Recent Posts

Monday, January 20, 2025
ಸುದ್ದಿ

ಹಾವೇರಿ : ಲಾರಿ- ಎರಡು ಕಾರುಗಳ ಮಧ್ಯೆ ಬೀಕರ ರಸ್ತೆ ಅಪಘಾತ ದೇವರ ಒಂದೇ ಕುಟುಂಬದ ನಾಲ್ವರು ‘ದುರಂತ ಅಂತ್ಯ’- ಕಹಳೆ ನ್ಯೂಸ್

ಹಾವೇರಿ: ಮೆಕ್ಕೇಜೋಳ ತುಂಬಿಕೊಂಡು ಸಾಗುತ್ತಿದ್ದಂತ ಲಾರಿಯೊಂದು 2 ಕಾರುಗಳಿಗೆ ಡಿಕ್ಕಿಯೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಘಟನೆ ಹಾವೇರಿಯ ರಟ್ಟಿಹಳ್ಳಿಯಲ್ಲಿ ನಡೆದಿದೆ.

ರಟ್ಟಿಹಳ್ಳಿ ತಾಲೂಕಿನ ಕಡೂರಿನಲ್ಲಿ ನಿನ್ನೆ ಮೆಕ್ಕೆಜೋಳ ತುಂಬಿದ್ದಂತ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ 2 ಕಾರುಗಳಿಗೆ ಡಿಕ್ಕಿಯಾಗಿದ್ದು, ಕಾರಿನಲ್ಲಿದ ಇಬ್ಬರು ಮಕ್ಕಳು ಸೇರಿ, ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

2 ಕಾರಿನಲ್ಲಿದ್ದಂತ ಎಲ್ಲರೂ ಒಂದೇ ಕುಟುಂಬದವರು ಎನ್ನಲಾಗುತ್ತಿದೆ. ಮೃತರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ದೇವಸ್ಥಾನಕ್ಕೆ ತೆರಳಿ, ಊರಿಗೆ ವಾಪಾಸ್ ಆಗುತ್ತಿದ್ದರು ಎನ್ನಲಾಗಿದೆ. ಈ ಅಪಘಾತದಲ್ಲಿ ಸಾವನ್ನಪ್ಪಿದವರನ್ನು ಶಂಕರಪ್ಪ ನಾಗಪ್ಪ ಗೌಡರ ( 35 ), ಪುನೀತ್ ಹರಮುಚಡಿ (12), ಶಾಂತಮ್ಮ ಹೊಟ್ಟಿಗೌಡರ ಹಾಗೂ ರಘು ಹೊಟ್ಟಿಗೌಡರ (14) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ಅಪಘಾತದಲ್ಲಿ ಗಾಯಗೊಂಡಿರುವವರನ್ನು ರಟ್ಟೀಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಈ ಬಗ್ಗೆ ರಟ್ಟೀಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.