Recent Posts

Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ ಜಮೀನು ವಿವಾದ ಕೊಲೆಯಲ್ಲಿ ಅಂತ್ಯ ; ರೆಖ್ಯಾ ಗ್ರಾಮದ ಎಲ್ಐಸಿ ಏಜೆಂಟ್, ಕೃಷಿಕ ಸಾಂತಪ್ಪ ಗೌಡ ಕೊಲೆಯಾದ ದುರ್ದೈವಿ, ಆರೋಪಿ ಪರಾರಿ‌..! – ಕಹಳೆ ನ್ಯೂಸ್

ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ನೇಲ್ಯಡ್ಕ ಸಮೀಪದ ದೇವಸ ಎಂಬಲ್ಲಿ ಜಮೀನಿನ ತಕರಾರಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರನ್ನು ಕೊಲೆಗೈದ ಘಟನೆ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಕೃಷಿಕ ಹಾಗೂ ಎಲ್ಐಸಿ ಏಜೆಂಟ್ ಆಗಿದ್ದ ಸಾಂತಪ್ಪ ಗೌಡ ದೇವಸ (40) ಎಂದು‌ ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಲೆಯಾದ ಸಾಂತಪ್ಪ ಗೌಡ ಹಾಗೂ ಜಯಚಂದ್ರ ಎಂಬವರಿಗೆ ಜಮೀನು ವಿಚಾರವಾಗಿ ಮನಸ್ತಾಪವಿದ್ದು ಆದರೆ ಇಂದು ಅದೇ ವಿಚಾರವಾಗಿ ಜಗಳವಾಗಿದ್ದು ಜಗಳ ತಾರಕಕ್ಕೆ ಹೇರಿದೆ. ಈ ವೇಳೆ ಕೋಪಗೊಂಡ ‌ಆರೋಪಿ ಜಯಚಂದ್ರ ಹರಿತವಾದ ಕತ್ತಿಯಿಂದ ಸಾಂತಪ್ಪ ಗೌಡ ಅವರ ಮೇಲೆ‌ ಹಲ್ಲೆ ನಡೆಸಿದ್ದು, ಕತ್ತಿ ಬೀಸಿದ ಏಟಿಗೆ‌ ಸಾಂತಪ್ಪ ಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಂತಪ್ಪ ಅವರು ಕೊಲೆಯಾಗುತ್ತಲೇ ಆರೋಪಿ ಜಯಚಂದ್ರ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಧರ್ಮಸ್ಥಳ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು ತನಿಖೆ ನಡೆಸಿದ್ದಾರೆ. ಮೃತ ದೇಹವನ್ನು ಪೋಸ್ಟ್ ಮಾರ್ಟಂ ಗೆ ರವಾನಿಸಲಾಗುವುದು ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ…