Saturday, November 23, 2024
ದಕ್ಷಿಣ ಕನ್ನಡಸುದ್ದಿ

ತುಳುನಾಡ ಗಾನಗಂಧರ್ವ ಜಗದೀಶ್ ಅಚಾರ್ಯ ಅವರು ಹಾಡಿದ “ಅಮ್ಮ ಕಾಳಿಕಾಂಬಾ ಎಮಗೆ ನೀಡುವ ದರುಶನವ ” ಕನ್ನಡ ಭಕ್ತಿಗೀತೆಯ ಆಲ್ಬಮ್ ಹಾಡು – ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ಸನ್ನಿಧಿಯಲ್ಲಿ ಲೋಕಾರ್ಪಣೆ –ಕಹಳೆ ನ್ಯೂಸ್

ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಕಾಳಿಕಾಂಬಾ ಅಮ್ಮನವರನ್ನ ಸ್ತುತಿಸುವ ಹಾಡನ್ನ ರಚಿಸಿದ್ದು, ಕ್ಷೇತ್ರದ ಆಡಳಿತ ಮೊಕ್ತೇಸರ್ ಕೆ ಕೇಶವ ಆಚಾರ್ಯ ಅವರು ಕ್ಷೇತ್ರದಲ್ಲಿ ಹಾಡನ್ನ ಲೋಕಾರ್ಪಣೆ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತುಳುನಾಡ ಗಾನಗಂಧರ್ವ ಸಂಗೀತ ಸೇವಾ ಪ್ರತಿಷ್ಠಾನ ರಿ. ಪುತ್ತೂರು ಜಗದೀಶ್ ಅಚಾರ್ಯರವರು ಹಾಡಿದ “ಅಮ್ಮ ಕಾಳಿಕಾಂಬಾ ಎಮಗೆ ನೀಡುವ ದರುಶನವ “ಕನ್ನಡ ಭಕ್ತಿಗೀತೆ ವಿಡಿಯೋ ಆಲ್ಬಮ್ ಹಾಡು ಬಿಡುಗಡೆಗೊಂಡಿದೆ. ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಕಾಳಿಕಾಂಬಾ ಅಮ್ಮನವರನ್ನ ಸ್ತುತಿಸುವ ಹಾಡನ್ನ ರಚಿಸಿದ್ದು, ಕ್ಷೇತ್ರದ ಆಡಳಿತ ಮೊಕ್ತೇಸರ್ ಕೆ ಕೇಶವ ಆಚಾರ್ಯ ಅವರು ಕ್ಷೇತ್ರದಲ್ಲಿ ಹಾಡನ್ನ ಲೋಕಾರ್ಪಣೆ ಮಾಡಿದರು.

ಈ ಭಕ್ತಿಗೀತೆಯ ಸಾಹಿತ್ಯ ರಚನೆ ಮಾಡಿದ ತುಳುಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸರ್ ಮಾತನಾಡುತ್ತ ಪಂಚ ಕಸುಬು ಗಳಲ್ಲಿ ವಿಶ್ವಕರ್ಮ ಬಾಂಧವರ ಕೊಡುಗೆ ಅಪಾರವಾದುದು, ದೇವತಾ ಆರಾಧನೆಗೂ ದೈವಾರಾಧನೆಗೆಗೂ ಅವಿನಾಭಾವ ಸಂಬ0ಧ ವಿದೆ. ವಿಶ್ವಕರ್ಮರಲ್ಲಿ ರಕ್ತಗತವಾದುದು, ಗಾಯಕ ಜಗದೀಶ್ ಪುತ್ತೂರು ಅವರ ಸಾಧನೆಗೆ ಸಹಕರಿಸಿದ ಕ್ಷೇತ್ರದ ಆಡಳಿತ ವರ್ಗವನ್ನು ಪ್ರಶಂಸಿಸಿದರು.

ಈ ವೇಳೆ ಶ್ರೀ ಕ್ಷೇತ್ರದ ೨ನೇ ಮೊಕ್ತೇಸರ ಸುಂದರ ಆಚಾರ್ಯ ೩ನೇ ಮೊಕ್ತೇಸರ ಎ ಲೋಕೇಶ್ ಆಚಾರ್ಯ ಬಿಜೈ, ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರು – ಶ್ರೀ ಟಿ ದಿನೇಶ್ ಶಕ್ತಿನಗರ, ಧ್ವನಿ ಸುರುಳಿ ನಿರ್ಮಾಣ ಮಾಡಿದ ರಾಜೇಶ್ ಅಚಾರ್ಯ ಪಂಜಿಕಲ್ ಪಟ್ರಾಡಿ, ಸಹಕರಿಸಿದ ಅರುಣ್ ರೈ ಪುತ್ತೂರು, ಚರಣ್ ಅಚಾರ್ಯ… ಮತ್ತು ಕ್ಷೇತ್ರದ ಆಡಳಿತ ಮಂಡಳಿ, ಜೀರ್ಣೋದ್ದಾರ , ಬ್ರಹ್ಮ ಕಲಶೋತ್ಸವ ಸಮಿತಿ ಸದಸ್ಯರು ಮತ್ತಿತರರು* ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಕ್ಷೇತ್ರದ ಆಡಳಿತ ಮಂಡಳಿಯ ವಿಶೇಷ ಆಹ್ವಾನಿತ ಸುಜೀರ್ ವಿನೋದ್ ರವರು ಮಾಡಿದರು.