Saturday, September 21, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಉದ್ಯಮಿಗೆ ಕರೆ ಮಾಡಿ 3 ಲಕ್ಷ ಬೇಡಿಕೆ ಇಟ್ಟ ಖದೀಮರು – ಖಾಕಿ ಪಡೆಯ ಕಾರ್ಯಚರಣೆಯಿಂದ ಆರೋಪಿಗಳು ಅಂದರ್ – ಕಹಳೆ ನ್ಯೂಸ್

ಉದ್ಯಮಿಯೊಬ್ಬರಿಗೆ ಕರೆ ಮಾಡಿ 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು, ಬೆದರಿಕೆ ಹಾಕಿದ ಘಟನೆ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿಯು ವಿವಿದ ಮೊಬೈಲ್‍ಗಳಿಂದ ಉದ್ಯಮಿಗೆ ಕರೆ ಮಾಡಿ ‘ಯಾರೋ ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾನೆ, ಅವನನ್ನು ಬಿಡಿಸಲು ಹಣ ಬೇಕು, ಅವನನ್ನು ಬಿಡಿಸಲು 3 ಲಕ್ಷವಾಗಲಿದೆ. ನೀನು 2 ದಿನದ ಒಳಗೆ 1,50,000/- ಹಣ ರೆಡಿ ಮಾಡಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಇಲ್ಲದಿದ್ದರೆ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ, ನಿನ್ನ ಮಕ್ಕಳ ಜೀವನ ಹಾಳು ಮಾಡುತ್ತೇನೆ, ಈ ವಿಚಾರವನ್ನು ಇತರರಲ್ಲಿ ತಿಳಿಸಿದರೆ ನಿಮ್ಮ ಹೆಣ ಖಂಡಿತ ಬೀಳುತ್ತದೆ, ನೀನು ಜೀವಂತ ಬದುಕಲು ಸಾಧ್ಯವಿಲ್ಲ’ ಎಂದು ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಉದ್ಯಮಿಯೊಬ್ಬರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರನ್ನ ನೀಡಿದ್ರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಕಾರ್ಯಚರಣೆ ನಡೆಸಿ ಬ್ಯಾಕ್ ಮೇಲ್ ಮಾಡಿದ 2 ಆರೋಪಗಳನ್ನ ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮ, ವಾನ ಅಲ್ಲಡ್ಕ ಮಸೀದಿ ಬಳಿಯ ನಿವಾಸಿ ಕಲಂದರ್ ಶರೀಫ್ ಶಾಫಿ ಹಾಗೂ ಮಂಗಳೂರು ತಾಲೂಕಿನ ಮಂಜನಾಡಿ ಗ್ರಾಮದ ವಾಸ ಕುಚ್ಚಿಗುಡ್ಡ ನಿವಾಸಿ ಹಸನಬ್ಬ ಕಹಸನ್ ಬಂದೀತ ಆರೋಪಿಗಳು. ಉದ್ಯಮಿಯಿಂದ ವಸೂಲಿ ಮಾಡಿದ ರೂ 50.000/- ಹಣ ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ಮೊಬೈಲ್‍ಗಳನ್ನು ಪೊಲೀಸರು ವಶವಡಿಸಿಕೊಂಡಿದ್ದಾರೆ.

ಆರೋಪಿತರ ಪೈಕಿ ಕಲಂದರ್ ಶರೀಫ್‍ ಶಾಫಿ ಈತನ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ಈ ಹಿಂದೆಯೇ ದಾಖಲಾಗಿತ್ತು.

ಹಸನಬ್ಬ ಹಸನ್ ಅಟ್ಟು ಆಚುನ್ ಈತನು ಮಂಗಳೂರು ನಗರದ ಕೋಣಾಜೆ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದು, ಅಲ್ಲದೆ ಈತನ ಮೇಲೆ ಕಂಕನಾಡಿ ಮತ್ತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.

ಇನ್ನು ಈ ಕಾರ್ಯಾಚರಣೆಯಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನಾವಾಣೆ ಮತ್ತು ಪುತ್ತೂರು ಉಪ ವಿಭಾಗ ಪೊಲೀಸ್ ಉಪಾಧೀಕ್ಷಕರಾದ ಡಾ| ಗಾನ ಪಿ ಕುಮಾರ್ ರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿರವರ ನೇತೃತ್ವದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರುಗಳಾದ ಉದಯರವಿ ಎಂಖ್ಯೆ, ಆಮೀನ್ ನಾಟ್ ಎಂ ಅತ್ತಾರ್, ಹಾಗೂ ಸಿಬ್ಬಂದಿಗಳಾದ ಕೃಷ್ಣಪ್ಪ, ದೇವರಾಜ್, ಅದ್ರಾಮ, ಪ್ರವೀಣ್ ರೈ, ಹರ್ಷಿತ್, ಗಾಯತ್ರಿ, ವಿನೋದ್, ಅವರು ಭಾಗವಹಿಸಿದ್ದಾರೆ. ಜಿಲ್ಲಾ ಗಣಕಯಂತ್ರ ವಿಭಾಗದ ಸಂಪಕ್, ದಿವಾಕರ್ ಅವರು ಸಹಕರಿಸಿರುತ್ತಾರೆ.