Recent Posts

Sunday, January 19, 2025
ಬಂಟ್ವಾಳರಾಜಕೀಯರಾಜ್ಯಸುದ್ದಿ

ಕೊರಗಜ್ಜನ ವೇಷ ಧರಿಸಿ ಬಂದ ಮುಸ್ಲಿಂ ವರ ; ಹಿಂದೂ ಜಾಗರಣ ವೇದಿಕೆಯಿಂದ ದೂರು, FIR ದಾಖಲು – ಕಹಳೆ ನ್ಯೂಸ್

ವಿಟ್ಲ: ತುಳುನಾಡಿನ ಕಾರ್ನಿಕದ ದೈವವಾದ ಕೊರಗಜ್ಜನ ವೇಷ ಭೂಷಣ ಧರಿಸಿ ವರ ಆಗಮಿಸಿದ ಘಟನೆ ವಿಟ್ಲ ಸಮೀಪದ ಸಾಲೆತ್ತೂರಿನಲ್ಲಿ ನಡೆದಿದೆ.

ಕೊರಗಜ್ಜನ ವೇಷ ಭೂಷಣ ಧರಿಸಿ ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿದುಕೊಂಡ ಬಂದ ವರನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕೃತ್ಯವೆಸಗಿದವರ ಮತ್ತು ಆತನ ಸಂಗಡಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ವತಿಯಿಂದ ವಿಟ್ಲ ಠಾಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ಚೇತನ್ ಕಡಂಬು, ಹರ್ಷ ರೈ, ಗಣೇಶ್ ಕಡಂಬು,ರಾಜೇಶ್ ಮಿತ್ತನಡ್ಕ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಕಾರ್ಯದರ್ಶಿ ಚೇತನ್ ಕಡoಬು, ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಕಾರ್ಯದರ್ಶಿ ಹರ್ಷ, ಹಿಂದೂ ಜಾಗರಣ ವಿಟ್ಲ ತಾಲೂಕು ಉಪಾಧ್ಯಕ್ಷ ರಾಜೇಶ್ ಕರೋಪಾಡಿ, ಯೋಗೀಶ್ ಅಳಿಕೆ, ಗಣೇಶ್ ಕಡoಬು, ಉಪಸ್ಥಿತರಿದ್ದರು.