Recent Posts

Monday, January 20, 2025
ಉಡುಪಿಸುದ್ದಿ

ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಭೇಟಿ- ಕಹಳೆ ನ್ಯೂಸ್

ಉಡುಪಿ : ಉಡುಪಿ ಪರ್ಯಾಯ ಪೀಠಾರೋಹಣಗೈಯಲ್ಲಿರುವ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಜ9ರಂದು ಆಗಮಿಸಿ ಪರ್ಯಾಯ ಮಹೋತ್ಸವಕ್ಕೆ ಆಮಂತ್ರಣ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ಕೃಷ್ಣ ಮಠಕ್ಕೂ ವಿಶ್ವಕರ್ಮ ಸಮಾಜಕ್ಕೂ ಇರುವ ಉತ್ತಮ ಸಂಬAಧ ಗಳ ಬಗ್ಗೆ ಪ್ರಶಂಸಿಸುತ್ತಾ, ಶ್ರೀ ಕಾಳಿಕಾಂಬಾ ಕ್ಷೇತ್ರದ ಜೀರ್ಣೋದ್ದಾರ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ವಿಶ್ವಬ್ರಾಹ್ಮಣ ಸಮಾಜಕ್ಕೆ ತಕ್ಕಂತೆ ಶಿಲ್ಪ ಕಾಷ್ಟ ನೈಪುಣ್ಯ್ತೆತೆಯಿಂದ ಮೂಡಿ ಬಂದಿದ್ದು, ಪರಿಪೂರ್ಣ ಕ್ಷೇತ್ರ ಆಗುವಿದರಲ್ಲಿ ಸಂಶಯವಿಲ್ಲಾ. ಕೃಷ್ಣನ ಅನುಗ್ರಹದಿಂದ ಬ್ರಹ್ಮ ಕಲಶೋತ್ಸವ ನೀರ್ವಿಘ್ನವಾಗಿ ಜರಗಲಿ ಎಂದು ಆಶೀರ್ವಚನ ನೀಡಿದರು.

ಕ್ಷೇತ್ರದ ಆಡಳಿತ ಮೊಕ್ತೇಸರ ಕೆ ಕೇಶವ ಆಚಾರ್ಯ, 2ನೇ ಮೊಕ್ತೇಸರ ಸುಂದರ ಆಚಾರ್ಯ 3ನೇ ಮೊಕ್ತೇಸರ ಎ ಲೋಕೇಶ್ ಆಚಾರ್ಯ ಬಿಜೈ, ಕಲ್ಕೂರ ಪ್ರತಿಷ್ಟಾನದ ಅಧ್ಯಕ್ಷ ಪ್ರದೀಪ್ ಕಲ್ಕೂರ, ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ – ಶ್ರೀ ಟಿ ದಿನೇಶ್ ಶಕ್ತಿನಗರ, ಮತ್ತು ಕ್ಷೇತ್ರದ ಆಡಳಿತ ಮಂಡಳಿ, ಜೀರ್ಣೋದ್ದಾರ , ಬ್ರಹ್ಮ ಕಲಶೋತ್ಸವ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಕ್ಷೇತ್ರದ ಆಡಳಿತ ಮಂಡಳಿಯ ವಿಶೇಷ ಆಹ್ವಾನಿತ ಸುಜೀರ್ ವಿನೋದ್‌ರವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.