Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಮಹಿಳೆಯ ಮೇಲೆ ಹಲ್ಲೆ ಪ್ರಕರಣ : ಮುಕೈಯ ಅಬ್ದುಲ್ ಮುನಾಫ್ ವಿರುದ್ಧ ಗಡಿಪಾರಿಗೆ ದೂರು- ಕಹಳೆ ನ್ಯೂಸ್

ಪುತ್ತೂರು : ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ಮುಕ್ವೆ ನಿವಾಸಿ ಅಬ್ದುಲ್ ಮುನಾಫ್ ಎಂಬಾತನ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಪುತ್ತೂರು : ಕಸಬಾ ಆಶ್ರಯ ಕಾಲನಿಯ ಶ್ರೀಮತಿ ವಿನಯ ಎಂಬವರು ಚಂದ್ರಶೇಖರ ಎಂಬವರ ಜೊತೆ ಶುಂಠಿ ಹಾಗೂ ಬಾಳೆ ಕೃಷಿ ಮಾಡುವ ಸಲುವಾಗಿ ಲೀಸ್‌ ಗೆ ಪಡೆದುಕೊಂಡ, ಕಡಬ ತಾಲೂಕಿನ ಪುಣ್ಚಪ್ಪಾಡಿ ಗ್ರಾಮದ ಆನೆಮಜಲು ಎಂಬಲ್ಲಿನ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಅಬ್ದುಲ್ ಮುನಾಫ್ ಇಬ್ಬರು ಅಪರಿಚಿತ ವ್ಯಕ್ತಿಗಳೊಂದಿಗೆ ಬಂದು “ಜಮೀನು ನನಗೆ ಸಂಬ0ಧಿಸಿದ್ದು, ನನ್ನ ಸ್ವಾಧೀನದಲ್ಲಿ ಇದೆ. ಇಲ್ಲಿ ನೀವು ಯಾಕೆ ಕೆಲಸಮಾಡುತ್ತೀರಿ” ಎಂದು ಆಕ್ಷೇಪಿಸಿ ಜಾತಿ ನಿಂದನೆಗೈದು ಅವಾಚ್ಯವಾಗಿ ಬೈದು ಮೈ ಮೇಲೆ ಕೈ ಹಾಕಿ ಬೆನ್ನಿಗೆ ಹಲ್ಲೆ ನಡೆಸಿ “ಮುಂದಕ್ಕೆ ನೋಡಿಕೊಳ್ಳುತ್ತೇನೆ, ಜೀವ ಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಬ್ದುಲ್ ಮುನಾಫ್ ಪುಣ್ಚಪ್ಪಾಡಿ ಗ್ರಾಮದ ಒಂದು ಜೈನ ಸಮುದಾಯದ ಪ್ರತಿಷ್ಠಿತ ಮನೆಯ ವ್ಯವಹಾರದಲ್ಲಿ ತಲೆಹಾಕುತ್ತಿರುವುದಾಗಿ ಆರೋಪ ವ್ಯಕ್ತವಾಗಿದ್ದು, ಮುನಾಫ್‌ನ ಅಕ್ರಮ ಚಟುವಟಿಕೆಗಳಿಗೆ ತಡೆಯೊಡ್ಡುವ ಹಾಗೂ ಕೋಮು ಗಲಭೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಈ ವ್ಯಕ್ತಿಯನ್ನು ಈ ಎರಡೂ ಗ್ರಾಮಗಳಿಗೆ ಭೇಟಿ ಕೊಡದ ಹಾಗೆ ನಿರ್ಬಂಧಿತ ಆಜ್ಞೆಯನ್ನು ಅಥವಾ ಗಡಿಪಾರು ಆದೇಶವನ್ನು ನೀಡುವಂತೆ ಸವಣೂರು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು