Monday, January 20, 2025
ದಕ್ಷಿಣ ಕನ್ನಡಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ಮಾಣ ಹಂತದಲ್ಲಿರುವ ಶ್ರೀನಿಕೇತನ ಮಂದಿರಕ್ಕೆ ಸುಮಾರು ಒಂದುವರೆ ಲಕ್ಷ ಮೊಬಲಗಿನ ಡಿಡಿ ಹಸ್ತಾಂತರ – ಕಹಳೆ ನ್ಯೂಸ್

ಕಲ್ಲಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಿಂದೂ ಧಾರ್ಮಿಕ ಸೇವಾ ಸಮಿತಿ ಕೆಲಿಂಜ ಇದರ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಶ್ರೀನಿಕೇತನ ಮಂದಿರಕ್ಕೆ ಸುಮಾರು ಒಂದುವರೆ ಲಕ್ಷದ ಮೊಬಲಗಿನ ಡಿಡಿ ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ ಇದರ ಯೋಜನಾಧಿಕಾರಿ ಶ್ರೀಯುತ ಚೆನ್ನಪ್ಪ ಗೌಡ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಯುತ ಪದ್ಮನಾಭ ಗೌಡ ಅಢೈಯಿಯವರಿಗೆ ಹಸ್ತಾಂತರಿಸಿದರು .

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಶ್ರೀಮತಿ ಸುಗುಣ ಶೆಟ್ಟಿ, ಕೆಲಿಂಜ ಒಕ್ಕೂಟದ ಸೇವಾ ಪ್ರತಿನಿಧಿ ಶ್ರೀಮತಿ ರೇಣುಕಾ, ಪ್ರಮುಖರಾದ ಕೊರಗಪ್ಪ ಗೌಡ, ರಾಜೇಂದ್ರ ಟೈಲರ್ ,ವೀರಕಂಭ ಗ್ರಾಮ ಪಂಚಾಯತ್ ಸದಸ್ಯ ಸಂದೀಪ್ ಪೂಜಾರಿ, ಜಯನಾಥ ಗೌಡ, ಶ್ರವಣ್ ಮಾಡದಾರ್, ದೇವಪ್ಪ ಕೆಲಿಂಜ, ಮತ್ತಿತ್ತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು