್ಕೆ ಟ್ವಿಸ್ಟ್, ಪೊಲೀಸರಿಂದ ದಾಖಲಾಯಿತು ದೂರು…!- ಕಹಳೆ ನ್ಯೂಸ್

ಕೋಟ: ಡಿಜೆ ಸೌಂಡ್ ವಿಚಾರವಾಗಿ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಕಾಲನಿಯಲ್ಲಿ ಕೊರಗ ಸಮುದಾಯದ ಮೇಲೆ ನಡೆದ ಲಾಠಿಚಾರ್ಜ್ ಪ್ರಕರಣಕ್ಕೆ ಕೊರಗ ಸಮುದಾಯದ 7 ಮಂದಿಯ ಮೇಲೆ ದೂರು ದಾಖಲಿಸಿದ ಪೊಲೀಸರು, ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸ್ ಕಾನ್‍ಸ್ಟೆಬಲ್ ಜಯರಾಮ್ ಅವರು ಪ್ರತಿದೂರು ನೀಡಿದ್ದು, ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುವಿನ ರಾಜೇಶ್ ಅವರ ಮನೆಯಲ್ಲಿ ಏರುಧ್ವನಿಯಲ್ಲಿ ಡಿಜೆ ಹಾಕಿರುವ ಕುರಿತು ಸ್ಥಳೀಯರಿಂದ ದೂರು ಬಂದಿತ್ತು. ಸ್ಥಳಕ್ಕಾಮಿಸಿದಾಗ ರಾಜೇಶ್, ಸುದರ್ಶನ್, ಗಣೇಶ ಬಾಕ್ಸೂರು, ಸಚಿನ್, ಗಿರೀಶ್, ನಾಗೇಂದ್ರ ಪುತ್ರನ್, ನಾಗರಾಜ ಪುತ್ರನ್ ಮತ್ತಿತರರು ಮದ್ಯ ಸೇವನೆ ಮಾಡಿ ಜೋರಾಗಿ ಡಿಜೆ ಹಾಡು ಹಾಕಿಕೊಂಡು ನೃತ್ಯ ಮಾಡುತ್ತಿರುವುದು ಕಂಡು ಬಂತು. ಪಿಎಸ್‍ಐ ಅವರು ಡಿಜೆ ಶಬ್ದವನ್ನು ಕಡಿಮೆ ಮಾಡುವಂತೆ ತಿಳಿಸಿದಾಗ ಆರೋಪಿತರು ದೊಣ್ಣೆ ಹಿಡಿದು ಉಡಾಫೆಯಾಗಿ ಮಾತನಾಡಿದ್ದಲ್ಲದೆ ಸಮವಸ್ತ್ರದಲ್ಲಿದ್ದ ಪಿಎಸ್‍ಐ ಅವರನ್ನು ದೂಡಿರುತ್ತಾರೆ, ಡಿಜೆ ಬಂದ್ ಮಾಡಲು ಹೋದಾಗ ದೊಣ್ಣೆಯಿಂದ ಹಲ್ಲೆ ಮಾಡಿ, ಸಮವಸ್ತ್ರ ಹರಿದು ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸ್ಥಳದಲ್ಲಿ ಹಾಜರಿದ್ದ ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಉರಾಳ ಎಂಬವರು ಪಿಎಸ್‍ಐ ಬಳಿ, ತನ್ನ ತಾಯಿಗೆ ಹೃದಯ ಸಂಬಂಧಿ ತೊಂದರೆ ಇದ್ದು ಡಿಜೆ ಸೌಂಡ್ ಕಡಿಮೆ ಇಡುವಂತೆ 112 ಸಿಬ್ಬಂದಿಗಳ ಮೂಲಕ ಹೇಳಿಸಿದರೂ, ಆರೋಪಿಗಳು ಉಡಾಫೆಯಾಗಿ ಮಾತನಾಡಿದ್ದಾರೆ. ಎಸ್.ಐ ಅವರು ಡಿಜೆ ಸೌಂಡ್ ಕಡಿಮೆ ಮಾಡುವಂತೆ ತಿಳಿಸಿದರು, ಆರೋಪಿತರು ಗುಂಪು ಕಟ್ಟಿಕೊಂಡು ಅವರಿಗೂ ಉಡಾಫೆಯ ಉತ್ತರ ನೀಡಿ ಸಮವಸ್ತ್ರದಲ್ಲಿದ್ದ ಅವರನ್ನು ಕೈಯಿಂದ ದೂಡಿದ್ದಾರೆ. ತಾನು ಡಿಜೆ ಬಂದ್ ಮಾಡಲು ಹೋದಾಗ ದೊಣ್ಣೆಯಿಂದ ತನಗೆ ಹೊಡೆದು ಗಾಯಗೊಳಿಸಿದ್ದಾರೆ. ಆರೋಪಿಗಳು ಮಾಡಿದ ಹಲ್ಲೆಯಿಂದ ಕೈನೋವು ಜಾಸ್ತಿಯಾಗಿದ್ದು, ಕೋಟ ಸಮುದಾಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರೂ ಕಡಿಮೆಯಾಗದ ಕಾರಣ, ಕುಂದಾಪುರ ತಾಲೂಕು ಆಸ್ಪತ್ರೆಗೆ ಹೋಗಿ ಚಿಕಿತ್ಸೆಗೆ ದಾಖಲಾಗಿದ್ದಾಗಿ ಕೋಟ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ತಾ ಇದ್ದು ದೂರಿನಲ್ಲಿ ಪೊಲೀಸರು ಮೆಹೆಂದಿ ಮನೆಗೆ ನುಗ್ಗಿದ ಸಮಯ 11:10 ಎಂದು ದಾಖಲಿಸಿದ್ದಾರೆ, ಮೆಹೆಂದಿ ಮನೆಯವರು 10 ಗಂಟೆಗೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಪೊಲೀಸರು ದೂರು ನೀಡಿರುವ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೊರಗ ಸಮುದಾಯದವರು ಪ್ರಕರಣ ಮುಚ್ಚಿಹಾಕುವ ಸಲುವಾಗಿ ಸುಳ್ಳು ಕೇಸು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.