Recent Posts

Sunday, January 19, 2025
ಸಿನಿಮಾಸುದ್ದಿ

ಕುಂಚದ ಬೆಡಗಿ ಅನುಪಮ ಪಿ.ಜಿ. ಈಗ ‘ ನಮ್ಮೂರ ಸಾಧಕಿ ‘ – ಕಹಳೆ ನ್ಯೂಸ್

ಬದಿಯಡ್ಕ : ಕಾಟುಕುಕ್ಕೆಯ ಕಾರ್ತಿಕೇಯ ಚಾರಿಟೆಬಲ ಟ್ರಸ್ಟ್ನ ಈ ಸಲದ ನಮ್ಮೂರ ಸಾಧಕಿ ಗೌರವ ಕಾಟುಕುಕ್ಕೆಯ ಅನುಪಮ ಪಿ.ಜಿ. ಲಭಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಖ್ಯಾತ ಕಾಷ್ಠ ಶಿಲ್ಪಿ ಮತ್ತು ಕಾರ್ಟೂನಿಸ್ಟ್ ಜಿ.ಕೆ. ಭಟ್ ಅವರ ಸುಪುತ್ರಿಯಾಗಿರುವ ಈಕೆ ಈಗ ಬೆಂಗಳೂರು ನಿವಾಸಿ. ಬೆಂಗಳೂರಿನ ಎಚ್.ಎಸ್.ಆರ್. ಲೇ ಔಟ್ ನ ಸಮೀಪದ ಅನುಗ್ರಹ ಲೇಔಟ್ ನ ಮನೆಯೊಂದರಲ್ಲಿ ವಾಸಿಸುತ್ತರುವ ಇವರ ಮನೆಯೇ ಒಂದು ಕಲಾಮಂದಿರ. ಗೋಡೆಯ ತುಂಬಾ ಸೆರಾಮಿಕ್ ಮ್ಯೂರಲ್ ಪೈಂಟಿಂಗ್ ನಿಂದ ಆಧ್ಯಾತ್ಮಿಕ ಸಂವೇದನೆಯನ್ನು ಉಂಟುಮಾಡುತ್ತಾ ಆಧುನಿಕತೆಯ ಸ್ಪರ್ಶದೊಂದಿಗೆ ಇವು ನೋಡುಗರ ಮೈನವಿರೇಳಿಸುತ್ತದೆ. ಇದಲ್ಲದೆ ಪೋಟ್ ಪೈಂಟಿಂಗ್ ಮತ್ತು ತೈಲವರ್ಣ ರಚನೆಯಲ್ಲೂ ಇವರು ಪರಿಣಿತೆ.ಚಿಕ್ಕ ವಯಸ್ಸಿನಲ್ಲಿ ಪೂರಕ ವಾತಾವರಣದೊಂದಿಗೆ ಬೆಳೆದ ಈಕೆ ಗಿಲಿಗಿಲಿ ಮ್ಯಾಜಿಕ್ ಖ್ಯಾತಿಯ ಶಂಕರ್ ಅವರ ತಂಡದಲ್ಲಿ ಸುಮಾರು ಏಳು ವರ್ಷಗಳ ಕಾಲ ಹಲವಾರು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದರು. 2001 ಮಾರ್ಚ್ ತುಷಾರ ಸಂಚಿಕೆಯು ಹೆಸರಿಗೆ ತಕ್ಕಂತಿರುವ ಈ ಅನುಪಮ ಸುಂದರಿಯ ಮಖಪುಟದೊಂದಿಗೆ ಪ್ರಕಟನೆಗೊಂಡಿತ್ತು. ಶಿಕ್ಷಣ ಪಡೆಯುತ್ತಿರುವ ಸಂದರ್ಭದಲ್ಲಿಯೇ ಚಿತ್ರ ರಚನೆಯಲ್ಲಿ ಹಲವಾರು ಬಹುಮಾನಗಳನ್ನು ಗಿಟ್ಟಿಸಿಕೊಂಡ ಈಕೆ ಎಂ.ಕಾಂ. ನಲ್ಲಿ ಹತ್ತನೇಯ ಱಂಕ್ ವಿಜೇತೆ ಕೂಡ ಹೌದು. ಗಣೇಶ್ ಪ್ರಸಾದ್ ಅವರ ಮಡದಿಯಾದ ನಂತರ ಮನದೊಡೆಯನ ಒತ್ತಾಸೆ ಅವರ ಪ್ರವೃತ್ತಿಗೆ ಗರಿಹುಟ್ಟಿಸಿ ಬಾನೆತ್ತರಕ್ಕೆ ಹಾರುವಂತೆ ಮಾಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈಕೆ ಪ್ಯಾಬ್ರಿಕ್ ಪೈಂಟಿಂಗ್ನಲ್ಲಿ ಕೂಡ ನಿಪುಣೆ. ಇವರ ಕಲಾಕೃತಿಯ ಪ್ರದರ್ಶನ ಈಗಾಗಲೇ ರಾಷ್ಟೀಯ ಮತ್ತು ಅಂತಾರಾಷ್ಟೀಯ ಮಟ್ಟದಲ್ಲಿ ಹಲವಾರು ಕಡೆಗಳಲ್ಲಿ ನಡೆದಿದೆ. ಅಲ್ಲದೇ ಕಿಂಗಫಿಷರ್ ಸಂಸ್ಥೆ ಕೂಡ ಇವರ ಕಲಾಕೃತಿಗಳ ಪ್ರದರ್ಶನದ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು. ಈಕೆ ಮಕ್ಕಳು ಹಾಗೂ ಹಿರಿಯರಿಗಾಗಿ ಚಿತ್ರಕಲಾಶಿಬಿರವನ್ನೂ ಕೂಡ ಬೆಂಗಳೂರಿನಲ್ಲಿ ಏರ್ಪಡಿಸುತ್ತಾ ತನ್ನ ಕಲೆಯ ಮೇಲಿನ ಅಭಿಮಾನವನ್ನು ಅಭಿವ್ಯಕ್ತಿಗೊಳಿಸುತ್ತಿದ್ದಾರೆ.


