Saturday, November 23, 2024
ಕ್ರೈಮ್ಬೆಂಗಳೂರುರಾಜಕೀಯರಾಜ್ಯಸುದ್ದಿ

S.T. ಸೋಮಶೇಖರ್ ಪುತ್ರನಿಗೆ ಮಹಿಳೆಯ ಜೊತೆಯಲ್ಲಿರುವ ನಕಲಿ ಅಶ್ಲೀಲ ವೀಡಿಯೋ ಬ್ಲ್ಯಾಕ್‍ಮೇಲ್…!? – ಕಹಳೆ ನ್ಯೂಸ್

ಬೆಂಗಳೂರು: ಬಿಜೆಪಿ ಸಚಿವ ಎಸ್.ಟಿ.ಸೋಮಶೇಖರ್ ಪುತ್ರನಿಗೆ ನಕಲಿ ಅಶ್ಲೀಲ ವೀಡಿಯೋ ಕಳುಹಿಸಿ ಅಪರಿಚಿತರು ಬ್ಲಾಕ್ ಮೇಲ್ ಮಾಡಿದ್ದಾರೆ.

ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್‍ಗೆ ನಕಲಿ ವೀಡಿಯೋ ಸೃಷ್ಟಿಸಿ ಹಣಕ್ಕೆ ಅಪರಿಚಿತರು ಬ್ಲಾಕ್ ಮೇಲ್ ಮಾಡುತ್ತಿದ್ದರು. ಈ ಹಿನ್ನೆಲೆ ಆಡುಗೋಡಿಯಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ನಿಶಾಂತ್ ದೂರು ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ರಾಜಕೀಯವಾಗಿ ಬಿಜೆಪಿ ಪಕ್ಷದಿಂದ ಗುರುತಿಸಿಕೊಂಡಿದ್ದೇನೆ. ನನ್ನ ಮತ್ತು ನನ್ನ ತಂದೆ ರಾಜಕೀಯ ಬೆಳವಣಿಗೆ ಸಹಿಸದ ಕೆಲವು ದುಷ್ಕರ್ಮಿಗಳು ರಾಜಕೀಯವಾಗಿ ನಮ್ಮನ್ನು ಮುಗಿಸಬೇಕೆಂಬ ದುರುದ್ದೇಶದಿಂದ ಈ ಕೃತ್ಯವೆಸಗಿದ್ದಾರೆ. ಯಾರೋ ಮಹಿಳೆಯ ಜೊತೆಯಲ್ಲಿರುವಂತೆ ಆಶ್ಲೀಲವಾದ ನಕಲಿ ವೀಡಿಯೋ ಸೃಷ್ಟಿಸಿ ನನ್ನನ್ನು ನೇರವಾಗಿ ಟಾರ್ಗೆಟ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವೀಡಿಯೋ ಮತ್ತು ಫೋಟೋಸ್‍ಗಳನ್ನು ನನ್ನ ತಂದೆಯ ಪಿಎ ಶೀನಿವಾಸಗೌಡ ಮತ್ತು ಭಾನುಪ್ರಕಾಶ್ ಅವರಿಗೆ ಕಳುಹಿಸಿದ್ದಾರೆ. ವಾಟ್ಸಾಪ್ ಮೂಲಕ ಪದೇ, ಪದೇ ಮೇಸೆಜ್‍ಗಳನ್ನು ಕಳುಹಿಸಿ ತಾವು ಕೇಳಿದಷ್ಟು ಹಣವನ್ನು ಕೊಡಬೇಕೆಂದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣವನ್ನು ನೀಡದಿದ್ದಲ್ಲಿ ಅಶ್ಲೀಲ ವೀಡಿಯೋ ಹಾಗೂ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಡುವುದಾಗಿ ಬೆದರಿಕೆಯೊಡ್ಡಿದ್ದಾರೆ.

ನನ್ನ ಹಾಗೂ ನಮ್ಮ ತಂದೆಯ ರಾಜಕೀಯ ಭವಿಷ್ಯವನ್ನು ಮುಗಿಸುವುದಾಗಿಯೂ ಸಹ ಬೆದರಿಕೆ ಹಾಕಿದ್ದು, ಈ ಸಂಚಿನ ಹಿಂದೆ ತುಂಬಾ ಪ್ರಭಾವಶಾಲಿ ವ್ಯಕ್ತಿಗಳು ಭಾಗಿಯಾಗಿರುವ ಸಾಧ್ಯತೆ ಇದೆ. ಕೆಲ ದುಷ್ಕರ್ಮಿಗಳು, ನಮಗೆ ತೊಂದರೆ ನೀಡಬೇಕೆಂಬ ದುರುದ್ದೇಶದಿಂದ ಈ ರೀತಿ ಸಂಚು ರೂಪಿಸಿದ್ದಾರೆ. ಆ ಆಸಾಮಿಗಳ ಪತ್ತೆ ಮಾಡಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಮನವಿಮಾಡಿದ್ದಾರೆ.