Recent Posts

Wednesday, November 13, 2024
ದಕ್ಷಿಣ ಕನ್ನಡಪುತ್ತೂರುಸುದ್ದಿಸುಳ್ಯ

ಬೆಳ್ಳಾರೆಯಲ್ಲಿ `ತಿರುಮಲ ಹೋಂಡಾ`ದ 6ನೇ ಅಧಿಕೃತ ಸರ್ವೀಸ್ ಸೆಂಟರ್ ಉದ್ಘಾಟನೆ- ಕಹಳೆ ನ್ಯೂಸ್

ಪುತ್ತೂರು: ಬೆಳ್ಳಾರೆ ಆಸುಪಾಸಿನ ಜನತೆಗೆ ಉತ್ತಮ ಸೇವೆಯನ್ನು ಒದಗಿಸಬೇಕೆನ್ನುವ ನಿಟ್ಟಿನಲ್ಲಿ, ಹೋಂಡಾ ದ್ವಿಚಕ್ರವಾಹನಗಳ ಹೆಸರಾಂತ ಡೀಲರ್ `ತಿರುಮಲ ಹೋಂಡಾ’ ಇದೀಗ ಬೆಳ್ಳಾರೆಯಲ್ಲಿ ಲೋಕಾರ್ಪಣೆಗೊಂಡಿದೆ. ಪುತ್ತೂರು, ಕಡಬ, ಸುಳ್ಯ ತಾಲೂಕಿನಾದ್ಯಂತ ಶಾಖೆಗಳನ್ನು ಹೊಂದಿರುವ `ತಿರುಮಲ ಹೋಂಡಾ’ದ 6ನೇ ಶಾಖೆಯು ಬೆಳ್ಳಾರೆಯ ಪೋಸ್ಟ್ ಆಫೀಸ್ ಮುಂಭಾಗದಲ್ಲಿ ಶುಭಾರಂಭಗೊ0ಡಿದೆ.

ಸವಿಸ್ತಾರವಾಗಿ, ಸುಸಜ್ಜಿತವಾಗಿ ನಿರ್ಮಾಣಗೊಂಡ `ಹೋಂಡಾ’ದ ಅಧಿಕೃತ ಸರ್ವೀಸ್ ಸೆಂಟರ್‌ನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಪನ್ನೆಯವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ನಿವೃತ್ತ ಪಶುವೈದ್ಯ ಡಾ| ಎಂ.ಎಸ್. ಭಟ್, ಚಂದ್ರಶೇಖರ ಪನ್ನೆ, ಅಜಪಿಲ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ವಕೀಲರಾದ ಗೌರೀಶ್ ಚಂದ್ರ ಶಾನುಭೋಗ್ ಮಣಿಕ್ಕರ, ಬೆಳ್ಳಾರೆ ವರ್ತಕರ ಸಂಘದ ಅಧ್ಯಕ್ಷ ರಾಜೇಶ್ ಶಾನುಭೋಗ್, ಜಾಗದ ಮಾಲಕರು ಚೇತನ್ ಶೆಣೈ, ಮಾಲಕರ ಸಹೋದರ ರಾಜಗೋಪಾಲ ಭಟ್ ಮತ್ತಿತರರು ಗಣ್ಯರು ದೀಪ ಪ್ರಜ್ವಲನೆಗೈದರು. ತಿರುಮಲ ಹೋಂಡಾದ ಮಾಲಕರಾದ ಕೃಷ್ಣ ಕಿಶೋರ್ ಎನ್.ಟಿ.ಯವರ ಧರ್ಮಪತ್ನಿ ಅರುಣಾ ಕೃಷ್ಣಕಿಶೋರ್ ಅವರು ದೇವರ ಭಾವಚಿತ್ರದ ಎದುರು ದೀಪ ಬೆಳಗಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳೆಯುತ್ತಿರುವ ಬೆಳ್ಳಾರೆಗೆ ಕೊಡುಗೆ: ರಿಬ್ಬನ್ ಕತ್ತರಿಸುವ ಮೂಲಕ ನೂತನ ಶೋರೂಮ್-ಸರ್ವೀಸ್ ಸೆಂಟರ್‌ನ್ನು ಉದ್ಘಾಟಿಸಿ ಮಾತನಾಡಿದ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಪನ್ನೆಯವರು, `ತಿರುಮಲ ಹೋಂಡಾವು ಬೆಳೆಯುತ್ತಿರುವ ಬೆಳ್ಳಾರೆಗೆ ವಿನೂತನವಾದ ಕೊಡುಗೆಯಾಗಿದೆ. ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಬೆಳ್ಳಾರೆ ಪೇಟೆಯು ಅಭಿವೃದ್ಧಿ ಹೊಂದುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಪೂರಕ ವ್ಯವಸ್ಥೆಗಳ ಜೊತೆಗೇ ನಿರ್ಮಾಣಗೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಖೆಗಳ ಮೂಲಕ ಸಂಸ್ಥೆಯು ಬೆಳೆಯಲಿ ಎಂದು ಆಶಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಸ್ಥೆಯು ಅಭಿವೃದ್ಧಿ ಹೊಂದಲಿ: ಅಜಪಿಲ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತುರವರು ಮಾತನಾಡಿ, ಬೆಳ್ಳಾರೆಯಲ್ಲಿ ತಿರುಮಲ ಹೋಂಡಾದ ಶಾಖೆ ಆರಂಭಗೊAಡಿರುವುದು ಸಂತಸದ ವಿಷಯ. ಬೆಳ್ಳಾರೆ ನಾಗರಿಕರು ಇದರ ಸದುಪಯೋಗವನ್ನು ಪಡೆದಕೊಳ್ಳಬೇಕು. ಸಂಸ್ಥೆಯು ಅಭಿವೃದ್ಧಿ ಹೊಂದಲಿ ಎಂದು ಬಯಸಿದರು.

ಸಂಸ್ಥೆಯ ಬೆಳವಣಿಗೆಯ ಹಿಂದೆ ಬಹಳಷ್ಟು ಸಾಧನೆ: ವಕೀಲರಾದ ಗೌರೀಶ್‌ ಚಂದ್ರ ಶಾನುಭೋಗ್ ಮಣಿಕ್ಕರರವರು ಮಾತನಾಡಿ, ಇಂತಹ ಸಂಸ್ಥೆಗಳು ಒಂದು ಊರಿಗೆ ಬಂದಾಗ ಆ ಊರಿನ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಸಂಸ್ಥೆಯ ಬೆಳವಣಿಗೆಯ ಹಿಂದೆ ಬಹಳಷ್ಟು ಸಾಧನೆಯಿದೆ. ಉನ್ನತಿಗೆ ಏರುವುದು ಮತ್ತು ಅದನ್ನು ಉಳಿಸಿಕೊಳ್ಳುವುದು ಬಹಳ ತ್ರಾಸದ ಕೆಲಸ. ಸಂಸ್ಥೆಯು ಮತ್ತಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.

ಸ್ವಚ್ಛತೆಯ ನಿಟ್ಟಿನಲ್ಲಿ ಮಂಗಳೂರು, ಬೆಂಗಳೂರಿಗೆ ಸರಿಸಾಟಿಯಾಗುವ ವ್ಯವಸ್ಥೆ: ಬೆಳ್ಳಾರೆ ವರ್ತಕರ ಸಂಘದ ಅಧ್ಯಕ್ಷ ರಾಜೇಶ್ ಶಾನುಭೋಗ್‌ರವರು ಮಾತನಾಡಿ, ತಿರುಮಲ ಹೋಂಡಾ ಸಂಸ್ಥೆಯ ಮಾಲಕರಾದ ಕೃಷ್ಣ ಕಿಶೋರ್ ಅವರು ಛಲಬಿಡದ ತ್ರಿವಿಕ್ರಮ. ಬೆಳ್ಳಾರೆಯಂತಹ ಊರಿನಲ್ಲಿ ಅಚ್ಚುಕಟ್ಟಾದ ಶೋರೂಮ್‌ನ್ನು ನಿರ್ಮಿಸಿದ್ದಾರೆ. ಸ್ವಚ್ಛತೆಯ ನಿಟ್ಟಿನಲ್ಲಿ ಮಂಗಳೂರು, ಬೆಂಗಳೂರಿಗೆ ಸರಿಸಾಟಿಯಾಗುವ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ ಎಂದು ಶ್ಲಾಘಿಸಿದರು.

ಟೂವೀಲರ್ ಇಂದು ಲಕ್ಷುರಿಯಲ್ಲ, ಅವಶ್ಯಕತೆ: ನಿವೃತ್ತ ಪಶು ವೈದ್ಯರಾದ ಡಾ| ಎಂ.ಎಸ್. ಭಟ್‌  ಮಾತನಾಡಿ, ಟೂವೀಲರ್ ಎನ್ನುವುದು ಇಂದು ಲಕ್ಷುರಿಯಲ್ಲ, ಅವಶ್ಯಕತೆ. ಹಳ್ಳಿಯಲ್ಲಿ ಪ್ರತಿಯೊಬ್ಬರಿಗೂ ಇದು ಅಗತ್ಯವಾಗಿದೆ. ಇಂತಹ ದ್ವಿಚಕ್ರ ವಾಹನದ ದುರಸ್ತಿ, ನಿರ್ವಹಣೆಗೆ ಸುಸಜ್ಜಿತ ಜಾಗ ಸಿಕ್ಕಿದರೆ ಎಲ್ಲರಿಗೂ ಅನುಕೂಲ. ಸಂಸ್ಥೆಯು ಬೆಳೆದು ಊರಿಗೆ ಉಪಕಾರವಾಗಲಿ ಎಂದು ಹಾರೈಸಿದರು.

ಜನತೆಗೆ ಉತ್ತಮ ಸೇವೆ ಲಭಿಸಲಿ: ಜಾಗದ ಮಾಲಕರಾದ ಚೇತನ್ ಶೆಣೈ ಅವರು ಮಾತನಾಡಿ, ತಿರುಮಲ ಹೋಂಡಾ ಶಾಖೆ ಬೆಳ್ಳಾರೆಯಲ್ಲಿ ಜನತೆಗೆ ಉತ್ತಮ ಸೇವೆ ಲಭಿಸಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.

`ತಿರುಮಲ ಹೋಂಡಾ’ದ ಮಾಲಕರಾದ ಕೃಷ್ಣ ಕಿಶೋರ್ ಎನ್.ಟಿ., ಅವರ ಧರ್ಮಪತ್ನಿ ಅರುಣಾ ಕೃಷ್ಣಕಿಶೋರ್, ಪುತ್ರ, ತಿರುಮಲ ಹೋಂಡಾದ ಜನರಲ್ ಮ್ಯಾನೇಜರ್ ಅಖಿಲೇಷ್, ಸೊಸೆ ಕೀರ್ತಿ ಅಖಿಲೇಷ್‌ರವರು ಬಂಧುಮಿತ್ರರನ್ನು ಸ್ವಾಗತಿಸಿ ಸತ್ಕರಿಸಿದರು. ಸೇಲ್ಸ್ ಮ್ಯಾನೇಜರ್ ಕಾರ್ತಿಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬೆಳ್ಳಾರೆ ಆಸುಪಾಸಿನ ಜನತೆಗೆ ಅನುಕೂಲ
ಬೆಳ್ಳಾರೆಯಲ್ಲಿ ಆರಂಭಗೊ0ಡಿರುವ ಶಾಖೆಯು ತಿರುಮಲ ಹೋಂಡಾದ 6ನೇ ಅಧಿಕೃತ ಸರ್ವೀಸ್ ಸೆಂಟರ್ ಆಗಿದೆ. ಈ ಮೂಲಕ ಈ ಭಾಗದ ದ್ವಿಚಕ್ರ ವಾಹನ ಗ್ರಾಹಕರಿಗೆ ಅನುಕೂಲವಾಗಿದೆ. ಬೆಳ್ಳಾರೆ, ಮಾಡಾವು, ಸವಣೂರು, ಪೆರುವಾಜೆ, ಪೆರ್ಲಂಪಾಡಿ, ಐವರ್ನಾಡು, ನಿಂತಿಕಲ್ಲು, ಚೊಕ್ಕಾಡಿ, ಕಲ್ಪನೆ, ಪಂಜ ಆಸುಪಾಸಿನ ಜನತೆ ಈ ಹಿಂದೆ ತಮ್ಮ ವಾಹನಗಳನ್ನು ಸರ್ವೀಸ್ ಮಾಡಿಸಿಕೊಳ್ಳಲು ಸುಳ್ಯ ಅಥವಾ ಪುತ್ತೂರಿಗೆ ತೆರಳಬೇಕಿದ್ದು, ಇದೀಗ ಬೆಳ್ಳಾರೆಯಲ್ಲಿ ಸುಸಜ್ಜಿತ ಸೇವೆ ನೀಡಲು ಸಂಸ್ಥೆಯು ಸಜ್ಜಾಗಿದೆ.

`ತಿರುಮಲ ಹೋಂಡಾ’ದ ಜನರಲ್ ಮ್ಯಾನೇಜರ್ ಅಖಿಲೇಷ್‌ರವರು ಮಾತನಾಡಿ, ತನ್ನ ತಂದೆಯವರಾದ ಕೃಷ್ಣ ಕಿಶೋರ್ ಎನ್.ಟಿ.ರವರು ಪರಿಶ್ರಮ, ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯದ ಜೊತೆಗೆ ಆತ್ಮವಿಶ್ವಾಸದೊಂದಿಗೆ ಮುನ್ನಡೆಯುತ್ತಿರುವ ಕಾರಣ ಎಲ್ಲೆಡೆಯೂ ಜನರು, ಬಂಧುಗಳು, ಸ್ನೇಹಿತರ ಸಹಕಾರ ದೊರೆಯುತ್ತಿದೆ. ಬೆಳ್ಳಾರೆಯಲ್ಲೂ ಶಾಖೆ ಆರಂಭಿಸುವ ನಿಟ್ಟಿನಲ್ಲಿ ಇಲ್ಲಿನ ಪ್ರಮುಖರು ಬಹಳಷ್ಟು ಸಹಕಾರ ನೀಡಿದ್ದಾರೆ. 6ನೇ ಶಾಖೆ ಆರಂಭವಾಗುವಲ್ಲಿ ತಿರುಮಲ ಹೋಂಡಾದ ಎಲ್ಲಾ ಸಿಬ್ಬಂದಿ ವರ್ಗದ ಸಹಕಾರವಿದೆ. ಜೊತೆಗೆ ಕುಟುಂಬ ವರ್ಗದ ಸಹಕಾರವೂ ಬಹಳಷ್ಟಿದೆ. ನಮಗೆ ಸಹಕಾರ ಪ್ರೋತ್ಸಾಹ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.

-ಅಖಿಲೇಷ್,
ಜನರಲ್ ಮ್ಯಾನೇಜರ್, ತಿರುಮಲ ಹೋಂಡಾ

ಬೆಳ್ಳಾರೆಯಲ್ಲಿ ಲೋಕಾರ್ಪಣೆಗೊಂಡಿರುವ ಸುಸಜ್ಜಿತ ಶೋರೂಮ್-ಸರ್ವೀಸ್ ಸೆಂಟರ್ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ.
ಈ ಮೂಲಕ ಮಾರಾಟ-ಸರ್ವೀಸ್-ಬಿಡಿಭಾಗಗಳು-ಇನ್ಶೂರೆನ್ಸ್ ಎಲ್ಲವೂ ಒಂದೇ ಸೂರಿನಡಿಯಲ್ಲಿ ಲಭಿಸಲಿದೆ. ನೂತನ ಶೋರೂಮ್ ವಿಶಾಲ ಪಾರ್ಕಿಂಗ್ ಏರಿಯಾ, ಡಿಸ್ಪೆ ಏರಿಯಾ, ಕಸ್ಟಮರ್ ಲಾಂಜ್ ಸಹಿತ ಆಧುನಿಕ ಸೌಲಭ್ಯ ಹೊಂದಿದೆ. ನಗರ ವ್ಯಾಪ್ತಿಯಲ್ಲಿ ಪಿಕ್ ಅಪ್ & ಡ್ರಾಪ್ ಸೌಲಭ್ಯವೂ ಲಭ್ಯವಿದೆ. ವಾಹನಗಳ ಬೆಲೆಯು ನೈಜವಾಗಿದ್ದು, ಕೊಡುಗೆಗಳು ಖಚಿತವಾಗಿರುತ್ತದೆ. ಉಡುಗೊರೆಗಳ ನೆಪದಲ್ಲಿ ಅಥವಾ ಕಡಿಮೆ ಡೌನ್‌ಪೇಮೆಂಟ್ ನೆಪದಲ್ಲಿ ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಷನ್ ಮತ್ತು ಹಿಡನ್ ಚಾರ್ಜಸ್ ಇರುವುದಿಲ್ಲ. ರಿಜಿಸ್ಟ್ರೇಷನ್‍ನ ಜೊತೆಗೆ ಕ್ಷಿಪ್ರ ಡೆಲಿವರಿಯನ್ನೂ ಸಂಸ್ಥೆ ನೀಡುತ್ತಿದ್ದು, ನಿಗದಿತ ಸಮಯದಲ್ಲಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ನ್ನು ಕೂಡ ಗ್ರಾಹಕರಿಗೆ ಒದಗಿಸಲಾಗುತ್ತಿದೆ. `ತಿರುಮಲ ಹೋಂಡಾ’ ಗ್ರಾಹಕರಿಗೆ ತನ್ನ ವಾಹನಗಳಿಗೆ 1 ವರ್ಷದ ವ್ಯಾರಂಟಿಯೊ0ದಿಗೆ ಜೆನ್ಯೂನ್ ಫಿಟ್ಟಿಂಗ್ಸ್ ಒದಗಿಸುತ್ತಿದೆ. 6 ವರ್ಷಗಳು/72,000 ಕಿಮೀಗಳ ವ್ಯಾರಂಟಿಯನ್ನೂ ನೀಡುತ್ತಿದೆ. ಯಾವುದೇ ವಿಳಂಬವಿಲ್ಲದ ಸರ್ವೀಸ್ ಮತ್ತು ಮಾರಾಟ ಸೇವೆ ವಿಶೇಷತೆಯಾಗಿದೆ. ಗ್ರಾಹಕರ ಅನುಕೂಲಕ್ಕೆ 60 ನಿಮಿಷಗಳಲ್ಲಿ ಸಾಲ ಮಂಜೂರು ಸೌಲಭ್ಯವೂ ಇದೆ. ಸಿಬಿಲ್ ಸ್ಕೋರ್ ಕಡಿಮೆಯಿದ್ದರೂ ಸುಲಭದಲ್ಲಿ ಸಾಲವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ.

ಹೆಚ್ಚಿನ ಮಾಹಿತಿಗೆ ಮೊ. :9108471373ನ್ನು ಸಂಪರ್ಕಿಸಬಹುದು.