ಕಾಟುಕುಕ್ಕೆ ಸುಬ್ರಾಯ ದೇವಸ್ಥಾನದ ಸಭಾಂಗಣದಲ್ಲಿ ಮೇ 27 ರವಿವಾರ ಸೇಫ್ ಝೋನ್ – 2018 ಶಿಬಿರದಲ್ಲಿ ಮಂಗಳೂರಿನ ಶ್ರೀ ಮಂಜುನಾಥೇಶ್ವರ ಆಯರ್ವೇದಿಕ್ ಆಸ್ಪತ್ರೆಯ ಆಢಳಿತಾಧಿಕಾರಿ ಡಾ| ಪ್ರತಿಭಾ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ವಿಶ್ವವಿದ್ಯಾಲಯ ಯಕ್ಷಗಾನ ಸಂಶೋಧನಾ ಕೇಂದ್ರ ಸಂಯೋಜಕರು ಡಾ| ಧನಂಜಯ್ ಕುಂಬ್ಳೆ ಶ್ರಿ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕಂಡರಿ ಶಾಲೆಯ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ಮತ್ತು ಎಣ್ಮಕಜೆ ಪಂಚಾಯತ್ ಸದಸ್ಯೆ ಮಲ್ಲಕಾ ಜೆ.ರೈ ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ಸಮ್ಮಾನಿತರಾಗಿದ್ದಾರೆ.

ಶಿಬಿರದ ದಿನದಂದು ಈ ಕಲಾವಿದೆಯ ಚಿತ್ರಕಲಾ ಪ್ರದರ್ಶನವನ್ನು ವೀಕ್ಷಿಸಲು ಕಲಾಭಿಮಾನಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.