Saturday, November 23, 2024
ಉಡುಪಿಕ್ರೈಮ್ಸುದ್ದಿ

ಗೋ ದರೋಡೆಕೋರರಿಗೆ ವರವಾಯಿತ್ತೇ ‘ನೈಟ್ ಕರ್ಫ್ಯೂ ‘ ..? ಕಾರ್ಕಳದಲ್ಲಿ ಹಟ್ಟಿಯಲ್ಲಿ ಕಟ್ಟಿದ್ದ ಹಸುವನ್ನು ಕದ್ದೊಯ್ದ ಗೋ ಕಟುಕರು ; ಘಟನಾ ಸ್ಥಳಕ್ಕೆ ಹಿಂದು ಜಾಗರಣಾ ವೇದಿಕೆಯ ಪ್ರಮುಖರು ಭೇಟಿ – ಕಹಳೆ ನ್ಯೂಸ್

ಕಾರ್ಕಳ, ಜ 08 : ಹಟ್ಟಿಯಲ್ಲಿ ಕಟ್ಟಿದ್ದ ಹಸುವನ್ನು ದರೋಡೆಕೋರರು ಕದ್ದೊಯ್ದ ಘಟನೆ ಕಾರ್ಕಳದ ಮಿಯ್ಯಾರಿನ ಕಜೆ ಎಂಬಲ್ಲಿ ನಡೆದಿದೆ.


ಕರಿಯಕಲ್ಲು ಕಜೆ ನಿವಾಸಿ ಯಶೋಧ ಆಚಾರ್ಯರ ಹಟ್ಟಿಯಲ್ಲಿದ್ದ ಹಸುವೊಂದನ್ನು ಕಟುಕರು ಕದ್ದೊಯ್ಯಿದ್ದಾರೆ. ಕಳೆದ ಒಂದು ವರ್ಷದಲ್ಲಿ ಇವರ ಹಟ್ಟಿಯಿಂದ ಗೋ ಕಟುಕರು ಕದ್ದು ದರೋಡೆಗೈದ ಹಸುಗಳು ಬರೋಬರಿ 16. ಹೈನುಗಾರಿಕೆಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿರುವ ಯಶೋಧ ಆಚಾರ್ಯ ಅವರ ಕುಟುಂಬವು ಈ ಎಲ್ಲಾ ಘಟನೆಯಿಂದ ಕಂಗಾಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಮನೆಯ ಸ್ವಲ್ಪ ದೂರದಲ್ಲಿ ಇರುವ ಸುಧಾಕರ ಶೆಟ್ಟಿ ಎಂಬವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಲಾಗಿರುವ ದನಗಳನ್ನು ಕಳ್ಳರು ದರೋಡೆ ಮಾಡಿದ್ದಾರೆ. ಒಂದೇ ವರ್ಷದಲ್ಲಿ ಇದೇ ಮನೆಯ ಕಟ್ಟಿಯಿಂದ ಕಟುಕರು 12 ಹಸುಗಳನ್ನು ದರೋಡೆ ಮಾಡಿ ಎಳೆದು ಹೋಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ.

ಕರ್ನಾಟಕ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನಲ್ಲಿ ಕರ್ನಾಕ ರಾಜ್ಯ ಸರಕಾರವು ಒಂದಿಷ್ಟು ಬಿಗು ಕಾನೂನು ಜಾರಿಗೊಳಿಸಿದ್ದರೂ, ಕಾರ್ಕಳ ಗ್ರಾಮಾಂತರ ಪ್ರದೇಶಗಳಲ್ಲಿ ಗೋ ಕಳವು ಜಾಲವು ವ್ಯವಸ್ಥಿತವಾಗಿ ನಡೆಯುತ್ತಾ ಬಂದಿದೆ. ಉಡುಪಿ ಜಿಲ್ಲಾಡಳಿತವು ಇದರ ಬಗ್ಗೆ ಸೂಕ್ತ ಕ್ರಮಕೈಗೊಂಡು ಹೈನುಗಾರಿಕ ಕೃಷಿಕರಿಗೆ ನ್ಯಾಯ ಒದಗಿಸಬೇಕಾಗಿ ಹಿಂದು ಜಾಗರಣಾ ವೇದಿಕೆಯ ಪ್ರಮುಖರಾದ ಗುರುಪ್ರಸಾದ್ ನಾರಾವಿ ಒತ್ತಾಯಿಸಿದ್ದಾರೆ.

ಘಟನಾ ಸ್ಥಳಕ್ಕೆ ಹಿಂದು ಜಾಗರಣಾ ವೇದಿಕೆಯ ಪ್ರಮುಖರಾದ ರಮೇಶ್, ಸುಜಿತ್ ಸಫಲಿಗ, ಸುಭಾಸ್ ಹೆಗ್ಡೆ ಮೊದಲಾದವರು ಭೇಟಿ ನೀಡಿ ಮನೆ ಮಂದಿಗೆ ಧೈರ್ಯ ತುಂಬಿದ್ದಾರೆ.