Recent Posts

Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಗುರುವಾಯನಕೆರೆ ಧಾರ್ಮಿಕ ಶ್ರದ್ಧಾ ಕೇಂದ್ರದ ಸ್ವಚ್ಛತಾ ಕಾರ್ಯಕ್ರಮ –ಕಹಳೆ ನ್ಯೂಸ್

ಮೋಗ್ರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯದ ಮೋಗ್ರು ಒಕ್ಕೂಟ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ಘಟಕದ ವತಿಯಿಂದ ಮೂವರು ದೈವಗಳ ದೇವಸ್ಥಾನ ಮುಗೇರಡ್ಕ ಮೋಗ್ರು ಇಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಹಾಗೂ ಜಾತ್ರೋತ್ಸವದ ಪ್ರಯುಕ್ತ ಸ್ವಚ್ಛತಾ ಶ್ರಮದಾನವನ್ನು ನಡೆಸಲಾಯಿತು.

ದೈವಸ್ಥಾನದ ಸುತ್ತಲ ಆವರಣ ಹಾಗೂ ಒಳಾಂಗಣವನ್ನು ಸ್ವಚ್ಛಗೊಳಿಸಲಾಯಿತು. ಶ್ರಮದಾನದ ಸಂದರ್ಭದಲ್ಲಿ ಬೆಳಗ್ಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ದೈವಸ್ಥಾನದ ವತಿಯಿಂದ ಕಲ್ಪಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಡಳಿತ ಮಂಡಳಿಯ ಶ್ರೀ ಮನೋಹರ್ ಅಂತರ ಹಾಗೂ ಚಂದ್ರಹಾಸ ದೇವಸ್ಯ ಶ್ರಮದಾನದ ಸ್ಥಳದಲ್ಲಿದ್ದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕಣಿಯೂರು ವಲಯದ ಮೋಗ್ರು ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು, ವಿಪತ್ತು ನಿರ್ವಹಣೆ ಘಟಕದ ಸಂಯೋಜಕಿ ಹಾಗೂ ಸೇವಾಪ್ರತಿನಿಧಿ ಚಂದ್ರಕಲಾ, ಸ್ವಯಂ ಸೇವಕರಾದ ವಿನಯಚಂದ್ರ ಮೋಗ್ರು, ಸುಂದರ ಪೈರೋಟ್ಟು ಹಾಗೂ ಊರವರು ಶ್ರಮದಾನದಲ್ಲಿ ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು