Recent Posts

Saturday, September 21, 2024
ದಕ್ಷಿಣ ಕನ್ನಡಸುದ್ದಿ

2.5 ಕೋಟಿ ವೆಚ್ಚದಲ್ಲಿ ಮಣ್ಣಗುಡ್ಡೆ ಗುರ್ಜಿ – ಉರ್ವ ಜಂಕ್ಷನ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಿದ ಶಾಸಕ ವೇದವ್ಯಾಸ ಕಾಮತ್- ಕಹಳೆ ನ್ಯೂಸ್

ಮಂಗಳೂರು: ಮಣ್ಣಗುಡ್ಡೆ ಗುರ್ಜಿಯಿಂದ ಉರ್ವ ಮಾರ್ಕೆಟ್ ಜಂಕ್ಷನ್ ವರೆಗೆ 2.5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಮಂಗಳೂರು ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ನಗರದ ಬೆಳವಣಿಗೆಗೆ ತಕ್ಕಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ದೃಷ್ಟಿಯಿಂದ ಅನೇಕ ಯೋಜನೆಗಳಿಗೆ ಯೋಜನೆ ರೂಪಿಸಲಾಗುತ್ತಿದೆ. ಮಣ್ಣಗುಡ್ಡೆ ಗುರ್ಜಿಯಿಂದ ಉರ್ವ ಮಾರ್ಕೆಟ್ ಜಂಕ್ಷನ್ ವರೆಗೆ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ 2.5 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದ್ದು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದೇವೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ವಾಹನ ಸಂಚಾರದಲ್ಲಿ ಒಂದಷ್ಟು ಬದಲಾವಣೆಯಾಗಬಹುದು ಆದರೆ ಅಭಿವೃದ್ಧಿಯ ನೆಲೆಯಲ್ಲಿ ಜನರ ಸಹಕಾರ ಅತೀ ಅಗತ್ಯ ಎಂದು ಹೇಳಿದರು. Video : ವೈಟ್ ಬೋರ್ಡ್ ನೋಂದಣಿ ಹೊಂದಿರುವ ಖಾಸಗಿ ವಾಹನದಲ್ಲಿ ಬಾಡಿಗೆ ನಡೆಸದಂತೆ ಸಾರಿಗೆ ಆಯುಕ್ತರಿಗೆ ಮನವಿ ಸಲ್ಲಿಸಿದ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್ ರಿ

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳೀಯ ಕಾರ್ಪೋರೇಟರ್ ಸಂಧ್ಯಾ ಮೋಹನ್ ಆಚಾರ್ ಮಾತನಾಡಿ, ಮಣ್ಣಗುಡ್ಡೆ ಗುರ್ಜಿಯಿಂದ ಉರ್ವ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ಅಗತ್ಯವನ್ನು ಮನಗಂಡು ಶಾಸಕರು ಅನುದಾನ ಒದಗಿಸಿದ್ದಾರೆ. ವಾರ್ಡಿನ ಅಭಿವೃದ್ಧಿಯ ನೆಲೆಯಲ್ಲಿ ಶಾಸಕರು ಸಹಕಾರ ಮತ್ತು ಸ್ಪಂದನೆ ನೀಡುವ ಕಾರಣ ಮಣ್ಣಗುಡ್ಡೆ ವಾರ್ಡ್ ಪ್ರಗತಿಯೆಡೆಗೆ ಸಾಗುತ್ತಿದೆ ಎಂದರು.

ಜಾಹೀರಾತು

ಈ ಸಂದರ್ಭದಲ್ಲಿ ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ ಸದಸ್ಯರಾದ ಗಣೇಶ್ ಕುಲಾಲ್, ಪೂರ್ಣಿಮಾ, ಬಿಜೆಪಿ ಮುಖಂಡರಾದ ವಸಂತ್ ಶೇಟ್, ಮೋಹನ್ ಆಚಾರ್, ವೆಂಕಟೇಶ್ ಆಚಾರ್, ಶ್ರೀದೇವಿ ಆಚಾರ್,ರೇಖಾ ಶೆಟ್ಟಿ, ವೇಣುಗೋಪಾಲ ಶೆಣೈ, ಸುಕುಮಾರ್ ಶೆಟ್ಟಿ, ಅರ್ಶಾದ್ ಪೋಪಿ, ಹರೀಶ್ ಬೋಳೂರು, ಪ್ರಶಾಂತ್ ಮಠದಕಣಿ, ಯೋಗೀಶ್ ಪಟ್ಟೆ, ಸುಧಾಕರ್ ಶೆಟ್ಟಿ, ಬಿಜೆಪಿ ಕಾರ್ಯಕರ್ತರು, ಅಧಿಕಾರಿಗಳು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.