Monday, January 20, 2025
ಸುದ್ದಿ

ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಅಪ್ಪು ಭಾವಚಿತ್ರ ಮುದ್ರಣ – ಕೆಎಂಎಫ್ ವತಿಯಿಂದ ರಾಜರತ್ನನಿಗೆ ವಿಶೇಷ ಗೌರವ – ಕಹಳೆ ನ್ಯೂಸ್

ಅಭೂತ ಪೂರ್ವ ಸಾಧನೆ ಮಾಡಿ, ಎಲ್ಲರ ಮನದಲ್ಲೂ ನೆನಪಿನ ಚಿತ್ತಾರ ಮೂಡಿಸಿ, ಕೊನೆಗೆ ಎಲ್ಲರನ್ನ ಮೂಕವಾಗಿಸಿ, ಮೌನವಾಗಿ ಬಾರದ ಲೋಕದತ್ತ ನಡೆದ ಕನ್ನಡ ಚಿತ್ರರಂಗದ ರಾಜರತ್ನ ಹಾಗೂ ಅಭಿಮಾನಿಗಳ ನಗು ಮುಖದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನರಾಗಿ ಎರಡು ತಿಂಗಳು ಕಳೆದಿವೆ. ಅಪ್ಪು ನಮ್ಮೊಂದಿಗೆ ಇಲ್ಲ ಅನ್ನೋದನ್ನ ಯಾವ ಮನಸ್ಸೋ ಒಪ್ಪಿಕೊಳ್ಳೊದಿಕ್ಕೆ ಸಿದ್ದವಿಲ್ಲ. ಈ ನಡುವೆ ಪ್ರತಿ ಮನೆಯಲ್ಲಿ ರಾಜಕುಮಾರ ರಾರಾಜಿಸಲಿದ್ದಾರೆ.


ಹೌದು, ಯಾವುದೇ ಸಂಭಾವನೆ ತೆಗೆದುಕೊಳ್ಳದೆ ರೈತರ ಪರ ನಿಂತಿದ್ದ ಡಾ. ರಾಜ್‍ಕುಮಾರ್ ಅವರ ಆದರ್ಶಗಳನ್ನ ಪಾಲಿಸಿಕೊಂಡ ಪುನೀತ್ ರಾಜ್‍ಕುಮಾರ್ ಕೂಡ ಒಂದು ರೂಪಾಯಿ ಸಂಭಾವನೆ ಪಡೆಯದೆ ಕೆಎಂಎಫ್ ನಂದಿನಿ ಹಾಲಿನ ರಾಯಭಾರಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕೆಎಂಎಫ್ ವತಿಯಿಂದ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ನಂದಿನಿ ಪ್ಯಾಕೆಟ್ ಮೇಲೆ ಪುನೀತ್ ರಾಜ್ ಕುಮಾರ್ ಭಾವಚಿತ್ರವನ್ನ ಪ್ರಿಂಟ್ ಮಾಡಿ ವಿಶೇಷ ಗೌರವ ಸೂಚಿಸಲಾಗಿದೆ. ವರ್ಷದ ಕೊನೆಯ ದಿನವಾದ ಇಂದು ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಅಪ್ಪು ಭಾವಚಿತ್ರವನ್ನ ಮುದ್ರಿಸಿದ್ದಾರೆ. ಹೀಗಾಗಿ, ಕೋಟ್ಯಂತರ ಅಭಿಮಾನಿಗಳಿಗೆ ಕೆಎಂಎಫ್ ಕಂಪೆನಿಯ ಕಾರ್ಯಕ್ಕೆ ಮೆಚ್ಚಿಗೆ ಸೂಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು