ಮಂಗಳೂರು : ಮಂಗಳೂರಿನ ಸೌತ್ ಕೆನರಾ ಸಲಫಿ ಸಂಘಟನೆಯ ಮುಖಂಡ ಇಸ್ಮಾಯಿಲ್ ಶಾಫಿ
ಎಂಬುವರ ಬ್ಯಾರಿ ಭಾಷೆಯಲ್ಲಿದ್ದ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಚರ್ಚೆ, ವಿವಾದ ಸೃಷ್ಟಿಸಿದೆ. ಆಡಿಯೋದಲ್ಲಿ ಮಂಗಳೂರಿನ ಯುವಕರ ಗುಂಪೊಂದು ಸಿದ್ಧಾಂತವೊಂದರಿಂದ ಪ್ರಭಾವಿತರಾಗಿ ಈ ರೀತಿ ಸಂಘಟನೆ ಮಾಡುತ್ತಿದ್ದಾರೆ. ಐಸಿಸ್ ಮಾದರಿಯ ಕಪ್ಪು ಮತ್ತು ಕಂದು ಬಣ್ಣದ ಗೌನ್ ಹಾಕುತ್ತಿರುವ ಈ ಯುವಕರಲ್ಲಿ ಎಂಜಿನಿಯರ್ ಓದಿದ ಯುವಕರೂ ಇದ್ದಾರೆ ಎಂದು ಆಡಿಯೋದಲ್ಲಿ ಹೇಳಲಾಗಿದೆ.
ಸಲಫೀ ದಮ್ಮಾಜ್ ಎಂಬ ತೀವ್ರವಾದಿ ಸಿದ್ಧಾಂತದಿಂದ ಪ್ರಭಾವಿತರಾಗಿ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಸುತ್ತ ಮುತ್ತ ಕಾರ್ಯಾಚರಣೆ ನಡೆಸುತ್ತಿರುವ ಯುವಕರ ಗುಂಪೊಂದು ವಿದ್ಯಾರ್ಥಿಗಳ ಬ್ರೈನ್’ವಾಶ್ ಮಾಡುತ್ತಿದೆ. ಐಸಿಸ್ ಮಾದರಿಯಲ್ಲೇ ವಸ್ತ್ರ ಧರಿಸುವ ಇವರು ಕಪ್ಪು ಅಥವಾ ಕಂದು ಬಣ್ಣದ ಪೈಜಾಮಾ ಧರಿಸುತ್ತಾರೆ. ತಲೆಗೆ ಮುಂಡಾಸು ಅಥವಾ ಟೊಪ್ಪಿ ತೊಡುತ್ತಾರೆ. ಬಿ.ಸಿ.ರೋಡ್, ಕಲ್ಲಡ್ಕ, ಮಾರಿಪಳ್ಳ, ಉಳ್ಳಾಲದಲ್ಲಿ ಇಂಥ ಯುವಕರ ಗುಂಪು ಇದೆ ಎಂದು ಆಡಿಯೋದಲ್ಲಿ ಇಸ್ಮಾಯಿಲ್ ಹೇಳಿದ್ದಾರೆ.
ಐಸಿಸ್ ಮಾದರಿಯಲ್ಲೇ ಯುವಕರ ಸಂಘಟನೆಯೊಂದು ಕಾರ್ಯಾಚರಿಸುತ್ತಿರುವ ಬಗೆಗಿನ ಆಪಾದಿತ ವಿಡಿಯೋ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದ್ದು, ಅದರ ಆಡಿಯೋವನ್ನು ಪಡೆದುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಕಹಳೆ ನ್ಯೂಸ್ ಗೆ ಹೇಳಿಕೆ ನೀಡಿದ್ದಾರೆ .
ಅಲ್ಲದೇ ಗಮನಿಸಬೇಕಾದ ಅಂಶ ವೆಂದರೆ ಈ ಎಲ್ಲಾ ಅಕ್ರಮಗಳು ನಡೆಯುತ್ತಿರುವುದು ಸಚಿವ ರಮಾನಾಥ ರೈ ಮತ್ತು ಯು.ಟಿ. ಕಾದರ್ ಕ್ಷೇತ್ರಗಳಲ್ಲಿ. ಸವಚಿರ ಸ್ವಕ್ಷೇತ್ರದಲ್ಲಿ ಇಂತಹ ಭಯೋತ್ಪದಕ ಚಟುವಟಿಕೆಗಳು ನಡೆಯುತ್ತಿದ್ದರೂ ಸುಮ್ಮನ್ನಿರುತ್ತಾರೆ ಸಚಿವರು ಎಂದರೆ ಪರೋಕ್ಷವಾಗಿ ಸಚಿವರ ಕುಮ್ಮಕ್ಕು ಇವರಿಗೆ ಇರಬಹುದೇ ಎಂಬುದು ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿರುವ ವಿಷಯ ಎಂಬುದನ್ನು ಅಲ್ಲಗಳೆಯುವಂತಿಲ್ಲ.