Saturday, November 23, 2024
ಕ್ರೀಡೆಮೂಡಬಿದಿರೆಸುದ್ದಿ

ದಕ್ಷಿಣ ಕನ್ನಡ ಮೂಡಬಿದಿರೆ 81ನೇ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಸಮಾಪನ – ಮಂಗಳೂರು ವಿವಿಗೆ ಸಮಗ್ರ ಪ್ರಶಸ್ತಿ, ಪಂಜಾಬ್‌ನ ಲವ್ಲಿ ಪ್ರೊಪೆಷನಲ್ ರನ್ನರ್ ಅಫ್- ಕಹಳೆ ನ್ಯೂಸ್

ಮೂಡುಬಿದಿರೆ: ಮಂಗಳೂರು ವಿವಿಯ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆದ 81ನೇ ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿಯು 6 ಚಿನ್ನ, 6-ಬೆಳ್ಳಿ ಹಾಗೂ 4 ಕಂಚಿನ ಪದಕದೊಂದಿಗೆ 105 ಅಂಕಗಳನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

42 ಅಂಕಗಳನ್ನು ಗಳಿಸಿರುವ ಪಂಜಾಬ್ ಪಾಗ್ವಾರ್‌ನ ಲವ್ಲಿ ಪ್ರೊಫೆಷನಲ್ ವಿವಿಯು ರನ್ನರ್ ಅಫ್ ಪ್ರಶಸ್ತಿ ಹಾಗೂ ರೋಟ್ಹಾಕ್ ಮಹರ್ಷಿ ದಯಾನಂದ ವಿವಿಯು 37 ಅಂಕಗಳನ್ನು ದಾಖಲಿಸಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಕೂಟದಲ್ಲಿ ಪಂಜಾಬ್‌ನ ಪಟಿಯಾಲ ವಿವಿಯ ಅಕ್ಷ್ ದೀಪ್ ಸಿಂಗ್ ಉತ್ತಮ ಕ್ರೀಡಾಪಟುವಾಗಿ ಮೂಡಿ ಬಂದಿದ್ದಾರೆ.

ಶುಕ್ರವಾರ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಮತ್ತು ಅಧಾನಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅವರು ಜಂಟಿಯಾಗಿ ಪ್ರಶಸ್ತಿ ಪ್ರದಾನ ಮಾಡಿದರು.

ನಂತರ ಮಾತನಾಡಿದ ಕೋಟ್ಯಾನ್ ಅವರು ಮುಂದಿನ ಓಲಂಪಿಕ್ ಕ್ರೀಡೆಗೆ ಸಹಕಾರಿಯಾಗುವಂತೆ ಕ್ರೀಡಾಪಟುಗಳನ್ನು ಆಳ್ವಾಸ್ ಸಂಸ್ಥೆಯು ವ್ಯವಸ್ಥಿತ ರೀತಿಯಲ್ಲಿ ಸಜ್ಜುಗೊಳಿಸುತ್ತಿದೆ. ಈ ಕ್ರೀಡಾಕೂಟವು ಹಿಂದಿನ ಹಲವಾರು ರಾಷ್ಟ್ರೀಯ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿರುವುದು ಗಮನಾರ್ಹ. ಕ್ರೀಡೆಯಲ್ಲಿ ಕ್ರೀಡಾರ್ಥಿಗಳು ತಾವು ಎಣಿಸಿದಂತೆ ನಡೆಯದೆ ಇದ್ದರೂ, ಫಲಿತಾಂಶದಲ್ಲಿ ವ್ಯತ್ಯಾಸ ಕಾಣಬಹುದು. ಸತತ 5 ವರ್ಷಗಳಿಂದ ಕ್ರೀಡೆಯನ್ನು ಮಂಗಳೂರು ವಿವಿ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಯು ಜಂಟಿಯಾಗಿ ಆಯೋಜಿಸುತ್ತಾ ಬರುವ ಮೂಲಕ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ ಎಂದರು.

ಮಂಗಳೂರು ವಿವಿಯ ರಿಜಿಸ್ಟರ್ ಕಿಶೋರ್ ಕುಮಾರ್ ಸಿ.ಕೆ, ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಮಂಗಳೂರು ಎ.ಪಿ.ಎಂ.ಸಿ ಅಧ್ಯಕ್ಷ ಕೃಷ್ಣರಾಜ್ ಹೆಗ್ಡೆ, ದ.ಕ ವಾರ್ತಾಧಿಕಾರಿ ರವಿರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೈನ್ ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಯು.ವಿ. ಶಂಕರ್, ಅಮರಾವತಿ ವಿವಿ ನಿರ್ದೇಶಕ ಡಾ. ಅವಿನಾಶ್ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ ಉಪಸ್ಥಿತರಿದ್ದರು.

ಮಂಗಳೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್ ಎಸ್. ಡಿ’ಸೋಜ ಧನ್ಯವಾದ ಸಮರ್ಪಿಸಿದರೆ, ತಮಿಳುನಾಡಿನ ಎ.ಎಲ್. ಮುತ್ತು ಮತ್ತು ದೆಹಲಿಯ ರೂಬಿ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಚಿತ್ರಗಳು : 7 ಮೂಡ್ ಮಂಗಳೂರು ವಿವಿ ಚಾಂಪಿಯನ್

ಕೂಟದಲ್ಲಿ 8 ನೂತನ ದಾಖಲೆಗಳು
ನಾಲ್ಕನೇ ದಿನವಾಗಿರುವ ಶುಕ್ರವಾರದಂದು 400*100 ಮೀಟರ್ ರಿಲೆಯಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿರುವ ಆಳ್ವಾಸ್‌ನ ಕ್ರೀಡಾಪಟುಗಳಾದ ಶ್ರಿಜನ್ ಥೋಮಸ್, ತೀರ್ಥಶ್, ಅಭಿನ್ ದೇವಾಡಿಗ ಮತ್ತು ವಿಘ್ನೇಶ್ 40.74 ಸೆಕುಂಡುಗಳಲ್ಲಿ ಕ್ರಮಿಸಿ ನೂತನ ಕೂಟ ದಾಖಲೆಯನ್ನು ನಿರ್ಮಿಸಿದ್ದಾರೆ. ಉಳಿದಂತೆ ಮೂರು ದಿನಗಳಲ್ಲಿ ಮಂಗಳೂರು ವಿವಿ ಆದೇಶ್ (10000 ಮೀ.ಓಟ), ಪಂಜಾಬ್ ಪಟಿಯಾಲ ವಿವಿಯ ಅಕ್ಷ್ ದೀಪ್ ಸಿಂಗ್ (20 ಕಿಮೀ ನಡಿಗೆ), ಗುರು ನಾನಕ್ ದೇವ್ ವಿವಿಯ ಹರೇಂದ್ರ ಕುಮಾರ್( 1500ಮೀ ಓಟ), ಕುರುಕ್ಷೇತ್ರ ವಿವಿಯ ಫ್ರಿನ್ಸ್ ( 5000ಮೀ ಓಟ), ಮಹಾತ್ಮಗಾಂಧಿ ವಿವಿ ಕೊಟ್ಟಾಯಂನ ಸಿದ್ಧಾರ್ಥ್ ಎ.ಕೆ.( ಫೋಲ್ ವಾಲ್ಟ್ ), ಚೌದರಿದೇವಿಲಾಲ್ ವಿವಿ ಸಿರ್ಸ ಹರಿಯಾಣದ ವಿಕಾಸ್ (ಚಕ್ರ ಎಸೆತ), ಮಹಾರ್ಷಿ ದಯಾನಂದ ವಿವಿಯ ಲೊಕೇಶ್ ಚೌದಾರ್ (ಸ್ಟೀಪಲ್ ಚೇಸ್ ) ಹೀಗೆ ಒಟ್ಟು 8 ಕೂಟ ದಾಖಲೆಗಳು ನಿರ್ಮಾಣವಾಗಿದೆ.

* ಸಮಗ್ರ ಚಾಂಪಿಯನ್ ಶಿಫ್‌ಗೆ ಪ್ರಶಸ್ತಿ ಸಹಿತ 50,000, ರನ್ನರ್ ಅಫ್‌ಗೆ 30,000, ತೃತೀಯ ಪ್ರಶಸ್ತಿಗೆ 20,000, ಕೂಟ ದಾಖಲೆ ಮಾಡಿರುವ ಕ್ರೀಡಾಪಟುಗಳಿಗೆ ತಲಾ 25,000ದಂತೆ 2ಲಕ್ಷ ರೂ.ವನ್ನು ಹಾಗೂ ಎಲ್ಲಾ ವಿಜೇತ ಕ್ರೀಡಾಪಟುಗಳಿಗೆ ಪ್ರಥಮ-25000, ದ್ವಿತೀಯ-15000 ಹಾಗೂ ತೃತೀಯ ಸ್ಥಾನಕ್ಕೆ 10,000 ನಗದು ಪುರಸ್ಕಾರವನ್ನು ನೀಡುವ ಮೂಲಕ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ/ಎಂ.ಮೋಹನ್ ಆಳ್ವ ಕ್ರೀಡಾಪಟುಗಳಿಗೆ ಆರ್ಥಿಕವಾಗಿ ಪ್ರೋತ್ಸಾಹ ನೀಡಿರುವುದು ಗಮನಾರ್ಹ.

