Recent Posts

Saturday, September 21, 2024
ಸುದ್ದಿ

ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ : ಕಾಲೇಜು ವಿದ್ಯಾರ್ಥಿನಿ ಸಾವು- ಕಹಳೆ ನ್ಯೂಸ್

ಹೊನ್ನಾವರ: ಚಾಲಕನ ನಿಯಂತ್ರಣ ತಪ್ಪಿ ಟೆಂಪೊವೊ0ದು ಪಲ್ಟಿಯಾಗಿದ ಘಟನೆ ಮಾಗೋಡ ಗ್ರಾಮದ ಕುಟ್ಟೋಡಿ ಕ್ರಾಸ್ ಬಳಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯಲ್ಲಿ ಓರ್ವ ಯುವತಿ ಮೃತಪಟ್ಟಿದ್ದು, ಪ್ರಿನ್ಸಿಟಾ ಪ್ರಾನ್ಸಿಸ್ ಮಿರಾಂಡ ಎಂದು ಗುರುತಿಸಲಾಗಿದೆ.
ಈ ವೇಳೆ ಪಿಯದಾದ ಲೋಪಿಸ್, ರೇಕಲ್ ಮಿರಾಂಡ, ಕೇರಾ ಮಿರಾಂಡ, ರೇಖಾ ಮಾರಿಯೋ ಮಿರಾಂಡ, ಲೆನ್ಸಿಟಾ ಮಿರಾಂಡ, ಪಿಲೋಮಿನಾ ಮಿರಾಂಡ ಇವರು ಗಾಯಗೊಂಡಿದ್ದಾರೆ. ಗಾಯಳುಗಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಜಾಹೀರಾತು

ಇಡಗುಂಜಿ ನಗರಬಸ್ತಿಕೇರಿ ರಸ್ತೆಯ ಮೂಲಕ ಸಂಶಿಯ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಟೆಂಪೋವನ್ನು ಚಲಾಯಿಸಿಕೊಂಡು ಬಂದ ವೇಳೆ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.