Monday, January 20, 2025
ದಕ್ಷಿಣ ಕನ್ನಡಸುದ್ದಿ

ಎಡಪದವು ಗ್ರಾಮ ಪಂಚಾಯತ್ ವತಿಯಿಂದ ಪದ್ಮಶ್ರೀ ಹರೇಕಳ ಹಾಜಬ್ಬನವರಿಗೆ ನೆರವೇರಿದ ಸನ್ಮಾನ ಕಾರ್ಯಕ್ರಮ – ಕಹಳೆ ನ್ಯೂಸ್

ಎಡಪದವು ಗ್ರಾಮ ಪಂಚಾಯತ್ ವತಿಯಿಂದ ಪದ್ಮಶ್ರೀ ಹರೇಕಳ ಹಾಜಬ್ಬನವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ, ಹರೇಕಳ ಹಾಜಬ್ಬನವರಿಗೆ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರು ಸನ್ಮಾನಿಸಿ ಮಾತಾನಾಡಿದ್ರು.


ಸಮಾಜಮುಖಿ ಕಾರ್ಯಗಳನ್ನು ಮಾಡಿದವರ, ಒಳ್ಳೆಯ ವ್ಯಕ್ತಿತ್ವದ, ದೇಶಭಕ್ತಿ ಹೊಂದಿರುವವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡುವ ಮೂಲಕ ಅವರ ಸಾಧನೆಗೆ ಪ್ರಧಾನಿ, ರಾಷ್ಟçಪತಿ, ಇಡೀ ಆಡಳಿತ ವ್ಯವಸ್ಥೆಯೇ ತಲೆಬಾಗುತ್ತದೆ. ಜಾತಿ, ಮತ, ಪಂಥ ಮೀರಿ ಹರೇಕಳ ಹಾಜಬ್ಬನವರಿಗೆ ಪದ್ಮಶ್ರೀ ದೊರಕಿರುವದು ಇದಕ್ಕೆ ಸಾಕ್ಷಿ ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರು ಹೇಳಿದರು.
ಹಾಜಬ್ಬನವರು ತಮ್ಮ ಊರಿನ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದಂತೆ ನಾವು ಕೂಡ ನಮ್ಮ ಊರಿನ ಶಾಲೆಗಳ ಅಭಿವೃದ್ಧಿಯಲ್ಲಿ ತೊಡಗಿಕೊಂಡರೆ ಅದು ಅವರಿಗೂ ಕೊಡುವ ಗೌರವವಾಗುತ್ತದೆ ಎಂದು ಶಾಸಕರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

 

ಇದೇ ಸಂದರ್ಭದಲ್ಲಿ ಎಡಪದವು ಗ್ರಾಮ ಪಂಚಾಯತ್ ನಲ್ಲಿ ಡಿಜಿಟಲ್ ಗ್ರಂಥಾಲಯ, ಪುಸ್ತಕ ಗೂಡು, ಘನತ್ಯಾಜ್ಯ ಘಟಕದ ವಾಹನದ ಚಾಲನೆ, 3 ನಾಗರಿಕರಿಗೆ 94ಸಿಸಿ ಹಕ್ಕುಪತ್ರ ವಿತರಣೆ, ಶೇಕಡಾ 25 ಅನುದಾನದಲ್ಲಿ 18 ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ನೀರಿನ ಸಿಂಟ್ಯಾಕ್ಸ್ ವಿತರಣೆ ಹಾಗೂ 4 ಫಲಾನುಭವಿಗಳಿಗೆ ಉಜ್ವಲ ಗ್ಯಾಸ್ ವಿತರಣೆ ಶಾಸಕರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಎಡಪದವು ಗ್ರಾ.ಪ. ಅಧ್ಯಕ್ಷರಾದ ಸುಕುಮಾರ್ ದೇವಾಡಿಗ, ಉಪಾಧ್ಯಕ್ಷರಾದ ಪ್ರೇಮ, ಪಂಚಾಯತ್ ಪಿಡಿಒ ರಾಜೀವಿ ಡಿ ನಾಯ್ಕ್, ಪಂಚಾಯತ್ ಸರ್ವ ಸದಸ್ಯರು, ಸ್ಥಳೀಯ ಭಾಗದ ಪಕ್ಷದ ಪ್ರಮುಖರು, ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.