Monday, January 20, 2025
ಸುದ್ದಿ

ಬಾಲಿವುಡ್ ಗ್ಲಾಮರ್ ಗೊಂಬೆ ಜಾಕ್ವೆಲಿನ್ ಫನಾಂಡಿಸ್‍ಗೆ ಕಂಟಕವಾದ ವಂಚಕ ಸುಕೇಶ್ ಚಂದ್ರಶೇಖರ್ ಹೇಳಿಕೆ.. – ಕಹಳೆ ನ್ಯೂಸ್

ರಾಜಕಾರಣಿ ಬಂಧು ಎಂದು ಹೇಳಿಕೊಂಡು ನೂರಾರು ಜನರಿಗೆ ಕೋಟ್ಯಂತರ ರುಪಾಯಿ ವಂಚನೆ ಮಾಡಿದ ಆರೋಪದಡಿ ಜೈಲು ಸೇರಿರುವ ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರ್ ಜತೆ ಶ್ರೀಲಂಕಾದ ಮೂಲದ ಬಾಲಿವುಡ್ ನಟಿ ಜಾಕ್ವೆಲಿನ್ ಫನಾರ್ಂಡಿಸ್ ಹೆಸರು ತಳುಕು ಹಾಕಿಕೊಂಡಿರೋದು ತಿಳಿದಿರೋ ವಿಚಾರ. ಆದ್ರೆ ವಿಚಾರಣೆ ವೇಳೆ ಜಾಕ್ವೆಲಿನ್ ಫರ್ನಾಂಡಿಸ್ ‘ಈ ಬಗ್ಗೆ ನನಗೇನು ಗೊತ್ತಿಲ್ಲ… ಆತ ನನಗೆ ಪರಿಚಯ ಅಷ್ಟೇ’ ಎಂದು ಹೇಳಿದ್ರು. ಇದೀಗ ಈ ವಿಚಾರವಾಗಿ ಅಧಿಕಾರಿಗಳಲ್ಲಿ ಸುಕೇಶ್ ಸ್ಪಷ್ಟನೆ ನೀಡಿದ್ದಾನೆ.. ನಾನು ವಂಚಕನಲ್ಲ, ಆಕೆ ಜೊತೆ ರಿಲೇಷನ್‍ಶಿಪ್‍ನಲ್ಲಿ ಇದ್ದಿದ್ದು ನಿಜ ದಯವಿಟ್ಟು ನನ್ನನ್ನು ನಂಬಿ. ಆಕೆ ಹೇಳುತ್ತಿರುವುದೆಲ್ಲ ಸುಳ್ಳು ಎಂದು ಅಧಿಕಾರಿಗಳ ಮುಂದೆ ಹೇಳಿದ್ದಾನಂತೆ.

 
ಬಾಲಿವುಡ್ ಗ್ಲಾಮರ್ ಗೊಂಬೆ, ತೆಳ್ಳಗೆ ಬೆಳ್ಳಗೆ ಬಳುಕುವ ನೀಲಕಾಯದ ಸುಂದರಿ ಜಾಕ್ವೆಲಿನ್ ಫನಾಂಡಿಸ್. ಹಾಗೇ ಯಾರ್ಂಪ್ ಮೇಲೆ ಮಾರ್ಜಾಲ ನಡಿಗೆಯಲ್ಲಿ ಮೋಡಿ ಮಾಡಿ ಬಾಲಿವುಡ್‍ನಲ್ಲಿ ಮಿಂಚುತ್ತಿರೋ ಚೆಂದುಳ್ಳಿ ಚೆಲುವೆ ಮೂಲತಃ ಶ್ರೀಲಂಕಾದವರು. ಸದ್ಯ ಬಾಲಿವುಡ್‍ನಲ್ಲಿ ಟಾಪ್ ಹೀರೋಯಿನ್. ಅಷ್ಟೆ ಅಲ್ಲದೆ ಹಿಂದಿ, ಕನ್ನಡ ಸೇರಿದಂತೆ ಬಾಲಿವುಡ್‍ನಲ್ಲಿ ತನ್ನ ಮೈಮಾಟದ ಮೂಲಕ ವೈಯಾರವನ್ನ ತೋರಿಸಿ ಅಭಿಮಾನಿಗಳ ಮನಗೆದ್ದು, ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಸುರದುಂದರಿ.. ಈಕೆಗೆ ಇದೀಗ ಸುಕೇಶ್ ಜೊತೆಗಿನ ಒಡನಾಟ ಕಂಟಕವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

‘ಸುಕಶ್ ನನಗೆ ಗೊತ್ತಿಲ್ಲ, ಆತ ನನಗೆ ಪರಿಚಯ ಅಷ್ಟೇ’ ಅನ್ನೋ ಜಾಕ್ವೆಲಿನ್‍ಗಾಗಿ ಸುಕೇಶ್ ಕೋಟ್ಯಾಂತರ ಹಣ ಖರ್ಚು ಮಾಡಿದ್ದಾನೆ ಅನ್ನೋದು ತನಿಖೆ ಮೇಲೆ ಬೆಳಕಿಗೆ ಬಂದಿದೆ. ಇವಿಷ್ಟೆ ಅಲ್ಲದೆ ಸುಕೇಶ್ ಚಂದ್ರಶೇಖರ್ ಬಾಲಿವುಡ್ ನಟಿ ಜಾಕಲಿನ್ ಫರ್ನಾಂಡಿಸ್ ಜೊತೆ 500 ಕೋಟಿ ರೂಪಾಯಿ ಬಜೆಟ್‍ನ ದೊಡ್ಡ ಸರಣಿ ಚಿತ್ರಗಳನ್ನು ಮಾಡಲು ಬಯಸಿದ್ದರು ಎಂಬ ಮಾತುಗಳು ಕೇಳಿ ಬಂದಿತ್ತು. ಇನ್ನು ಅದಿಕಾರಿಗಳ ವಿಚಾರಣೆ ವೇಳೆ ಸುಕೇಶ್ ಇತ್ತೀಚೆಗೆ ಜಾಕಲಿನ್‍ಗೆ ಕೊಟ್ಟಿದ್ದ ಗಿಫ್ಟ್ ಬಗ್ಗೆಯೂ ಮಾಹಿತಿ ನೀಡಿದ್ದಾನೆ.

ಯಾರದ್ದೂ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನೊವಂತೆ ವರ್ತಿಸಿದ ಸುಕೇಶ್ ಇದೀಗ ಮಾಡಿದ್ದುನ್ನೋ ಮಹರಾಯ ಅನ್ನೋವಂತೆ ಕಂಬಿ ಹಿಂದೆ ಬಿದ್ದಿದ್ದಾನೆ. ರಾಶಿ ರಾಶಿ ಹಣ, ಕೋಟ್ಯಾಂತರ ಬೆಲೆಯ ಉಡುಗೊರೆಯನ್ನ ಪಡೆದುಕೊಂಡು ಐಶಾರಾಮಿಯಾಗಿ ಬದುಕುತ್ತಿದ್ದ ಜಾಕಲಿನ್ ಫನಾರ್ಂಡಿಸ್ ಇದೀಗ ಸಂಕಷ್ಟದಲ್ಲಿ ಸಿಲುಕಿರೋದಂತು ಸತ್ಯ…