ರಾಷ್ಟ್ರೀಯ ವಿಚಾರಧಾರೆ ಸೆಲೆಯಾಗಿ ವಿದ್ಯಾರ್ಥಿಗಳನ್ನು ಜ್ಞಾನ ದೀವಿಗೆಗಳನ್ನಾಗಿಸುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದ ವಿದ್ಯಾರ್ವಧಕ ಸಂಘದ ನರೇಂದ್ರ ಪದವಿಪೂರ್ವ ಕಾಲೇಜು – ಕಹಳೆ ನ್ಯೂಸ್
ರಾಷ್ಟ್ರೀಯ ಚಿಂತನೆಗಳಿಂದೊಳಗೊಂಡು ಮೌಲ್ಯಯುತ ಶಿಕ್ಷಣದ ಮೂಲಕವಾಗಿ ಶತಮಾನದ ಇತಿಹಾಸವುಳ್ಳ ವಿವೇಕಾನಂದ ವಿದ್ಯಾವರ್ಧಕ ಸಂಘದ ೫೭ ನೇ ವಿದ್ಯಾ ಸಂಸ್ಥೆಯಾಗಿ ಪುತ್ತೂರಿನ ಹೃದಯ ಭಾಗದಲ್ಲಿರುವ ತೆಂಕಿಲದಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜು ಪ್ರವರ್ಧಮಾನಕ್ಕೆ ಬಂದಿರುತ್ತದೆ. ಒಬ್ಬ ಸಾಮಾನ್ಯ ವಿದ್ಯಾರ್ಥಿಯನ್ನು ಮಾನಸಿಕವಾಗಿ ಸದೃಢನನ್ನಾಗಿಸಿ , ಬೌದ್ಧಿಕ ಸಾಮರ್ಥ್ಯವನ್ನು ವೃದ್ಧಿಸಿ , ವಿದ್ಯಾರ್ಥಿಗೆ ಕಲಿಕೆಯ ಅನುಭವವನ್ನು ಮೂರ್ತರೂಪದಲ್ಲಿ ನೀಡಲು , ಕ್ರೀಡಾಸ್ಫೂರ್ತಿಯನ್ನು ವೃದ್ಧಿಸಿ ಸಂಸ್ಕಾರಯುತವಾದ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗೆ ಸತ್ಕಾರ್ಯವನ್ನು ಮಾಡಲು ಮತ್ತು ಸಮಾಜಮುಖಿ ಜೀವನ ನಡೆಸಲು ಪ್ರೇರೇಪಿಸುವುದೇ ನರೇಂದ್ರ ಶಿಕ್ಷಣ ಸಂಸ್ಥೆಯ ಧ್ಯೇಯೋದ್ದೇಶ. ಮಾತೃಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಧ್ಯೇಯೋದ್ಧೇಶಗಳನ್ನು ಪೂರೈಸುವ ನಿಟ್ಟಿನಲ್ಲಿ ಎಲ್ಲಾ ನುರಿತ, ಅನುಭವಿ ಉಪನ್ಯಾಸಕರ ತಂಡ ಕರ್ತವ್ಯ ನಿರ್ವಹಿಸುತ್ತಾ ಬಂದಿದೆ.
ವಿವಿಧ ಸಾಮಾಜಿಕ ಸ್ತರದಿಂದ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗೆ ಸಂಸ್ಕಾರ ನೀಡಿ , ಮಾನವೀಯ ಮೌಲ್ಯಗಳನ್ನು ಧಾರೆ ಎರೆದು, ಸಾಂಘಿಕ ಬದುಕಿನ ಅರಿವು ಮೂಡಿಸಿ, ಪ್ರಜ್ಞಾವಂತ ನಾಗರಿಕರನ್ನಾಗಿ ರೂಪಿಸುವ ಮಹತ್ವದ ಹೊಣೆಗಾರಿಕೆಯನ್ನು ಹೊತ್ತಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಯ ಆಂತರ್ಯದಲ್ಲಿ ಹುದುಗಿರುವ ಅನೇಕ ತೆರನಾದ ಪ್ರತಿಭೆಗಳಿಗೆ ವಿವಿಧ ರೂಪದಲ್ಲಿ ಅವಕಾಶವನ್ನು ನೀಡಲಾಗಿದೆ. ಸರಸ್ವತಿ ವಂದನೆಯೊಂದಿಗೆ ಆರಂಭಗೊಂಡು ಶಾಂತಿ ಮಂತ್ರದೊಂದಿಗೆ ಮುಕ್ತಾಯಗೊಳ್ಳುವ ಈ ವಿದ್ಯಾಲಯದಲ್ಲಿ ಪ್ರತೀ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಯೋಗ ಧ್ಯಾನ, ಆಪ್ತ ಸಮಲೋಚನೆಗಳ ಮೂಲಕ ಬೌದ್ಧಿಕ ಮಾನಸಿಕ ಧೃಡತೆ ಕಾಯ್ದುಕೊಳ್ಳುವ ವಿಶೇಷ ಪ್ರಯತ್ನ ಇಲ್ಲಿದೆ. ಸಮಾಜಮುಖಿಯಾಗಿ ಬಾಳಲು ಸಾಮಾಜಿಕ ಕಾರ್ಯಗಳೊಂದಿಗೆ ಗ್ರಾಮೀಣ ಅಭಿವೃದ್ಧಿಗೋಸ್ಕರ, ಗ್ರಾಮ ವಿಕಾಸ ಸಮಿತಿಯು ರಚನೆಯೆಗೊಂಡು ನೆರೆಯ ಗ್ರಾಮವಾದ ಕುರಿಯದಲ್ಲಿ ಹಲವು ಕಾರ್ಯಕ್ರಮಗಳು ಚಾಲನೆಯಲ್ಲಿದೆ. ಅದರಲ್ಲಿ ಸಂಸ್ಥೆಯ ಪ್ರತಿಯೊಬ್ಬರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಆಧುನಿಕ ಸ್ಪರ್ಧಾತ್ಮಕ ಬದುಕಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ಕ್ಷೇತ್ರಕ್ಕೆ ಆವಶ್ಯವಿರುವ ಅಇಖಿ ,ಓಇಇಖಿ ,ಎಇಇ ,ಅPಖಿ ಮುಂತಾದವುಗಳಿಗೆ ಶುಲ್ಕ ರಹಿತ ತರಬೇತಿ ನೀಡುತ್ತಿರುವ ಏಕೈಕ ಶಿಕ್ಷಣ ಸಂಸ್ಥೆ ಎಂಬುದು ಗಮನಾರ್ಹ ವಿಷಯವಾಗಿದೆ. ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯಕ್ಕೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಕಾಲಕಾಲಕ್ಕೆ ವಿವಿಧ ಹಂತಗಳಲ್ಲಿ ತರಬೇತಿಗಳನ್ನು ನೀಡಲಾಗುತ್ತದೆ.ಸಂಸ್ಕಾರಯುತ ಶಿಕ್ಷಣವೆಂಬ ಹೆಸರಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿಯರಿಗೆ ವರ್ಷದಲ್ಲಿ ಎರಡು ಬಾರಿ ಸಂಸ್ಕಾರ ಶಿಬಿರದ ಮೂಲಕ ವಿವಿಧ ಮಾಹಿತಿ ,ತರಬೇತಿ ,ಕಲಿಕೆ ,ಸನಾತನ ಸಾಂಸ್ಕೃತಿಕ ಮೌಲ್ಯಗಳನ್ನು ನೀಡುತ್ತದೆ .ಇದಲ್ಲದೆ ಕ್ರೀಡಾಕ್ಷೇತ್ರಕ್ಕು ವಿಶೇಷವಾದ ಮಾನ್ಯತೆಯನ್ನು ನೀಡಲಾಗಿದೆ .
ಕಾಲೇಜಿನ ಪ್ರತಿಭಾವಂತ ಆಟಗಾರರು, ಕಾಲೇಜಿನ ಹೆಸರು, ಕೀರ್ತಿಯನ್ನು ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಪಸರಿಸುವಲ್ಲಿ ಕಾರಣಕರ್ತರಾಗಿದ್ದಾರೆ. ಅಂತಹ ಉದಯೋನ್ಮುಖ ಪ್ರತಿಭಾವಂತ ಆಟಗಾರರನ್ನು, ಗುರುತಿಸಿ, ಪ್ರೋತ್ಸಾಹಿಸಿ, ಸಾಧಕರಲ್ಲಿ ಕ್ರೀಡಾಸ್ಫೂರ್ತಿಯನ್ನು ಹುರಿದುಂಬಿಸುವಲ್ಲಿ ಈ ಶಿಕ್ಷಣ ಸಂಸ್ಥೆ ವಿಶೇಷ ಕಾಳಜಿ ವಹಿಸುತ್ತದೆ. ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳಾದ- ವಾಚನಾಲಯ, ಪ್ರಯೋಗಾಲಯದ ಸೌಲಭ್ಯವಿದೆ.ಮಕ್ಕಳ ಹಿತ ರಕ್ಷಣಾ ಸಮಿತಿಯು ಸಕ್ರಿಯವಾಗಿದ್ದು , ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಗೆ ಯಾವ ಸಮಸ್ಯೆಯೂ ಬಾರದ ಹಾಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಕಾಲ ಕಾಲಕ್ಕೆ ಪೋಷಕರ ಸಭೆಯು ನಡೆಯುತ್ತಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯ ಸಮಗ್ರಹಿತಚಿಂತನೆಯನ್ನು ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಎಲ್ಲಾ ರೀತಿಯ ವೈಶಿಷ್ಯತೆಗಳನ್ನು ಹೊಂದಿರುವ ಆಧುನಿಕ ಹಾಗೂ ಸಾಂಪ್ರದಾಯಿಕ ಶೈಕ್ಷಣಿಕ ಮೌಲ್ಯಗಳನ್ನು ಸಮರ್ಪಕ ಪ್ರಮಾಣದಲ್ಲಿ ಅನುಷ್ಠಾನಗೊಳಿಸುತ್ತಿರುವ ನರೇಂದ್ರ ಪದವಿ ಪೂರ್ವ ಕಾಲೇಜು ಸದ್ಯದಲ್ಲೇ ಸುಸಜ್ಜಿತವಾದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದೆ. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪಕ್ಕದಲ್ಲೇ ನೂತನ ಕಟ್ಟಡದ ಕಾಮಗಾರಿಯು ಭರದಿಂದ ಸಾಗುತ್ತಿದ್ದು, ಮುಂದಿನ ಕೆಲವೇ ಸಮಯದಲ್ಲಿ ಹೊಸ ಕಟ್ಟಡದಲ್ಲಿ ಇನ್ನಷ್ಟು ಸೃಜನಶೀಲ ಚಟುವಟಿಕೆಗಳೊಂದಿಗೆ ಕಾರ್ಯಾರಂಭಗೊಳ್ಳಲಿರುವ ಈ ಶಿಕ್ಷಣ ಸಂಸ್ಥ…