Recent Posts

Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಶಿವಾಜಿ ಬಳಗ ರಿ. ಶ್ರೀ ರಾಮನಗರ ಮಧ್ವ ಸಾರಥ್ಯದಲ್ಲಿ ಬೊಳ್ಳಿಮಾರ‍್ದ ಉಳ್ಳಾಯೆ ತುಳು ಭಕ್ತಿಗೀತೆ ಬಿಡುಗಡೆ- ಕಹಳೆ ನ್ಯೂಸ್

ಶ್ರೀ ಆದಿಶಕ್ತಿ ಬೊಳ್ಳಿಮಾರು ಶ್ರೀ ಕೊರಗಜ್ಜ ಕ್ಷೇತ್ರ ಬೊಳ್ಳಿಮಾರಿನಲ್ಲಿ ಇಂದು ಕೊರಗಜ್ಜ ದೈವದ ತುಳು ಭಕ್ತಿಗೀತೆ ಬೊಳ್ಳಿಮರ‍್ದ ಉಳ್ಳಾಯೆ ಬಿಡುಗಡೆಗೊಂಡಿದೆ. ಶಿವಾಜಿ ಬಳಗ ರಿ. ಶ್ರೀ ರಾಮನಗರ ಮಧ್ವ ಇವರ ಸಾರಥ್ಯದಲ್ಲಿ ಮೂಡಿಬಂದ ಈ ಭಕ್ತಿಗೀತೆಯನ್ನು ಬೊಳ್ಳಿಮಾರು ಕ್ಷೇತ್ರದ ಧರ್ಮದರ್ಶಿ ವಿಜಯ್ ಸಾಲ್ಯಾನ್ ಅವರು ಬಿಡುಗಡೆಗೊಳಿಸಿದ್ದಾರೆ.

ಕಿಶೋರ್ ಕುಮಾರ್ ಪಂಜಕುಡೆಲ್ ಕರಾಯ ಅವರ ನಿರ್ಮಾಣದಲ್ಲಿ, ಧನುಷ್ ಮದ್ವ ಇವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಭಕ್ತಿಗೀತೆಗೆ ಕಲಾವತಿ ದಯಾನಂದ್ ಉಡುಪಿ ಇವರು ಅಧ್ಭುತ ಧ್ವನಿ ನೀಡಿದ್ದಾರೆ. ಶಿವರಾಜ್ ಗಟ್ಟಿ ಪೆರಿಯಾವು ಅವರ ಸಾಹಿತ್ಯಕ್ಕೆ, ದೇಯಿಬೈದೆತಿ ಚಲನ ಚಿತ್ರ ಖ್ಯಾತಿಯ ಸೂರ್ಯೋದಯ ಪರಂಪಳ್ಳಿ ರಾಗ ಸಂಯೋಜನೆ ಮಾಡಿದ್ದು, ಭಾಸ್ಕರ್ ರಾವ್ ಬಿ.ಸಿ ರೋಡ್ ಸಂಗೀತ ನೀಡಿದ್ದಾರೆ. ಇನ್ನು ಇದೇ ವೇಳೆ ಅಥಿತಿಗಳನ್ನು, ಭಕ್ತಿಗೀತೆ ಆಲ್ಭಂ ಸಾಂಗ್ ಗೆ ಸಹಕಾರ ನೀಡಿದವರನ್ನು ಗೌರವಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ದೇಯಿ ಬೈದೆತಿ ತುಳು ಚಲನಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ, ದೇಯಿ ಬೈದೆತಿ ಚಲನಚಿತ್ರದ ಗಾಯಕಿ ಕಲಾವತಿ ದಯಾನಂದ್ ಉಡುಪಿ, ಚಲನಚಿತ್ರ ಸಂಗೀತ ನಿರ್ದೇಶಕ ಭಾಸ್ಕರ್ ರಾವ್ ಬಿ.ಸಿ ರೋಡ್, ಪದ್ಮಶೇಖರ್ ಜೈನ್ ಬಳ್ಳೋಡಿಗುತ್ತು, ಶಿವಾಜಿ ಬಳಗ (ರಿ) ಶ್ರೀರಾಮ ನಗರ ಮದ್ವ ಇದರ ಗೌರವಾಧ್ಯಕ್ಷರಾದ ಪ್ರಕಾಶ್ ಮದ್ವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು