Recent Posts

Sunday, January 19, 2025
ಸುದ್ದಿ

Breaking News : ಎರ್ಮಾಯ್ ಫಾಲ್ಸ್‌ನಲ್ಲಿ ಕನಸು ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ದುರ್ಮರಣ – ಕಹಳೆ ನ್ಯೂಸ್

ಬೆಳ್ತಂಗಡಿ, ಮೇ 30: ನಿನ್ನೆ ಎಡೆಬಿಡದೇ ಸುರಿದ ಮಳೆಗೆ ಕರಾವಳಿಯೇ ನಲುಗಿ ಹೋಗಿದ್ದು, ನಿರ್ದೇಶಕರೊಬ್ಬರು ಎರ್ಮಾಯ್ ಫಾಲ್ಸ್‌ನಲ್ಲಿ ಬಲಿಯಾಗಿದ್ದಾರೆ.

ಮಹಾಮಳೆಗೆ ಫಾಲ್ಸ್‌ನಲ್ಲಿ ಬಲಿಯಾಗಿರುವ ವ್ಯಕ್ತಿಯನ್ನು ನಿರ್ದೇಶಕ ಸಂತೋಷ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕನಸು ಚಿತ್ರದ ನಿರ್ದೇಶಕರಾಗಿರುವ ಸಂತೋಷ್ ಶೆಟ್ಟಿ ಫೋಟೋಶೂಟ್ ಮಾಡಲೆಂದು ದ.ಕ ಜಿಲ್ಲೆಯ ಉಜಿರೆ ಸಮೀಪವಿರುವ ಎರ್ಮಾಯ್ ಫಾಲ್ಸ್ ಬಳಿ ಬಂದಿದ್ದರು. ಚಿತ್ರೀಕರಣ ನಡೆಸುತ್ತಿದ್ದ ಈ ವೇಳೆ ಕಾಲು ಜಾರಿ ಬಿದ್ದು ಸಂತೋಷ್ ಶೆಟ್ಟಿ ನೀರುಪಾಲಾಗಿದ್ದಾರೆ.

ದಟ್ಟಾರಣ್ಯದಲ್ಲಿರುವ ಈ ಎರ್ಮಾಯ್ ಫಾಲ್ಸ್ ಗೆ ಇಂದು ಮುಂಜಾನೆ ವೇಳೆ ಒಬ್ಬ ಮಹಿಳೆ ಸೇರಿದಂತೆ ನಾಲ್ಕು ಜನರ ತಂಡ ಆಗಮಿಸಿತ್ತು. ಈ ಫಾಲ್ಸ್ ನಲ್ಲಿ 40-50 ಅಡಿ ಎತ್ತರದಿಂದ ನೀರು ಧುಮುಕುತ್ತಿದ್ದು, ನಿನ್ನೆ ಸುರಿದ ಮಳೆಗೆ ನೀರಿನ ಅರಿವು ಕೂಡ ಹೆಚ್ಚಾಗಿತ್ತು. ಚಿತ್ರೀಕರಣ ಮಾಡುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬಂದಿಗಳು ಸ್ಥಳಕ್ಕೆ ತೆರಳಿ ಸಂತೋಷ್ ಅವರ ಶವವನ್ನು ಮೇಲಕ್ಕೆತ್ತಿದ್ದಾರೆ.