Saturday, November 23, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಸಾಮಾಜಿಕ ಜಾಲತಾಣದಲ್ಲಿ ಸಂವಿಧಾನ ಬಾಹಿರ, ಅಶ್ಲೀಲ ಪದ ಬಳಸಿ ಹಿಂದೂ ಧರ್ಮದ ವಿರುದ್ಧ ಪೋಸ್ಟ್ ಹಾಕಿದ ವಲಯ ಉಪ ಅರಣ್ಯಾಧಿಕಾರಿ ಸಂಜೀವ ಕೆ. ವಿರುದ್ಧ ಕ್ರಮಕ್ಕೆ ಬಿಜೆಪಿ ನಗರ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್ ಆಗ್ರಹ, ಉನ್ನತ ಅರಣ್ಯಾಧಿಕಾರಿಗಳಿಗೆ ದೂರು – ಕಹಳೆ ನ್ಯೂಸ್

ಪುತ್ತೂರು : ಸಾಮಾಜಿಕ ಜಾಲತಾಣದಲ್ಲಿ ಕೊರಗಜ್ಜನ ಕುರಿತು ಮುಸ್ಲಿಂ ಮದುವೆಯ ಔತನಕೂಟದಲ್ಲಿ ಅಪಮಾನ ಮಾಡಿದ ಬೆನ್ನಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಮತ್ತೊಂದು ಇಂತಹದ್ದೇ ಪ್ರಕರಣ ವೈರಲ್ ಆಗುತ್ತಿದೆ.

ಪುತ್ತೂರು ಅರಣ್ಯ ಇಲಾಖೆ ವ್ಯಾಪ್ತಿಯ ಸಂಜೀವ ಕಾಣಿಯೂರು ಎಂಬ ಹೆಸರಿನ ಉಪ ವಲಯ ಅರಣ್ಯಾಧಿಕಾರಿ ತನ್ನ ಕರ್ತವ್ಯ ಲೋಪ ಹಾಗೂ ಸರಕಾರಿ ಕರ್ತವ್ಯದಲ್ಲಿದ್ದುಕೊಂಡು ಸಂವಿಧಾನ ಬಾಹಿರ ಪದ ” ಬ್ಯಾವರ್ಸಿ ” ಇತ್ಯಾದಿ, ಅಶ್ಲೀಲ ಪದ ” ತುಲ್ಲು” ಇತ್ಯಾದಿ ಬಳಸಿ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಪ್ರಯತ್ನ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕದಡುವ ಯತ್ನ ನಡೆಸಿದ್ದು, ಈ ಕುರಿತು ಕಾರ್ಯಕರ್ತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಗನ್ನಿವಾಸ ರಾವ್ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಉನ್ನತ ಅರಣ್ಯಾ ಅಧಿಕಾರಿಗಳಿಗೆ ದೂರು ನೀಡಿದ್ದು, ತಕ್ಷಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಬಿಟ್ಟು, ಗೋಮಾತೆ ಹಾಗೂ ಹಿಂದೂ ಧೈವ ದೇವರುಗಳ ಬಗ್ಗೆ ಅಪಮಾನ ಕಾರಿಯಾಗಿ ಉಲ್ಲೇಖಿಸಿದ್ದು, ಹಿಂದೂ ಸಮಾಜದ ಭಾವನೆಗಳಿಗೆ ಧಕ್ತೆ ತಂದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಾ. ವೀರೇಂದ್ರ ಹೆಗ್ಗಡೆಯವರ ಬಗ್ಗೆ , ಬ್ರಾಹ್ಮಣ ಸಮುದಾಯದ ಬಗ್ಗೆ ಅಶ್ಲೀಲ ಪದ ಬಳಸಿ ಬರೆದಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ತಕ್ಷಣ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ ಕೇಳಿ ಬರುತ್ತಿದೆ.

ಈ ಕುರಿತು ಕಹಳೆ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿದ ಪಿ‌.ಜಿ. ಜಗನ್ನಿವಾಸ ರಾವ್ ಸರಕಾರಿ ಅಧಿಕಾರಿಯಾಗಿದ್ದು ಸಂವಿಧಾನ ಬಾಹಿರ ಕೃತ್ಯವೆಸಗಿದ ಹಿನ್ನಲೆಯಲ್ಲಿ ಆತನನ್ನು ಅಮಾನತ್ತುಗೊಳಿಸಿ, ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.