Recent Posts

Monday, January 20, 2025
ಸುದ್ದಿ

ಕೊರಗಜ್ಜನ ವೇಷ ಧರಿಸಿ ದೈವನಿಂದನೆ : ಬಂದಿತ ಆರೋಪಿಯನ್ನ ಬಿಡುಗಡೆಗೊಳಿಸಿದ ಕರಾವಳಿಯ ಮಾಜಿ ಸಚಿವರು…! : ವಿದೇಶಕ್ಕೆ ಹಾರಲು ತಯಾರಿ ನಡೆಸಿದ ಆರೋಪಿ – ಕಹಳೆ ನ್ಯೂಸ್

ವಿಟ್ಲ : ಸಮೀಪದ ಸಾಲೆತ್ತೂರಿನಲ್ಲಿ ಮದುವೆ ದಿನ ರಾತ್ರಿ ಕೊರಗಜ್ಜನ ವೇಷ ಧರಿಸಿ ತನ್ನ ತಂಡದೊ0ದಿಗೆ ಕುಣಿದು ಕುಪ್ಪಳಿಸುವ ಮೂಲಕ ದಲಿತ ನಿಂದನೆ, ದೈವ ನಿಂದನೆಗೈದು ಪ್ರಕರಣ ದಾಖಲಾಗುತ್ತಿದ್ದಂತೆ, ತನ್ನ ಸಮುದಾಯದಿಂದ ಉಗಿಸಿಕೊಂಡಿರುವ ಮದುಮಗ ಮತ್ತು ಆತನ ಸಹಚರರು ತಲೆಮರೆಸಿಕೊಂಡಿದ್ದಾರೆ.ಈ ಮಧ್ಯೆ ಹಿಂದೂ ಸಂಘಟನೆಗಳು, ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರುಗಳು, ಮುಸ್ಲಿಂ ಧರ್ಮಗುರುಗಳು ಘಟನೆಯನ್ನು ಖಂಡಿಸಿದ್ದಲ್ಲದೇ ಆರೋಪಿಗಳನ್ನು ಬಂಧಿಸುವ0ತೆ ಒತ್ತಾಯಿಸಿದ್ದರು. ಈ ಮಧ್ಯೆ ಕೇರಳದ ಮಂಜೇಶ್ವರ ಮತ್ತು ವಿಟ್ಲ ಪೊಲೀಸರ ಜಂಟಿ ತಂಡ ಪ್ರಕರಣದ ಪ್ರಮುಖ ಆರೋಪಿಯಾದ ಉಮರುಲ್ ಬಾತಿಷ್ ನ ಸಹೋದರ ಅರ್ಷದ್ ನನ್ನು ಶನಿವಾರ ಮಧ್ಯಾಹ್ನ ಉಪ್ಪಳದ ಸೋಂಕಾಲಿನಲ್ಲಿ ವಶಕ್ಕೆ ಪಡೆದ ಪೊಲೀಸರು ವಿಟ್ಲ ಠಾಣೆಗೆ ತಂದಿದ್ದರು.ಈ ಸುದ್ದಿ ಬಯಲಾಗುತ್ತಿದ್ದಂತೆ ಬಿಜೆಪಿ ಅಲ್ಪ ಸಂಖ್ಯಾತ ವಿಭಾಗದ ಮುಖಂಡ ಮುಡಿಪುವಿನ ಅಸ್ಗರ್ ಅಲಿ ಉಳ್ಳಾಲ ಶಾಸಕ, ಮಾಜಿ ಆರೋಗ್ಯ ಸಚಿವ ಯುಟಿ ಖಾದರ್ ಹತ್ತಿರ ಮನವಿ ಮಾಡಿದ್ದಾನೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ.

ಅಂತೂ ಶನಿವಾರ ತಡರಾತ್ರಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಹತ್ತಿರ ಪರಿ ಪರಿಯಾಗಿ ಮನವಿ ಮಾಡಿದ ತಂಡ ವಿಟ್ಲ ಪೊಲೀಸರ ವಶದಲ್ಲಿದ್ದ ಧರ್ಮ ನಿಂದಕ, ದೈವ ನಿಂದಕ ಅರ್ಷದನನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದು, ರಾಜಕೀಯ ಒತ್ತಡಕ್ಕೆ ಮಣಿದ ಪೊಲೀಸರು ಆರೋಪಿಯನ್ನು ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೇ ಸೋಮವಾರದಂದು ಅರ್ಷದ್ ವಿದೇಶಕ್ಕೆ ಪಲಾಯನ ಮಾಡುವ ಪೂರ್ವ ತಯಾರಿ ನಡೆಸಿದ್ದಾನೆಂಬ ಖಚಿತ ಮಾಹಿತಿ ಕೂಡಾ ಲಭ್ಯವಾಗಿದ್ದು, ಒಟ್ಟಿನಲ್ಲಿ ಧರ್ಮ ನಿಂದಕ, ದೈವ ನಿಂದಕನ0ತವರಿಗೆ ಸಮಾಜದಲ್ಲಿ ಬೆಂಬಲಿಗರಿದ್ದಾರೆAಬುದು ಆತಂಕಕ್ಕೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು