Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಮಂಗಳೂರು ವಿವಿ ಕ್ರಿಕೆಟ್ ಕ್ರಿಡಾಕೂಟದ ಉದ್ಘಾಟನೆ-ಕಹಳೆ ನ್ಯೂಸ್

ಪುತ್ತೂರು : ಕ್ರೀಡೆ ಮತ್ತು ಪಂದ್ಯಾಟಗಳು ದೈಹಿಕ ಮಾತ್ರವಲ್ಲ ಮಾನಸಿಕ ಆರೋಗ್ಯಕ್ಕೂ ಅತ್ಯಂತ ಅಗತ್ಯ. ಸಮಾಜದ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಅವುಗಳಿಗೆ ಇದೆ. ಸದೃಢ ಸಮಾಜ ನಿರ್ಮಾಣಕ್ಕೆ ಕ್ರೀಡೆಗಳು ಬೇಕು ಎಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ರೆ| ಫಾ| ಲಾರೆನ್ಸ್ ಮಸ್ಕರೇನ್ಹಸ್ ಅವರು ಹೇಳಿದರು. ಮಂಗಳೂರು ವಿಶ್ವವಿದ್ಯಾಲಯದ ವಲಯ ಮಟ್ಟದ ಕ್ರಿಕೆಟ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಫಿಲೋಮಿನಾ ಕಾಲೇಜು ಕ್ರೀಡೆಗೆ ಉನ್ನತ ಸ್ಥಾನ ನೀಡಿದೆ. ಆ ಕಾರಣದಿಂದಲೇ ಜಾಗತಿಕ ಮಟ್ಟದ ಕ್ರೀಡಾ ತಾರೆಗಳು ಇಲ್ಲಿಂದ ಮೂಡಿ ಬಂದು ಪುತ್ತೂರಿನ ಹೆಸರನ್ನು ಬೆಳಗಿಸಿದ್ದಾರೆ ಎಂದು ಪದ್ಮಶ್ರೀ ಗ್ರೂಪ್ಸಿನ ಮಾಲಿಕರಾದ ರೊ| ರತ್ನಾಕರ ರೈ ಅವರು ಕ್ರೀಡಾಕೂಟವನ್ನು ಉದ್ಘಾಟಿಸುತ್ತ ಹೇಳಿದರು. ಇದನ್ನು ಓದಿ: ಮಂಗಳೂರು ವಿಧಾನಸಭಾ ಕ್ಷೇತ್ರದ ಸಾಂಬಾರ್ ತೋಟ ಬೂತ್ ಸಂಖ್ಯೆ 109 ರ ಬಿಜೆಪಿ ಅಧ್ಯಕ್ಷ ಮಹಮ್ಮದ್ ಅಸ್ಗರ್‌ ಪಕ್ಷದಿಂದ ಅಮಾನತು

ಸಂತಫಿಲೋಮಿನಾ ಕಾಲೇಜಿನಲ್ಲಿ ಸ್ಥಾಪನೆಯಾದ ದಿನದಿಂದಲೂ ಕ್ರೀಡೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಮಂಗಳೂರು ವಿವಿಯ ಹಲವು ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೋಜಿಸಿದ ಹೆಗ್ಗಳಿಕೆ ಕಾಲೇಜಿಗೆ ಇದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ರೆ| ಡಾ| ಆ್ಯಂಟನಿ ಪ್ರಕಾಶ್ ಮೊಂತೆರೋ ಅವರು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಮಂಗಳೂರು ವಿವಿಗೆ ಸೇರಿದ ಇಪ್ಪತ್ತು ಕಾಲೇಜುಗಳ ಭಾಗವಹಿಸಿತ್ತಿರುವ ಈ ಕ್ರೀಡಾಕೂಟವನ್ನು ಸಂಘಟಿಸಿರುವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ|ಎಲ್ಯಾಸ್ ಪಿಂಟೋ ಮತ್ತು ಶ್ರೀ.ರಾಜೇಶ್ ಮೂಲ್ಯ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಂಗ್ಲ ವಿಭಾಗ ಮುಖ್ಯಸ್ಥೆ ಶ್ರೀಮತಿ ಭಾರತಿ ಎಸ್ ರೈ ಸ್ವಾಗತಿಸಿದರು ಮತ್ತು ಕನ್ನಡ ವಿಭಾಗ ಮುಖ್ಯಸ್ಥ ಡಾ| ವಿಜಯ ಕುಮಾರ್ ಮೊಳೆಯಾರ ವಂದಿಸಿದರು. ಕಾಲೇಜಿನ ಲಲಿತ ಕಲಾ ಸಂಘದ ಸದಸ್ಯರಾದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಾಣೀಜ್ಯ ವಿಭಾಗ ಉಪನ್ಯಾಸಕ ಪ್ರಶಾಂತ ರೈ ನಿರ್ವಹಿಸಿದರು.