* ಆಳ್ವಾಸ್ ಶಿಕ್ಷಣ ಸಂಸ್ಥೆಯು 5ನೇ ಬಾರಿಗೆ ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ ಚಾಂಪಿಯನ್ ಶಿಫ್ ಆಯೋಜನೆ ಮಾಡಿರುವುದು ಶ್ಲಾಘನೀಯ.
* ಸಂಜೆ ಕ್ರೀಡಾ ಸ್ಪರ್ಧೆಗಳು ಮುಗಿದ ಬಳಿಕ ಜಾಗೋ ಭಾರತ್ ಕಲಾವಿದರಿಂದ ರಾಷ್ಟ್ರ ಭಕ್ತಿಗೀತೆಗಳ ಗಾಯನ ಮತ್ತು ಆಳ್ವಾಸ್ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರಗು ನೀಡಿದವು.
* 400 ವಿವಿಯಿಂದ 4000ಕ್ಕೂ ಅಧಿಕ ಕ್ರೀಡಾಪಟುಗಳು, 1000ಕ್ಕೂ ಅಧಿಕ ಕ್ರೀಡಾಧಿಕಾರಿಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.

ವಿಜೇತರಿಗೆ ನಗದು ಪುರಸ್ಕಾರ:
ಕ್ರೀಡಾಕೂಟದಲ್ಲಿ 300ಕ್ಕೂ ಅಧಿಕ ವಿವಿ ಸುಮಾರು 3,500 ಅಥ್ಲೀಟ್‌ಗಳು ಹಾಗೂ 1000 ಕ್ರೀಡಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿಜೇತರಾದ ಕ್ರೀಡಾಪಟುಗಳಿಗೆ ನಗದು ನೀಡಲಾಗುತ್ತಿದ್ದು, ಅದರಲ್ಲಿ ಪ್ರಥಮ 25,000, ದ್ವಿತೀಯ 15,000 ಹಾಗೂ ತೃತೀಯ ಸ್ಥಾನಗಳಿಸಿದ ಕ್ರೀಡಾಳುವಿಗೆ 10,000 ನೀಡಿ ಗೌರವಿಸಲಾಗುತ್ತದೆ. ಈ ಕೂಟದಲ್ಲಿ ದಾಖಲೆ ಮಾಡಿದವರಿಗೆ 25,000 ಮತ್ತು ಸಮಗ್ರ ವಿಜೇತ ತಂಡಕ್ಕೆ 50,000, ರನ್ನರ್ ಅಪ್ 30,000 ಮತ್ತು ತೃತೀಯ ಸ್ಥಾನ 20,000ರೂ ನಗದು ಪುರಸ್ಕಾರ ನೀಡಲಾಗುತ್ತದೆ. ಈ ಕ್ರೀಡಾ ಕೂಟವನ್ನು ಖೇಲೋ ಇಂಡಿಯಾ ಹಾಗೂ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.

ಸುಮಾರು ಒಂದು ವಾರದಿಂದ ಸಿದ್ಧತೆಗಳ ತರಾತುರಿಯಲ್ಲಿ ತೊಡಗಿದ್ದು, ಸ್ವಚ್ಛತೆ ಕಾಪಾಡಲೂ ಗಮನ ಹರಿಸಿದೆ. ಮೂಡಬಿದಿರೆಯ ಮೈದಾನ ಟ್ರಾಕ್ ಮತ್ತು ಟೆಂಟ್‌ಗಳಿ0ದ ಕಂಗೊಳಿಸುತ್ತಿದ್ದು, ಸುತ್ತಲೂ ಲೈಟಿಂಗ್‌ಗಳಿ0ದ ಆವೃತಗೊಂಡಿದೆ. ಹೀಗೆ ಆಳ್ವಾಸ್ ಶಿಕ್ಷಣ ಮಾತ್ರವಲ್ಲದೆ ಕ್ರೀಡೆಗಳತ್ತ ಗಮನಹರಿಸಿದ್ದು, ಕ್ರೀಡಾರ್ಥಿಗಳು ನಾಮುಂದು ತಾಮುಂದು ಅಂತ ಇವೆ.