Sunday, November 24, 2024
ದಕ್ಷಿಣ ಕನ್ನಡಸುದ್ದಿ

ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಂಡ ವಿಶ್ವ ಗಾಣಿಗರ ಚಾವಡಿ (ರಿ.) ಸೋಶಿಯಲ್ ಮೀಡಿಯಾ ತಂಡ ಆಯೋಜಿಸಿದ ವಿಶ್ವ ಗಾಣಿಗ ಟ್ರೋಫಿ- 2022- ಕಹಳೆ ನ್ಯೂಸ್

ವಿಶ್ವ ಗಾಣಿಗರ ಚಾವಡಿ (ರಿ.) ಸೋಶಿಯಲ್ ಮೀಡಿಯಾ ತಂಡ ಆಯೋಜಿಸಿದ ವಿಶ್ವ ಗಾಣಿಗ ಟ್ರೋಫಿ- 2022 ಕ್ರಿಕೆಟ್ ಹಾಗೂ ಲಗೋರಿ ಪಂದ್ಯಾಟ ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಂಡಿದ್ದು, ಅತ್ಯುತ್ತಮವಾಗಿ ಮೂಡಿಬಂದಿದೆ.. ಸಹಾಯಾರ್ಥವಾಗಿ ನಡೆಸಿದ ಲಕ್ಕಿಡಿಪ್ ವಿತರಣೆ ದಾಖಲೆ ಬರೆದಿದೆ.

ವಿಶ್ವ ಗಾಣಿಗ ಚಾವಡಿ ಟ್ರೋಫಿ-2022ಗಾಗಿ ತಯಾರಿಸಿದ ವಿಶ್ವ ಗಾಣಿಗರ ಚಾವಡಿ ಟಿ-ಶರ್ಟ್ ಸಂಪೂರ್ಣ ವಿತರಣೆಯಾಗಿದ್ದು, ಕಡೇ ಕ್ಷಣದಲ್ಲಿ ಬೇಡಿಕೆ ಹೆಚ್ಚಾಗಿದ್ದರಿಂದ ಹೆಚ್ಚಿನವರಿಗೆ ವಿತರಿಸಲು ಸಾಧ್ಯವಾಗಿಲ್ಲ.
ಕಳೆದ ಬಾರಿ ಕ್ರೀಡಾಕೂಟದಲ್ಲಿ ನೂರಕ್ಕೂ ಅಧಿಕ ಮಂದಿ ನೇತ್ರದಾನದ ಘೋಷಣಾ ಪತ್ರಕ್ಕೆ ಸಹಿ ಹಾಕಿ ನೀಡಿದ್ದರು. ಈ ಬಾರಿ ಹೆಚ್ಚುವರಿಯಾಗಿ 11 ಹೆಸರುಗಳ ಸೇರ್ಪಡೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಒಟ್ಟು 32 ಕ್ರಿಕೆಟ್ ಹಾಗೂ ಲಗೋರಿ ತಂಡಗಳು ಭಾಗವಹಿಸಿದ್ಧು, 3 ಕಡೆಗಳಲ್ಲಿ ಏಕಕಾಲಕ್ಕೆ ಕ್ರೀಡಾಕೂಟ ನಡೆಯಿತು. ಕ್ರೀಡಾಕೂಟದ ವ್ಯವಸ್ಥೆಯಲ್ಲಿ ಕೈಜೋಡಿಸಿದ್ದ ಸದಸ್ಯರು ಶನಿವಾರ ರಾತ್ರಿ 3 ಗಂಟೆವರೆಗೂ ಮೈದಾನ ಹಾಗೂ ಕಾರ್ಯಕ್ರಮ ಸಿದ್ಧತೆಯಲ್ಲಿ ಶ್ರದ್ಧೆಯಿಂದ ಭಾಗವಹಿಸಿದರು.

