Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಾರ್ಷಿಕ ಸಂಭ್ರಮ ಆಚರಣೆಗೆ ಸಜ್ಜಾದ ಪುತ್ತೂರಿನ ಶ್ರೀವಿ ಕ್ರಿಯೇಷನ್ಸ್ ಪ್ರೊಡಕ್ಷನ್ ಹೌಸ್ & ಎಡಿಟಿಂಗ್ ಸ್ಟುಡಿಯೋ- ಕಹಳೆ ನ್ಯೂಸ್

ಪುತ್ತೂರು: ವೆಡ್ಡಿಂಗ್, ಪ್ರೀ ವೆಡ್ಡಿಂಗ್ ಶೂಟಿಂಗ್‌ನಲ್ಲಿ ಸಿಕ್ಕಾಪಟ್ಟೆ ಫೆಮಸ್, ಫೋಟೋ ಕ್ಲಿಕ್ಕಿಸೋದ್ರಲ್ಲಿ ಎತ್ತಿದ ಕೈ, ಪುತ್ತೂರಿನಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿರೋ ಶ್ರೀವಿ ಕ್ರಿಯೇಷನ್ಸ್ ಪ್ರೊಡಕ್ಷನ್ ಹೌಸ್ & ಎಡಿಟಿಂಗ್ ಸ್ಟುಡಿಯೋ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿ 2ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಹಿನ್ನಲೆ ಜ.14 ಮಕರ ಸಂಕ್ರಮಣದ0ದು ವಿಶ್ವಕರ್ಮ ಸಭಾಭವನ ಬೊಳ್ವಾರ್‌ನಲ್ಲಿ ಸಂಭ್ರಮಾಚಣೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳಿಗ್ಗೆ 10.00 ಗಂಟೆಗೆ ಸಂಭ್ರಮಾಚರಣೆ ನಡೆಯಲಿದ್ದು, ಜೊತೆಗೆ ನಟನಾ ತರಬೇತಿಯ ಮೊದಲ ತಂಡದವರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಲಿದೆ. ಅತಿಥಿಗಳಾಗಿ ಕಹಳೆ ವಾಹಿನಿಯ ಪ್ರಧಾನ ಸಂಪಾದಕ ಶ್ಯಾಮ ಸುದರ್ಶನ್ ಹೊಸಮೂಲೆ, ಖ್ಯಾತ ವಕೀಲ ಮಹೇಶ್ ಕಜೆ, ನಗರಸಭಾ ಸದಸ್ಯ ಜಗನ್ನಿವಾಸ್ ರಾವ್, ನಾಟಕ ಕಲಾವಿದರ ಸಂಘದ ಅಧ್ಯಕ್ಷರಾದ ಕಿಶೋರ್ ಡಿ, ನಟಿ ಚೈತ್ರ ರೈ, ಶ್ರೀರಾಮಚಂದ್ರ ಪಿ.ಯು ಕಾಲೇಜ್ ಪೆರ್ನೆಯ ಪ್ರಾಂಶುಪಾಲ ಶೇಖರ್.ರೈ ಕೆ. ಭಾಗಿಯಾಗಲಿದ್ದಾರೆ.

ವಿಶೇಷ ಆಹ್ವಾನಿತರು:
ಶ್ರೀವಿ ಕ್ರಿಯೇಷನ್ಸ್ ಪ್ರೊಡಕ್ಷನ್ ಹೌಸ್ & ಎಡಿಟಿಂಗ್ ಸ್ಟುಡಿಯೋದ, ಮೊದಲ ವರ್ಷದ ಸಂಭ್ರಮಾಚರಣೆಯನ್ನು ಇನ್ನಷ್ಟು ಇಮ್ಮಡಿಗೊಳಿಸಲು ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್ ಚಿತ್ರ ತಂಡದ ನಿರ್ಮಪಕ ಆನಂದ್ ಕುಂಪಾಳ, ನಟ ವಿಜಿ ವಿನಿತ್, ನಟ ರಾಹುಲ್ ಅಮಿನ್, ನಟಿ ಚೈತ್ರಾ ಶೆಟ್ಟಿ ಮತ್ತು ತುಳುನಾಡ ಕ್ರಶ್ ಸಮತ ಅಮಿನ್ ಆಗಮಿಸಲಿದ್ದಾರೆ

ಸಂಪರ್ಕಿಸಿ: 9164415281, 9902497239