Recent Posts

Monday, January 20, 2025
ಸುದ್ದಿ

ಚೆಲ್ಯಡ್ಕ ರಸ್ತೆಯಲ್ಲಿ ವಿದ್ಯುತ್ ಲೈನ್‌ಗೆ ವಾಲಿ ನಿಂತ ಮರ – ಮರ ತೆರವುಗೊಳಿಸುವಂತೆ ಸೂಚಿಸಿದ್ರು ಅರಣ್ಯ ಇಲಾಖೆಯಿಂದ ನಿರ್ಲಕ್ಷ್ಯ –ಕಹಳೆ ನ್ಯೂಸ್

ಸಾರ್ವಜನಿಕ ರಸ್ತೆಯಲ್ಲಿ ಮರವೊಂದು ವಾಲಿ ನಿಂತಿದ್ದು, ರಸ್ತೆಗೆ ಉರುಳಿ ಬೀಳುವ ಸ್ಧಿತಿ ಸೆಂಟ್ಯಾರ್ ಬಳಿಯ ಚೆಲ್ಯಡ್ಕ ರಸ್ತೆಯಲ್ಲಿ ನಿರ್ಮಾಣವಾಗಿದೆ. ಇಲ್ಲಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ಇಂದು ಮದ್ಯಾಹ್ನದ ಹೊತ್ತಿಗೆ ರಸ್ತೆ ಬದಿಯಲ್ಲಿರುವ ಮರವೊಂದು ವಿದ್ಯುತ್ ಲೈನ್ ಮೇಲೆ ವಾಲಿ ನಿಂತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನ ಗಮನಿಸಿದ ಸ್ಧಳಿಯರು ಹಾಗೂ ವಾಹನ ಸವಾರರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಆದ್ರೆ ೨ ಗಂಟೆಗಳು ಕಳೆದರು ಅರಣ್ಯ ಇಲಾಖೆ ಸಿಬ್ಬಂಧಿಗಳು ಸ್ಧಳಕ್ಕೆ ಬಾರದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಹಲವಾರು ವಾಹನ ಸವಾರರು ಭಯದಿಂದಲೇ ಸಾಗುವ ಸ್ಧಿತಿ ನಿರ್ಮಾಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದಷ್ಟು ಬೇಗ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.