Sunday, November 24, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟುವಿನ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ 48 ದಿನಗಳ ಕಾಲ ನಡೆಯಲಿದೆ ಸಂಧ್ಯಾ ಭಜನಾ ಸಂಕೀರ್ತನೆ – ಕಹಳೆ ನ್ಯೂಸ್

ಬಂಟ್ವಾಳ: ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟುವಿನಲ್ಲಿ ಅಷ್ಟಬಂಧ ಬ್ರಹ್ಮಕಲಶ ಹಾಗೂ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಪೂರ್ವಭಾವಿಯಾಗಿ 48 ದಿನಗಳ ಕಾಲ ಸಂಧ್ಯಾ ಭಜನಾ ಸಂಕೀರ್ತನೆ ನಡೆಯಲಿದೆ.


ದೇವಸ್ಥಾನದ ಅರ್ಚಕ ಶಿವರಾಮ ಶಿಬರಾಯ ಮತ್ತು ಉಷಾ ಶಿಬರಾಯ ದಂಪತಿಗಳು ಸಂಧ್ಯಾ ಭಜನೆಗೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಮೊದಲ ದಿನದ ಸಂಧ್ಯಾ ಭಜನಾ ಸಂಕೀರ್ತನೆಯಲ್ಲಿ ನೂರಕ್ಕೂ ಅಧಿಕ ಮಂದಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದರು.
ಮೊದಲ ದಿನದ ಸಂಕೀರ್ತನೆಯಲ್ಲಿ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸದಸ್ಯರು ಭಜನಾ ಸೇವೆಯನ್ನು ನೆರವೇರಿಸಿದ್ದು, ಇಂದು ಶ್ರೀ ದುರ್ಗಾ ಮಿತ್ರ ಭಜನಾ ಮಂಡಳಿ ರಾಮನಗರ, ಬೆಂಜನಪದವು ಭಜನಾ ತಂಡದಿಂದ ಭಜನಾ ಸೇವೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ, ಸಂಚಾಲಕ ತೇವು ತಾರನಾಥ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ ತುಂಬೆ, ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ, ವ್ಯವಸ್ಥಾಪನಾ ಸಮಿತಿ ಪ್ರಧಾನ ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಸದಸ್ಯರಾದ ದಿವಾಕರ ಶೆಟ್ಟಿ ಕುಪ್ಪಿಲ, ಸತೀಶ್ ಶೆಟ್ಟಿ ಮೊಡಂಕಾಪು, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಅಮಿತಾ ವಿಶ್ವನಾಥ ದಾಸರಕೋಡಿ, ಅರ್ಚಕ ರಾಧಾಕೃಷ್ಣ ಕಡಂಬಳಿತ್ತಾಯ, ಪ್ರಮುಖರಾದ ನಾರಾಯಣ ಹೊಳ್ಳ, ಪ್ರಕಾಶ್ ಬಿ ಶೆಟ್ಟಿ ಶ್ರೀಶೈಲ, ವೇಣುಗೋಪಾಲ ಶೆಟ್ಟಿ ಕುಪ್ಪಿಲ, ಪ್ರತಿಭಾ ಪಿ ಶೆಟ್ಟಿ, ಉಮಾಚಂದ್ರಶೇಖರ್, ಯೋಗೀಶ್ ಭಟ್ ಕನಪಾಡಿ, ಭುಜಂಗ ಭಂಡಾರಿ ಕೈಕಂಬ, ಉಮೇಶ್ ಗಾಂದೋಡಿ, ವಿಶ್ವನಾಥ್ ದಾಸರಕೋಡಿ, ಪೂವಪ್ಪ ಸಪಲ್ಯ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು