Recent Posts

Saturday, September 21, 2024
ಸುದ್ದಿ

ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕರಾಗಿದ್ದ ಬಸ್ತಿ ವಾಮನ್ ಮಾಧವ್ ಶೆಣೈ ವಿಧಿವಶ – ಕಹಳೆ ನ್ಯೂಸ್

ಮಂಗಳೂರು : ಪ್ರಸಿದ್ಧ ಕೊಂಕಣಿ ಕಾರ್ಯಕರ್ತ, ವಿಶ್ವ ಕೊಂಕಣಿ ಸರ್ದಾರ್ ಎಂದು ಜನಪ್ರಿಯರಾಗಿದ್ದ, ಮಂಗಳೂರಿನ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕರಾಗಿದ್ದ ಬಸ್ತಿ ವಾಮನ್ ಮಾಧವ್ ಶೆಣೈ ಅವರು ಭಾನುವಾರ ನಸುಕಿನ ವೇಳೆ ಇಹಲೋಕ ತ್ಯಜಿಸಿದ್ದಾರೆ. ಕಳೆದೆರಡು ತಿಂಗಳಿಂದ ವಯೋಸಹಜವಾಗಿ ಅವರ ಆರೋಗ್ಯ ಹದಗೆಟ್ಟಿತ್ತು.


ಜನವರಿ 3 ರಂದು ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ 9 ರಿಂದ 10.ರವರೆಗೆ ಸಾರ್ವಜನಿಕರಿಗೆ ಗೌರವ ಸಲ್ಲಿಸಲು ವಿಶ್ವ ಕೊಂಕಣಿ ಕೇಂದ್ರದಲ್ಲಿ ಇರಿಸಲಾಗುವುದು.ಮಧ್ಯಾಹ್ನ 12 ಗಂಟೆಗೆ ಅವರ ಜನ್ಮಸ್ಥಳ ಬಂಟ್ವಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಬಸ್ತಿ ವಾಮನ್ ಶೆಣೈ ಅವರು 6 ನವೆಂಬರ್ 1934 ರಂದು ಬಂಟ್ವಾಳದಲ್ಲಿ ಜನಿಸಿದರು. ಅವರ ತಂದೆ ಬಸ್ತಿ ಮಾಧವ್ ಶೆಣೈ ಅವರು ಮೋತ್ರ ಮಾಧವ್ ಎಂದು ಜನಪ್ರಿಯರಾಗಿದ್ದರು, ಅವರು ಮಂಗಳೂರಿನ ಆಗಿನ ಪ್ರಸಿದ್ಧ ಸಿಪಿಸಿ ಬಸ್ ಸೇವೆಯ ಬುಕಿಂಗ್ ಏಜೆಂಟ್ ಆಗಿದ್ದರು. ಬಸ್ತಿ ಮಾಧವ ಶೆಣೈ ಅವರು ತಮ್ಮ ನಾಯಕತ್ವದ ಗುಣಗಳಿಂದಾಗಿ ಎಲ್ಲ ಸಮುದಾಯದ ಜನರಿಂದ ಗೌರವಕ್ಕೆ ಪಾತ್ರರಾಗಿದ್ದರು.
1993 ರಲ್ಲಿ ಬಸ್ತಿ ವಾಮನ್ ಶೆಣೈ ಕರ್ನಾಟಕ ಕೊಂಕಣಿ ಭಾಷಾ ಮಂಡಲದ ಅಧ್ಯಕ್ಷರಾದರು. ಕೆನರಾ ಹೈಸ್ಕೂಲ್ ಮಂಗಳೂರಿನಲ್ಲಿ ಕೊಂಕಣಿ ಭಾಷೆಯ ಬೋಧನೆಯನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೊಂಕಣಿ ಅಕಾಡೆಮಿಯ ಸ್ಥಾಪನೆಗಾಗಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಒತ್ತಡ ತಂದಿದ್ದರು . ಅವರ ಪ್ರಯತ್ನದಿಂದಾಗಿ 1994-95 ರಲ್ಲಿ ಅಂದಿನ ಕರ್ನಾಟಕದ ಮುಖ್ಯಮಂತ್ರಿ ಡಾ. ವೀರಪ್ಪ ಮೊಯ್ಲಿ ಅವರು ರಾಜ್ಯದಲ್ಲಿ ಕೊಂಕಣಿ ಅಕಾಡೆಮಿಯನ್ನು ಸ್ಥಾಪಿಸುವುದಾಗಿ ಘೋಷಿಸಿದರು. ಹೀಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು