ಮಂಗಳೂರು : ಕರಾವಳಿಯಾದ್ಯಂತ ಶುಕ್ರವಾರ ರಾತ್ರಿಯಿಂದ ಜಾರಿಯಲ್ಲಿದ್ದ ವಾರಾಂತ್ಯ ಕಫ್ರ್ಯೂ ಇಂದು ಮುಕ್ತಾಯಗೊಂಡಿದ್ದು, ವಾರಾಂತ್ಯ ಕಫ್ರ್ಯೂ ಹಿನ್ನೆಲೆಯಲ್ಲಿ ರವಿವಾರವೂ ಜಿಲ್ಲೆಯಾದ್ಯಂತ ಜನಜೀವನ ವ್ಯತ್ಯಯಗೊಂಡಿತ್ತು.
ಜೀನಸು ಅಂಗಡಿಗಳು, ಮೀನು ,ಮಾಂಸ, ತರಕಾರಿ, ಔಷಧ ಅಂಗಡಿಗಳು ಸೇರಿದಂತೆ ಜೀವನಾವಶ್ಯಕ ವಸ್ತುಗಳ ಮಳಿಗೆಗಳು ಎಂದಿನಂತೆ ಕಾರ್ಯಾಚರಿಸಿದವು. ಆದರೆ ರವಿವಾರ ರಜಾದಿನದ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ ಕೆಲವು ಅಂಗಡಿಗಳು ಮಧ್ಯಾಹ್ನದ ಬಳಿಕ ಮುಚ್ಚಿದ್ದರೆ ಗ್ರಾಮಾಂತರ ಪ್ರದೇಶಗಳಲ್ಲಿ ಎಂದಿನಂತೆ ತೆರೆದಿದ್ದವು.
ಬಸ್, ರಿಕ್ಷಾಗಳ ಸಂಚಾರವೂ ಕಡಿಮೆ ಇತ್ತು. ಶನಿವಾರ ಶೇ.50ರಷ್ಟು ಬಸ್‍ಗಳು ಸಂಚಾರ ನಡೆಸಿದ್ದರೆ. ರವಿವಾರ ಬಸ್‍ಗಳ ಸಂಚಾರದಲ್ಲಿ ಇನ್ನಷ್ಟು ಇಳಿಕೆಯಾಗಿತ್ತು. ಪೂರ್ವ ನಿಗದಿತ ಮದುವೆ, ಧಾರ್ಮಿಕ ಕಾರ್ಯಕ್ರಮಗಳು ಅಬಾಧಿತವಾಗಿ ನಡೆದಿವೆ. ಬಸ್‍ಗಳ ಸಂಚಾರವಿದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳಲ್ಲಿ ಜನರ ಪಾಲ್ಗೊಳ್ಳುವಿಕೆಯಲ್ಲಿ ಹೆಚ್ಚಿನ ವ್ಯತ್ಯಯ ಕಂಡುಬರಲಿಲ್ಲ.