Recent Posts

Monday, January 20, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿ

ಸಂಜೀವ ಕೆ. ಉಪ ವಲಯ ಅರಣ್ಯಾಧಿಕಾರಿಯಿಂದ ಹಿಂದೂಗಳ ವಿರುದ್ಧ, ಗೋಮಾತೆಯ ವಿರುದ್ಧ, ಕೊರಗಜ್ಜನ ಕುರಿತು, ಡಾ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅಶ್ಲೀಲ ಪದ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ; ಸಾಮಾಜಿಕ ಜಾಲತಾಣದಲ್ಲಿ ವೈರಲ್ – ಕಹಳೆ ನ್ಯೂಸ್

ಪುತ್ತೂರು : ಸಾಮಾಜಿಕ ಜಾಲತಾಣದಲ್ಲಿ ಕೊರಗಜ್ಜನ ಕುರಿತು ಮುಸ್ಲಿಂ ಮದುವೆಯ ಔತನಕೂಟದಲ್ಲಿ ಅಪಮಾನ ಮಾಡಿದ ಬೆನ್ನಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಮತ್ತೊಂದು ಇಂತಹದ್ದೇ ಪ್ರಕರಣ ವೈರಲ್ ಆಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಅರಣ್ಯ ಇಲಾಖೆ ವ್ಯಾಪ್ತಿಯ ಸಂಜೀವ ಕಾಣಿಯೂರು ಎಂಬ ಹೆಸರಿನ ಉಪ ವಲಯ ಅರಣ್ಯಾಧಿಕಾರಿ ತನ್ನ ಕರ್ತವ್ಯ ಲೋಪ ಹಾಗೂ ಸರಕಾರಿ ಕರ್ತವ್ಯದಲ್ಲಿದ್ದುಕೊಂಡು ಸಂವಿಧಾನ ಬಾಹಿರ ಪದ ” ಬ್ಯಾವರ್ಸಿ ” ಇತ್ಯಾದಿ, ಅಶ್ಲೀಲ ಪದ ” ತುಲ್ಲು” ಇತ್ಯಾದಿ ಬಳಸಿ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಪ್ರಯತ್ನ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕದಡುವ ಯತ್ನ ನಡೆಸಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟು, ಗೋಮಾತೆ ಹಾಗೂ ಹಿಂದೂ ಧೈವ ದೇವರುಗಳ ಬಗ್ಗೆ ಅಪಮಾನ ಕಾರಿಯಾಗಿ ಉಲ್ಲೇಖಿಸಿದ್ದು, ಹಿಂದೂ ಸಮಾಜದ ಭಾವನೆಗಳಿಗೆ ಧಕ್ತೆ ತಂದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಡಾ. ವೀರೇಂದ್ರ ಹೆಗ್ಗಡೆಯವರ ಬಗ್ಗೆ , ಬ್ರಾಹ್ಮಣ ಸಮುದಾಯದ ಬಗ್ಗೆ ಅಶ್ಲೀಲ ಪದ ಬಳಸಿ ಬರೆದಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ತಕ್ಷಣ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ ಕೇಳಿ ಬರುತ್ತಿದೆ.