Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ.ಲಿಯೋ ನೊರೊನ್ಹಾ ಅವರಿಗೆ ಸನ್ಮಾನ ಮತ್ತು ಬಿಳ್ಕೊಡುಗೆ- ಕಹಳೆ ನ್ಯೂಸ್

ಪುತ್ತೂರು : ಕಳೆದ ಹನ್ನೆರಡು ವರ್ಷಗಳಿಂದ ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ. ಲಿಯೋ ನೊರೊನ್ಹಾ ಅವರಿಗೆ ಬಿಳ್ಕೊಡುಗೆ ಮತ್ತು ಸನ್ಮಾನ ಸಮಾರಂಭವನ್ನು ಕಾಲೇಜಿನ ಶಿಕ್ಷಕ ಮತ್ತು ಶಿಕ್ಷಕೇತರ ಸಂಘದಿಂದ ಇತ್ತೀಚೆಗೆ ಆಯೋಜಿಸಲಾಗಿತ್ತು. “ನನ್ನ ವೃತ್ತಿ ಜೀವನನದ ಬಹುಭಾಗವನ್ನು ಸಂತಫಿಲೋಮಿನಾ ಕಾಲೇಜಿನಲ್ಲಿ ಕಳೆದಿದ್ದೇನೆ” ಎಂದು ಸನ್ಮಾನ ಸ್ವೀಕರಿಸುತ್ತ ಹೇಳಿದ ಪ್ರೊ.ಲಿಯೋ ನೊರೊನ್ಹಾ ಕಾಲೇಜಿನಲ್ಲಿ ಕಳೆದ ದಿನಗಳನ್ನು ಸ್ಮರಿಸಿಕೊಂಡರು. “ ಇಂದು ಶಿಕ್ಷಣ ಕ್ಷೇತ್ರವು ತೀವ್ರ ಗತಿಯಲ್ಲಿ ಬದಲಾಗುತ್ತಿದೆ. ನೂತನ ಶಿಕ್ಷಣ ನೀತಿಯ ಅನುಷ್ಠಾನದಿಂದ ಉಂಟಾಗುವ ಬದಲಾವಣೆಗಳನ್ನು ಎದುರಿಸಲು ಶಿಕ್ಷಕರು ಸಿದ್ಧವಾಗಬೇಕಾದ ಅನಿವಾರ್ಯತೆ ಇದೆ” ಎಂದು ಎಚ್ಚರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

“ ಕಾಲೇಜಿನಲ್ಲಿ ಎನ್‍ಸಿಸಿ ಅಧಿಕಾರಿಯಾಗಿದ್ದ ಪ್ರೊ.ಲಿಯೋ, ಶಿಸ್ತಿಗೆ ಅತೀ ಹೆಚ್ಚಿನ ಮಹತ್ವ ಕೊಟ್ಟವರು. ಯಾವುದೇ ಸಂದರ್ಭದಲ್ಲಿ ಸಹನೆ ಕಳೆದುಕೊಳ್ಳದೇ ಸಮಸ್ಯೆಗಳನ್ನು ನಿಭಾಯಿಸುತ್ತಿದ್ದ ರೀತಿ ಅನುಕರಣೀಯ” ಎಂದು ಕಾಲೇಜಿನ ನೂತನ ಪ್ರಾಂಶುಪಾಲರಾಗಿ ನೇಮಕಗೊಂಡ ರೆ|ಡಾ| ಆ್ಯಂಟನಿ ಪ್ರಕಾಶ್ ಮೊಂತೆರೋ ಹೇಳಿದರು. Breaking News : ಕೆಲ ಹಿಂದೂ ವಿರೋಧಿ ನೀತಿಗಳಿಂದ ಹಿಂದೂ ಜಾಗರಣಾ ವೇದಿಕೆ ಕೆಂಗಣ್ಣಿಗೆ ಗುರಿಯಾಗಿದ್ದ ಪುಂಜಾಕಟ್ಟೆ ಠಾಣಾ ಎಸೈ ಸೌಮ್ಯ ಎತ್ತಂಗಡಿ 

ಕಾಲೇಜಿನ ಸಂಚಾಲಕರಾದ ರೆ|ಫಾ| ಜೆರೋಮ್ ಲಾರೆನ್ಸ್ ಮಸ್ಕರೇನ್ಹಸ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. “ಅದ್ಯಾಪಕರಾಗಿ, ಪ್ರಾಂಶುಪಾಲರಾಗಿ ಪ್ರೊ.ಲಿಯೋ ನೊರೊನ್ಹಾ ನೀಡಿದ ಸೇವೆ ಅನನ್ಯ. ಅವರ ಪ್ರಾಮಾಣಿಕತೆ, ಕರ್ತವ್ಯಶೀಲತೆ, ಸರಳತೆ, ಸ್ನೇಹಪರತೆ ಎಲ್ಲರಿಗೂ ಮಾದರಿ. ಸವಾಲನ್ನು ದಿಟ್ಟತನದಿಂದ ಎದುರಿಸುವ ಅಗಾಧ ಮನೋಬಲ ಅವರಿಗಿತ್ತು. ಶಿಕ್ಷಕನಾಗಿ, ಕಾಲೇಜಿನ ಪ್ರಾಂಶುಪಾಲನಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿ ನಿಜ ಅರ್ಥದಲ್ಲಿ ದೇವರ ಸೇವೆ ಮಾಡಿದ್ದಾರೆ” ಎಂದು ಪ್ರಶಂಸಿಸಿದರು.

ಸಂತಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ| ಫಾ| ವಿಜಯ್ ಲೋಬೋ, ಕಾಲೇಜಿನ ಕ್ಯಾಂಪಸ್ ನಿರ್ದೇಶಕ ರೆ| ಫಾ| ಸ್ಟ್ಯಾನಿ ಪಿಂಟೋ ವೇದಿಕಲ್ಲಿ ಉಪಸ್ಥಿತರಿದ್ದರು. ಇಂಗ್ಲೀಷ್ ವಿಭಾಗ ಮುಖ್ಯಸ್ಥೆ ಶ್ರೀಮತಿ ಭಾರತಿ ಎಸ್ ರೈ ಅವರು ಸನ್ಮಾನ ಪತ್ರವನ್ನು ವಾಚಿಸಿ ಶುಭಾಶಂಸನೆ ಮಾಡಿದರು. ಶ್ರೀಮತಿ ವಾರಿಜ ಮತ್ತು ತಂಡ ಪ್ರಾರ್ಥಿಸಿದರು. ಶಿಕ್ಷಕ ಸಂಘದ ಕಾರ್ಯದರ್ಶಿ ಪ್ರೊ.ಗಣೇಶ್ ಭಟ್ ಸ್ವಾಗತಿಸಿ ಸಂಘದ ಅಧ್ಯಕ್ಷ ಪ್ರೊ.ಝುಬೇರ್ ವಂದಿಸಿದರು. ಡಾ.ಮಾಲಿನಿ ಕಾರ್ಯಕ್ರಮ ನಿರ್ವಹಿಸಿದರು.