Recent Posts

Monday, April 7, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೊಳ್ಳಿಮಾರು ಕೊರಗಜ್ಜ ಕ್ಷೇತ್ರದಲ್ಲಿ ಜ.08ಕ್ಕೆ ನಿಗದಿಯಾಗಿದ್ದ ನೇಮೋತ್ಸವ: ಕೊರೋನಾ ಕರ್ಫ್ಯೂ ಹಿನ್ನೆಲೆ ಜ.07ಕ್ಕೆ ನಿಗದಿ- ಕಹಳೆ ಕಹಳೆ ನ್ಯೂಸ್

ಬಂಟ್ವಾಳ : ವೈಜ್ಙಾನಿಕತೆಗೆ ಸವಾಲೆಸೆದಿರುವ ಕಾವಳ ಮೂಡೂರು ಗ್ರಾಮದ, ಕಾರ್ಣಿಕ ಕ್ಷೇತ್ರ, ಶ್ರೀ ಆದಿಶಕ್ತಿ ಬೊಳ್ಳಿಮಾರು ಶ್ರೀ ಕೊರಗಜ್ಜ ಕ್ಷೇತ್ರ ಬೊಳ್ಳಿಮಾರು ಇಲ್ಲಿ ಜನವರಿ 8 ರಂದು ನಡೆಯಲಿರುವ ಕೊರಗಜ್ಜ ದೈವದ ನೇಮೋತ್ಸವವನ್ನು ಜನವರಿ 07 ಶುಕ್ರವಾರದಂದು ನಡೆಸುವುದಾಗಿ ತೀರ್ಮಾನಿಸಲಾಗಿದೆ.


ಕೊರೋನಾ ಹಿನ್ನೆಲೆ ಸರ್ಕಾರ ತೆಗೆದುಕೊಂಡಿರುವ ನಿಯಮಗಳ ಅನುಸಾರ ವೀಕೆಂಡ್ ಕರ್ಫ್ಯೂ ಇರುವುದರಿಂದ ಜನ 8 ಶನಿವಾರ ನಡೆಯಲಿದ್ದ ನೇಮೋತ್ಸವ, ಜನವರಿ 7 ಶುಕ್ರವಾರದಂದು ನೇಮೋತ್ಸವ ನಡೆಲಿದೆ. ಹೀಗಾಗಿ ಭಕ್ತಾಧಿಗಳು ಸಹಕರಿಸಬೇಕಾಗಿ ಕ್ಷೇತ್ರದ ಧರ್ಮದರ್ಶಿಗಳಾದ ವಿಜಯ್ ಸಾಲ್ಯಾನ್ ವಿನಂತಿಸಿಕೊAಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಬೆಳಗ್ಗೆ ಗಣಹೋಮ, ಮಧ್ಯಾಹ್ನ ಆದಿಶಕ್ತಿ ದುರ್ಗಾಪರಮೇಶ್ವರಿ ಅಮ್ಮನವರ ಮಹಾಪೂಜೆ, ಜೊತೆಗೆ ಅಜ್ಜ ಹಾಗೂ ಪರಿವಾರ ಶಕ್ತಿಗಳಿಗೆ ವಿಶೇಷ ಪೂಜೆ ನಡೆಯಲಿದೆ. ಬಳಿಕ ರಾತ್ರಿ 8 ಗಂಟೆಗೆ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಪರ್ಕ ಸಂಖ್ಯೆ: 8088191227, 7899947088

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