ಸ್ವಯಂಸೇವಕರಾಗಿ ನೂರಕ್ಕೂ ಅಧಿಕ ಮಂದಿ ಕೈಜೋಡಿಸಿದ್ದು, ವಿಶೇಷವಾಗಿ ತಿಂಗೊಲ್ದ ಬೊಲ್ಪು ಸೇವಾ ಯೋಜನೆಗೆ ದೇಣಿಗೆಯನ್ನು ನೀಡಿ ದಾನಿಗಳು ಸೇವಾ ಯೋಜನೆಗಳನ್ನು ನಡೆಸಲು ಸಹಕಾರ ಹಸ್ತ ಚಾಚಿದ್ದಾರೆ.

ನೂರಕ್ಕೂ ಅಧಿಕ ದಾನಿಗಳು, ಪ್ರಾಯೋಜಕರು, ಮಾರ್ಗದರ್ಶಕರು ಕ್ರೀಡಾಕೂಟಕ್ಕೆ ಪೆÇ್ರೀತ್ಸಾಹಿಸಿದ್ದು, ಉಡುಪಿ, ದ.ಕ. ಕಾಸರಗೋಡು ಜಿಲ್ಲೆಯ ಎಲ್ಲಾ ಗಾಣಿಗ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಹಕಾರವನ್ನು ನೀಡಿದರು.
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರು ತುರ್ತು ಕಾರ್ಯಕ್ರಮದ ನಿಮಿತ್ತ ಬರಲು ಸಾಧ್ಯವಿಲ್ಲ ಎಂದು ಕರೆಮಾಡಿ ಮುಂಚಿತವಾಗಿ ಬೆಂಬಲವನ್ನು ಸೂಚಿಸಿದ್ದರು.

ಕಾರ್ಯಕ್ರಮದಲ್ಲಿ ಶಾಸಕರಾದ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಯು.ಟಿ.ಖಾದರ್, ವೇದವ್ಯಾಸ್ ಕಾಮತ್ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು ಬೆಂಬಲವನ್ನು ಘೋಷಿಸಿದ್ದು, ದ.ಕ. ಜಿಲ್ಲಾಧಿಕಾರಿ, ಕಮೀಷನರ್, ಪೆÇಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಂಗಳೂರು, ಮಹಾನಗರ ಪಾಲಿಕೆ ಕೂಡಾ ಸಹಕಾರವನ್ನು ನೀಡಿದ್ದಾರೆ.
ಕ್ರೀಡಾಕೂಟಕ್ಕೆ ಫೆವೀಲಿಯನ್ ಹಾಗೂ ಸ್ಥಳಾವಕಾಶವನ್ನು ಮಾಜಿ ಮೇಯರ್ ಮಹಾಬಲ ಮಾರ್ಲ ರವರು ನೀಡಿದ್ದು, ಮೈದಾನ ಸಿಬ್ಬಂದಿ ರೋಹಿತ್ ಮೈದಾನ ಸಿದ್ಧಗೊಳಿಸಿದರು.

ಕ್ರೀಡಾಕೂಟಕ್ಕೆ ಸಹಕಾರ ನೀಡಿದ ಎಲ್ಲಾ ದಾನಿಗಳಿಗೂ, ಪ್ರಾಯೋಜಕರಿಗೂ, ಜಾಹೀರಾತುದಾರರಿಗೂ, ಕ್ರೀಡಾಪಟುಗಳಿಗೂ, ಕ್ರೀಡಾಭಿಮಾನಿಗಳಿಗೂ, ವಿಜಿಸಿ ಪದಾಧಿಕಾರಿಗಳಿಗೂ, ಗೌರವ ಸಲಹೆಗಾರರಿಗೂ, ಎಲ್ಲಾ ಉಪಸಮಿತಿ ಸದಸ್ಯರಿಗೂ, ಸ್ವಯಂಸೇವಕರಿಗೂ, ಎಲ್ಲಾ ಸದಸ್ಯರಿಗೂ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ವಿಜಿಸಿ ತಂಡದವರು ಧನ್ಯವಾದಗಳನ್ನರ್ಪಿಸಿದರು.