Saturday, September 21, 2024
ಸುದ್ದಿ

ಬೆಳಗಾವಿ: ರುಬೆಲ್ಲಾ ಚುಚ್ಚುಮದ್ದು ಪಡೆದ ಮೂರು ಕಂದಮ್ಮಗಳ ನಿಗೂಢ ಸಾವು- ಕಹಳೆ ನ್ಯೂಸ್

ಬೆಳಗಾವಿ: ಮೈಲಿಬೇನೆ ನಿಯಂತ್ರಣಕ್ಕಾಗಿ ರುಬೆಲ್ಲಾ ಚುಚ್ಚುಮದ್ದು ನೀಡಲಾಗಿದ್ದ ಮೂವರು ಮಕ್ಕಳು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ ಪವಿತ್ರಾ ಹುಲಗೂರ (13 ತಿಂಗಳು), ಮಧು ಉಮೇಶ ಕುರಗುಂದಿ (14 ತಿಂಗಳು) ಹಾಗೂ ರಾಮದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಚೇತನ (15 ತಿಂಗಳು) ಮೃತ ಕಂದಮ್ಮಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಜ. 13ರಂದು ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಒಟ್ಟು 17 ಮಕ್ಕಳಿಗೆ ಮೈಲಿಬೇನೆ ನಿಯಂತ್ರಣದ ರುಬೆಲ್ಲಾ ಚುಚ್ಚುಮದ್ದು ನೀಡಿದ್ದರು. ಆ ಬಳಿಕ ನಾಲ್ಕು ಮಕ್ಕಳು ಅಸ್ವಸ್ಥಗೊಂಡಿದ್ದವು.

ಜಾಹೀರಾತು

ಸಾಂದರ್ಭಿಕ ಚಿತ್ರ

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಒಂದು ಮಗು ಮೃತಪಟ್ಟಿದ್ದು, ಮೂವರು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಭಾನುವಾರ 2 ಮಕ್ಕಳು ಮೃತಪಟ್ಟರೆ, ಇನ್ನೊಂದು ಮಗು ಸಾವು ಬದುಕಿನ ಮಧ್ಯೆ ಹೋರಾಡುತ್ತಿದೆ.

2 ಗಂಟೆಯಲ್ಲೇ ರಿಯಾಕ್ಷನ್: ರುಬೆಲ್ಲಾ ಲಸಿಕೆ ಪಡೆದ 2 ಗಂಟೆಯಲ್ಲೇ ಅಡ್ಡ ಪರಿಣಾಮವಾಗಿದೆ. ಲಸಿಕೆ, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮಕ್ಕಳ ಮರಣಕ್ಕೆ ಕಾರಣ ತಿಳಿಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಎಸ್.ವಿ. ಮುನ್ಯಾಳ ಪ್ರತಿಕ್ರಿಯೆ ನೀಡಿದ್ದು, ಈ ಪ್ರಕರಣದಲ್ಲಿ ಕ್ಲಿನಿಕಲ್ ಎಕ್ಸಾಮಿನೇಷನ್ ಮಾಡಬೇಕಾಗುತ್ತದೆ. ಮಾಡುತ್ತೇವೆ. ಪೋಸ್ಟ್ ಮಾಟರ್ಂ ಮಾಡಿದ ಬಳಿಕ ಸ್ಪಷ್ಟ ಕಾರಣ ಗೊತ್ತಾಗಲಿದೆ. ಲಸಿಕೆಯಿಂದಲೇ ಸಾವಾಗಿದೆಯೇ ಎಂಬ ವಿಚಾರ ನಂತರವಷ್ಟೇ ತಿಳಿಯುತ್ತದೆ. ಎಂದು ಹೇಳಿದರು.

ಮೂರು ಮಕ್ಕಳು ನಿಗೂಢವಾಗಿ ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಸಂಪೂರ್ಣ ವರದಿ ನೀಡುವಂತೆ ಬೆಳಗಾವಿ ಡಿಎಚ್‍ಒಗೆ ಕರೆ ಮಾಡಿದ ಆರೋಗ್ಯ ಸಚಿವ ಸುಧಾಕರ್, ಲಸಿಕೆಯಿಂದ ಮಕ್ಕಳು ಮೃತಪಟ್ಟಿವೆಯೇ? ಅಥವಾ ಇಲಾಖೆ ಸಿಬ್ಬಂದಿಯ ಬೇಜವಾಬ್ದಾರಿ ಇದೆಯೇ..?? ಎಂಬ ಬಗ್ಗೆ ವಿಚಾರಿಸಿದ್ದಾರೆ. ಜತೆಗೆ ಈ ಪ್ರಕರಣದ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.