Recent Posts

Sunday, January 19, 2025
ದಕ್ಷಿಣ ಕನ್ನಡಸುದ್ದಿ

ಜನವರಿ 1 ರಿಂದ 25ವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜ್ ಕಾಂಪಸ್‍ಗಳಲ್ಲಿ ‘ಸಾಮರಸ್ಯದೆಡೆಗೆ ವಿದ್ಯಾರ್ಥಿಗಳ ನಡೆ’ ಕಾರ್ಯಕ್ರಮ- ಕಹಳೆ ನ್ಯೂಸ್

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳ ಕಾಂಪಸ್‍ಗಳಲ್ಲಿ ಶಾಂತಿ, ಸೌಹಾರ್ದತೆ, ಸಾಮರಸ್ಯವನ್ನು ಕಾಪಾಡಿಕೊಂಡು ಬರುವುದು ಅಗತ್ಯವಾಗಿದೆ. ಇಂದಿನ ಮಕ್ಕಳೇ ಮುಂದಿನ ದೇಶದ ಆಸ್ತಿ ಆಗಲಿದ್ದಾರೆ. ಆದರೆ, ಕೆಲ ಸ್ಥಾಪಿತ ಹಿತಾಶಕ್ತಿಗಳು ರಾಜಕೀಯ ಲಾಭಕ್ಕಾಗಿ ಕಾಲೇಜು ಕ್ಯಾಂಪಸ್‍ಗಳಲ್ಲಿ ನಿರಂತರ ಶಾಂತಿ ಕದಡುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿ ಸಮೂಹ ಇಂತಹ ಯಾವುದೇ ಪುಚೋದನೆ, ಪುಲೋಭನೆಗೆ ಒಳಗಾಗದೆ ತಮ್ಮ ಭವಿಷ್ಯದತ್ತ ಗಮನ ಹರಿಸಬೇಕಾಗಿದೆ. ಅನಗತ್ಯ ವಿಚಾರಗಳ ಮೂಲಕ ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟ ವಾಡುವುದು ನಿಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್.ಎಸ್.ಯು.ಐ) ಶಾಲಾ-ಕಾಲೇಜು ಕ್ಯಾಂಪಸ್ ಗಳಲ್ಲಿ ಸಾಮರಸ್ಯ ಸ್ಥಾಪಿಸುವ ಉದ್ದೇಶದಿಂದ ಮಾನವ ಸರಪಳಿ, ಕರಪತ್ರ ವಿತರಣೆ, ಪೋಸ್ಮರ್ ಪುದರ್ಶನ, ಬೀದಿ ನಾಟಕ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಎನ್.ಎಸ್.ಯು.ಐ ಮುಖಂಡರು ಹೇಳಿದ್ದಾರೆ.

 
ಕಾರ್ಯಕ್ರಮದ ಕುರಿತು ಮಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಳಿಕ ಕರಪತ್ರ ಬಿಡುಗಡೆಗೊಳಿಸಿದ್ದಾರೆ. ಈ ಸಂದರ್ಭದಲ್ಲಿ NUCI ಜಿಲ್ಲಾದ್ಯಕ್ಷ ಸವಾದ್ ಸುಳ್ಯ ಮತ್ತು ಸುವಾನ್ ಆಳ್ವ. ಶಾನ್ ಸೀರಿ, ಶಕೀಲ್ ಉಳ್ಳಾಲ. ಅಹಿಯಾಜ್. ಸಾಹಿಲ್, ಸನಿತ್ ಬಗೆಂೀರ, ನಿಖಿಲ್ ಶೆಟ್ಟಿ NUCI ಅಧ್ಯಕ್ಷ ಸಿರಾಜ್ ಗೂದೂರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು