ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದ ವಾರ್ಷಿಕ ಕ್ರೀಡಾಕೂಟವನ್ನು ಕಾಂಪ್ರಬೈಲು ಶ್ರೀ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಜಯಾನಂದ ಆಚಾರ್ಯ ಕ್ರೀಡಾ ಜ್ಯೋತಿಯ ಮೂಲಕ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಗೋಳ್ತಮಜಲು ಗ್ರಾಮ ಪಂಚಾಯತ್‍ನ ಸದಸ್ಯರು ಅಮ್ಟೂರು ನಿವಾಸಿ ಎಲ್ಯಾಸ್ ಡಿ.ಸೋಜ, ಧ್ವಜಾರೋಹಣಗೈದರು.
ಅಧ್ಯಕ್ಷತೆಯ ವಹಿಸಿದ್ದ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ವಿದ್ಯಾರ್ಥಿ ಸಮುದಾಯ ಶಾರೀರಿಕ ದೃಢತೆಯನ್ನು ಗಳಿಸಬೇಕೆಂದರು “ಶರೀರ ಮಾಧ್ಯಮ ಕಲುಧರ್ಮ ಸಾಧನ” ಎಂಬಂತೆ ರಾಷ್ಟ್ರೀಯ ಶಿಕ್ಷಣದ ಆದ್ಯತೆಯಂತೆ ಕ್ರೀಡಾ ಶಿಕ್ಷಣಕ್ಕೆ ಆದ್ಯತೆ ನೀಡತಕ್ಕದ್ದು” ಎಂದು ನುಡಿದರು.
ವಿದ್ಯಾರ್ಥಿಗಳು ಮೈದಾನಕ್ಕೆ ಬಂದು ಸೂರ್ಯದೇವನಿಂದ ಬರುವ ಎಲ್ಲಾ ಶಕ್ತಿಯನ್ನು ಜೀವತಂತುಗಳು ಸ್ವೀಕರಿಸುವಂತಾಗಬೇಕು ತನ್ಮೂಲಕ ಶಾರೀರಿಕ ದೃಢತೆ ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗೋಳ್ತಮಜಲು ಗ್ರಾಮ ಪಂಚಾಯತ್‍ನ ಸದಸ್ಯರು ಜಯಂತ ಗೌಡ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರು, ಶ್ರೀಗಣೇಶ್ ಟೆಕ್ಸೆಟೈಲ್ಸ್‍ನ ಮಾಲಕರು, ಪೂವಪ್ಪ ಟೈಲರ್, ವಿದ್ಯಾಕೇಂದ್ರದ ಸಂಚಾಲಕರಾದ ವಸಂತ ಮಾಧವ ಶ್ರೀಮಾನ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶಾಂಭವಿ ಮಾತಾಜಿ ಮತ್ತಿತ್ತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಿನ್ನಪ್ಪ ಶ್ರೀಮಾನ್ ನಿರೂಪಿಸಿ, ವಿದ್ಯಾರ್ಥಿನಿ ಕುಮಾರಿ ತ್ರಿಶಾ ಸ್ವಾಗತಿಸಿ, ಸ್ವಾತಿ ವಂದಿಸಿದಳು, ದೈಹಿಕ ಶಿಕ್ಷಕರು ಪುರುಷೋತ್ತಮ ಶ್ರೀಮಾನ್ ಮತ್ತು ಭಾಗ್ಯಶ್ರೀ ಮಾತಾಜಿ ಕ್ರೀಡಾಕೂಟ ಸಂಯೋಜಿಸಿದರು. ಕ್ರೀಡಾಕೂಟದ ನಿರ್ಣಾಯಕರಾಗಿ ಪ್ರೌಢಶಾಲೆಯ ಎಲ್ಲಾ ಶ್ರೀಮಾನ್ ಮಾತಾಜಿಯವರು ಸಹಕರಿಸಿದರು. ಇಲಾಖೆಯ ಜಿಲ್ಲಾ ಮಟ್ಟ ಹಾಗೂ ವಿದ್ಯಾಭಾರತಿ ಕ್ಷೇತ್ರ ಮಟ್ಟದಲ್ಲಿ ಎತ್ತರ ಮತ್ತು ಉದ್ಧ ಜಿಗಿತದಲ್ಲಿ ಪ್ರತಿನಿಧಿಸಿರುವ ಆದಿತ್ಯಕೃಷ್ಣ, ಇಲಾಖಾ ಮಟ್ಟದ ಮೈಸೂರು ವಿಭಾಗದ ಕಬಡ್ಡಿಯಲ್ಲಿ ಪ್ರತಿನಿಧಿಸಿದ ಶಿವಾನಂದ, ರಾಜ್ಯಮಟ್ಟದ ಸ್ಕೇಟಿಂಗ್, ಜಿಲ್ಲಾ ಮಟ್ಟದ ಬ್ಯಾಡ್‍ಮಿಟನ್‍ನಲ್ಲಿ ಪ್ರತಿನಿಧಿಸಿದ ಜಯಸೂರ್ಯ, ವಿದ್ಯಾಭಾರತಿಯ ಅಖಿಲ ಭಾರತ ಮಟ್ಟದ ಕಬಡಿಯಲ್ಲಿ ಪ್ರತಿನಿಧಿಸಿರುವ ವಿಜೇತ್ ಮತ್ತು ಕೌಶಿಕ್ ಇವರು ಕ್ರೀಡಾಜ್ಯೋತಿಯನ್ನು ತಂದು ಅತಿಥಿಗಳಿಗೆ ನೀಡಿದರು.